Namratha Gowda: ನಮ್ರತಾ ಗೌಡ ಹೊಸ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ; ಬಿಗ್ ಬಾಸ್ ನಂತ್ರ ನಟಿ ಏನ್ಮಾಡ್ತಿದ್ದಾರೆ

Written by Soma Shekar

Published on:

---Join Our Channel---

Namratha Gowda: ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada) ಸ್ಪರ್ಧಿಯಾಗಿ ಸದ್ದು ಮಾಡಿದವರು ನಟಿ ನಮ್ರತಾ ಗೌಡ (Namratha Gowda). ಬಿಗ್ ಬಾಸ್ ಗೆ ಬರುವ ಮೊದಲು ನಟಿ ಕಿರುತೆರೆಯಲ್ಲಿ ನಾಗಿಣಿ ಸೀರಿಯಲ್ ಮೂಲಕ ಎಲ್ಲರನ್ನೂ ರಂಜಿಸಿದ್ದರು. ನಾಗಿಣಿ ಸೀರಿಯಲ್ ಮುಗಿದ ನಂತರ ನಮ್ರತಾ ಅವರು ಬೇರೆ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಬಿಗ್ ಬಾಸ್ ನ ಸೀಸನ್ ಹತ್ತರಲ್ಲಿ ನಮ್ರತಾ ಫಿನಾಲೆ ವಾರದ ವರೆಗೆ ಬಂದು ಕೊನೆಯ ಹಂತದಲ್ಲಿ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದರು. ಬಿಗ್ ಬಾಸ್ ಮೂಲಕ ನಟಿಯ ಜನಪ್ರಿಯತೆ ಇನ್ನಷ್ಟು ಹೆಚ್ಚಿತು ಎನ್ನುವುದರಲ್ಲಿ ಡೌಟೇ ಇಲ್ಲ.

ಬಿಗ್ ಬಾಸ್ ಮುಗಿದ ಮೇಲೆ ನಮ್ರತಾ ಅವರು ಯಾವುದೇ ಸಿನಿಮಾ ಅಥವಾ ಸೀರಿಯಲ್ ನಲ್ಲಿ ಕಾಣಿಸಿಕೊಂಡಿಲ್ಲ. ಬಿಗ್ ಬಾಸ್ ಮುಗಿದು ಆರು ತಿಂಗಳ ಕಾಲ ಕಳೆದರೂ ನಟಿಯಿಂದ ಹೊಸ ಅಪ್ಡೇಟ್ ಇಲ್ಲದೇ ಇರುವುದನ್ನು ನೋಡಿ ಅಭಿಮಾನಿಗಳು ಬೇಸರದಲ್ಲಿದ್ದಾರೆ.

ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳು ನಟಿಯ ಮುಂದಿನ ಪ್ರಾಜೆಕ್ಟ್ ಯಾವಾಗ ಎಂದು ಪ್ರಶ್ನೆ ಮಾಡುವುದು ಸಾಮಾನ್ಯವಾಗಿದೆ. ನಟಿಯನ್ನು ಮತ್ತೆ ಕಿರುತೆರೆ ಅಥವಾ ಹಿರಿತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ನಟಿ ಹೊಸ ಪ್ರಾಜೆಕ್ಟ್ ಬಗ್ಗೆ ಅಪ್ಡೇಟ್ ನೀಡಿಲ್ಲವಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಡ್ಯಾನ್ಸ್ ವೀಡಿಯೋಗಳ ಮೂಲಕ ಸಖತ್ ಸುದ್ದಿಯಾಗುತ್ತಾ, ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಂದವಾದ ಫೋಟೋ ಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದಾರೆ ನಮ್ರತಾ. ಬಿಗ್ ಬಾಸ್ ನಂತ್ರ ನಟಿ ಹೊಸ ಪ್ರಾಜೆಕ್ಟ್ ಯಾವಾಗ ಅನ್ನೋದನ್ನ ಕಾದು ನೋಡಬೇಕಾಗಿದೆ.‌

Dreams: ಕನಸಿನಲ್ಲಿ ಈ ವಸ್ತುಗಳು ಕಂಡರೆ ನಿಮ್ಮ ಅದೃಷ್ಟ ಬದಲಾಗೋ ಕಾಲ ಹತ್ತಿರ ಬಂತು ಅಂತಾನೇ ಅರ್ಥ

Leave a Comment