Actor Suriya : ರಾಜ ಮೌಳಿ ನಿರ್ದೇಶನದ ಬಾಹುಬಲಿ (Bahubali) ಸಿನಿಮಾ ಇಡೀ ದೇಶದಲ್ಲಿ ಹೊಸದೊಂದು ಟ್ರೆಂಡ್ ಅನ್ನು ಸೃಷ್ಟಿ ಮಾಡಿತು. ಇದಾದ ನಂತರ ಕೆಜಿಎಫ್ ಮತ್ತು ಕಾಂತರಾ ಸಿನಿಮಾಗಳು ಪ್ಯಾನ್ ಇಂಡಿಯಾ ಟ್ರೆಂಡ್ ಅನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಿನಿಮಾಗಳ ಮೂಲಕ ಉತ್ತರ ಭಾರತದವರು ಸಹಾ ಸೌತ್ ಸಿನಿಮಾಗಳ ಕಡೆಗೆ ಮೊದಲಿಗಿಂತ ಹೆಚ್ಚು ಆಸಕ್ತಿಯನ್ನು ತೋರಿಸಲು ಪ್ರಾರಂಭಿಸಿದರು. ಪರಿಣಾಮವಾಗಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ಸಿನಿಮಾಗಳಿಗೆ ಸ್ಪರ್ಧೆ ನೀಡುತ್ತಾ ಗೆಲುವು ಪಡೆದುಕೊಂಡವು.
ಇದೇ ಮಾತನ್ನು ತಮಿಳು ಸಿನಿಮಾಗಳ ಸ್ಟಾರ್ ನಟ ಸೂರ್ಯ (Actor Suriya) ಅವರು ಕೂಡಾ ಹೇಳಿದ್ದಾರೆ. ನಟ ಸೂರ್ಯ ಅವರು ನಾಯಕನಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕಂಗುವಾ (Kanguva) ನವೆಂಬರ್ 14ರಂದು ತೆರೆಗೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ತಮ್ಮ ಹೊಸ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಅದರ ಭಾಗವಾಗಿಯೇ ಬೆಂಗಳೂರಿಗೆ ಕೂಡಾ ಸಿನಿಮಾ ಪ್ರಚಾರಕ್ಕಾಗಿ ಆಗಮಿಸಿದ್ದರು.
ಈ ವೇಳೆ ನಟ ಕಂಗುವಾ ಸಿನಿಮಾದಲ್ಲಿ ನಾವು ಹೊಸ ಜಗತ್ತನ್ನು ತೋರಿಸಿದ್ದೇವೆ. 700 ವರ್ಷಗಳ ಹಿಂದಿನ ಕಥೆಯನ್ನು ಹೇಳುತ್ತಿದ್ದು, ಒಳ್ಳೆಯ ಕಂಟೆಂಟ್ ಇದ್ದಾಗ ಜನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿಂದಲೇ ಕಂಗುವಾ ಸಿನಿಮಾ ಮಾಡಿದ್ದೇವೆ. ಈ ಸಿನಿಮಾವನ್ನ 3D ಮತ್ತು 4Dಯಲ್ಲೂ ಬಿಡುಗಡೆ ಮಾಡುತ್ತೇವೆ ಎಂದು ಸೂರ್ಯ ತಿಳಿಸಿದ್ದಾರೆ.
ಈ ವೇಳೆ ಸೂರ್ಯ ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಆರಂಭವಾಯಿತು, ಆ ಕಾನ್ಸೆಪ್ಟನ್ನು ಕೆಜಿಎಫ್ ಮತ್ತು ಕಾಂತಾರಾ (Kantara) ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋದವು ಎಂದು ಮೆಚ್ಚುಗೆಯ ಮಾತುಗಳನ್ನು ನೀಡಿದ್ದಾರೆ. ಸುದ್ದಿಗೋಷ್ಠಿಗೆ ತಡವಾಗಿ ಬಂದಿದ್ದಕ್ಕೆ ಸೂರ್ಯ ಅವರು ಕ್ಷಮೆ ಕೇಳಿದ್ದಾರೆ. ಬೆಂಗಳೂರು ಅಂದರೆ ಅಭಿಮಾನಿಗಳು ಸಿನಿಮಾ ಸೆಲೆಬ್ರೇಟ್ ಮಾಡುವುದು ನೆನಪಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ.
Rashmika Mandanna: ನಯನತಾರ ಓಟಕ್ಕೆ ಬ್ರೇಕ್ ಹಾಕಿದ ರಶ್ಮಿಕಾ, ಖುಷಿಯಿಂದ ಕುಣಿದ ಫ್ಯಾನ್ಸ್