Kannada Serial TRP : ಬಿಗ್ ಬಾಸ್ ಆರಂಭವಾಯ್ತು ಎಂದ ಮೇಲೆ ಬೇರೆ ವಾಹಿನಿಗಳಲ್ಲಿ ಆ ಸಮಯಕ್ಕೆ ಪ್ರಸಾರ ಕಾಣುವ ಸೀರಿಯಲ್ ಗಳ ಟಿಆರ್ಪಿ ಗೆ ಅದು ಕುತ್ತು ಬಂದ ಹಾಗೆ. ಬಿಗ್ ಬಾಸ್ ಆರಂಭದ ದಿನ 9.9 ಟಿಆರ್ಪಿ ಸಿಕ್ಕಿದ್ದರೆ ಪ್ರತಿದಿನ 6.9 ದೊರೆಯುತ್ತಿದೆ ಎನ್ನಲಾಗಿದೆ. ಇನ್ನು ಈ ವಾರ ಸೀರಿಯಲ್ ಗಳ ಸ್ಥಾನ (Kannada Serial TRP) ಹೇಗಿದೆ ತಿಳಿಯೋಣ ಬನ್ನಿ.
ಕಳೆದ ವಾರ ಎರಡನೇ ಸ್ಥಾನಕ್ಕೆ ಬಂದಿದ್ದ ಲಕ್ಷ್ಮೀ ನಿವಾಸ (Lakshmi Nivasa) ಮತ್ತೆ ಈ ವಾರ ಮೊದಲ ಸ್ಥಾನ ಪಡೆದಿದೆ. ಭಾವನಾಗೆ ತಾಳಿ ಕಟ್ಟಿದ ವಿಚಾರ ಸಿದ್ಧು ಹೇಳಿದ್ದು, ಎಪಿಸೋಡ್ ಗಳು ಸಾಕಷ್ಟು ಆಸಕ್ತಿಕರವಾಗಿ ಸಾಗುತ್ತಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕಳೆದ ವಾರ ಒಂದನೇ ಸ್ಥಾನಕ್ಕೆ ಏರಿದ್ದ ಅಮೃತಧಾರೆ (Amruthadhaare) ಸೀರಿಯಲ್ ಈ ವಾರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಜೈದೇವ್ ನಾಟಕ ಪತ್ತೆ ಹಚ್ಚೋಕೆ ಭೂಮಿಕಾ, ಆನಂದ್ ಎಲ್ಲರೂ ಸೇರಿ ಮಾಡಿದ ಪ್ರಯತ್ನಗಳು ಎಲ್ಲರ ಕುತೂಹಲ ಕೆರಳಿಸಿತ್ತು.
ಈ ವಾರ ಮೂರನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಇದೆ. ಪ್ರಸಾರ ಸಮಯ ಬದಲಾವಣೆ ನಂತರ ಟಾಪ್ ಐದರಿಂದ ಹೊರ ಬಂದಿದ್ದ ಈ ಸೀರಿಯಲ್ ಮತ್ತೆ ಟ್ರಾಕ್ ಗೆ ಬಂದಿದ್ದು ಸೀರಿಯಲ್ ನ ಹೊಸ ಟ್ವಿಸ್ಟ್ ಗಳಿಂದ ಈಗ ಮೂರನೇ ಸ್ಥಾನವನ್ನು ಪಡೆದಿದೆ.
ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ವಾಹಿನಿಯ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಇದೆ. ಕಾವೇರಿಯ ರಹಸ್ಯ ಇನ್ನೂ ಬಯಲಾಗಿಲ್ಲ. ಕಾವೇರಿ ಬಹಳ ನಾಜೂಕಾಗಿ ಎಲ್ಲಾ ಕಡೆಗಳಿಂದಲೂ ತಪ್ಪಿಸಿಕೊಳ್ಳುತ್ತಾ ಲಕ್ಷ್ಮೀ ಪ್ಲಾನ್ ಗಳಿಗೆ ತಿರುಗೇಟು ನೀಡುತ್ತಿದ್ದಾಳೆ.
ಐದನೇ ಸ್ಥಾನದಲ್ಲಿ ಈ ವಾರ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಇದೆ. ಟಾಪ್ ಎರಡರ ವರೆಗೆ ತಲುಪಿದ್ದ ಸೀರಿಯಲ್ ನ ಟಿ ಆರ್ ಪಿ ಕಡಿಮೆ ಆದ ಕಾರಣ ಈಗ ಈ ಸೀರಿಯಲ್ ಐದನೇ ಸ್ಥಾನಕ್ಕೆ ತೃಪ್ತಿ ಪಡುವಂತೆ ಆಗಿದೆ.
Bigg Boss 11 ಐಶ್ವರ್ಯ ಸ್ವರ್ಗದಿಂದ ನರಕಕ್ಕೆ ಶಿಫ್ಟ್; ಖುಷಿಯಿಂದ ಕುಣಿದು, ಕುಪ್ಪಳಿಸಿ, ಸಂಭ್ರಮಿಸಿದ ಜಗದೀಶ್