Kannada Serial TRP: ಸೀರಿಯಲ್ ಗಳ ನಡುವೆ ಕಾಳಗ, ಹೆಚ್ಚಿದ ಪೈಪೋಟಿ; ಈ ವಾರ ಗೆದ್ದವರು ಯಾರು? ಬಿದ್ದವರು ಯಾರು?

Written by Soma Shekar

Published on:

---Join Our Channel---

Kannada Serial TRP: ಕನ್ನಡ ಕಿರುತೆರೆಯ 2024ನೇ ಸಾಲಿನ 30ನೇ ವಾರದ ಟಿ ಆರ್‌ ಪಿ (Kannada Serial TRP) ಹೊರ ಬಂದಿದೆ. ಕಿರುತೆರೆಯಲ್ಲಿ ಯಶಸ್ಸಿನ ಓಟದಲ್ಲಿ ಪೈಪೋಟಿಗೆ ಬಿದ್ದಿರುವ ಸೀರಿಯಲ್ ಗಳಲ್ಲಿ, ಟಿ ಆರ್ ಪಿ ಅನ್ನೋ ಸ್ಪರ್ಧೆಯಲ್ಲಿ ಈ ವಾರ ಟಾಪ್ ಸ್ಥಾನ ಪಡೆದು ಗೆದ್ದವರು ಯಾರು ಅನ್ನೋದನ್ನ ತಿಳಿಯುವ ಸಮಯ ಇದು. ಟಾಪ್ ಐದರಲ್ಲಿ ಯಾವೆಲ್ಲಾ ಸೀರಿಯಲ್ ಗಳಿವೆ? ತಿಳಿಯೋಣ..

ಟಿ ಆರ್ ಪಿ ರೇಸ್ ನಲ್ಲಿ ಈ ವಾರವೂ ಮತ್ತೊಮ್ಮೆ ಪುಟ್ಟಕ್ಕನ ಮಕ್ಕಳು (Puttakkana Makkalu) ಗೆದ್ದು ನಂಬರ್ ಒನ್ ಸ್ಥಾನ ಪಡೆದಿದೆ. ಕಳೆದ ವಾರ ಲಕ್ಷ್ಮೀ ನಿವಾಸ ಸಹಾ ಮೊದಲ ಸ್ಥಾನವನ್ನು ಹಂಚಿಕೊಂಡಿತ್ತು. ಆದರೆ ಈ ವಾರ ಪುಟ್ಟಕ್ಕನ ಮಕ್ಕಳಿಗೆ ಮಾತ್ರವೇ ನಂಬರ್ ಒನ್ ಸ್ಥಾನ ಸಿಕ್ಕಿದೆ.

ಕಳೆದ ವಾರ ಮೊದಲನೇ ಸ್ಥಾನ ಪಡೆದುಕೊಂಡಿದ್ದ ಲಕ್ಷ್ಮೀ ನಿವಾಸ (Lakshmi Nivasa) ಈ ವಾರ ಮತ್ತೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಬಹು ತಾರಾಗಣದ ಈ ಸೀರಿಯಲ್ ಪುಟ್ಟಕ್ಕನ ಮಕ್ಕಳಿಗೆ ಗಟ್ಟಿ ಪೈಪೋಟಿಯನ್ನು ನೀಡುತ್ತಲೇ ಬರುತ್ತಿದೆ.

ಈ ವಾರ ಮೂರನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಇದ್ದು, ಕಳೆದ ಎರಡು ಮೂರು ವಾರಗಳಿಂದಲೂ ಈ ಸೀರಿಯಲ್ ಟಾಪ್ ಮೂರರಲ್ಲಿ ಇದ್ದು, ಕಳೆದ ವಾರ ಎರಡನೇ ಸ್ಥಾನವನ್ನು ಪಡೆದಿತ್ತು.

ನಾಲ್ಕನೇ ಸ್ಥಾನದಲ್ಲಿ ಸೀತಾ ರಾಮ ಸೀರಿಯಲ್ (SeethaRama) ಇದ್ದು, ಸೀತಾ ರಾಮ್ ಮದುವೆಯ ನಂತರದ ಎಪಿಸೋಡ್ ಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದು, ಸೀತಾ ರಾಮ ಸೀರಿಯಲ್ ನ ಹೊಸ ಟ್ವಿಸ್ಟ್ ಗಳು ಕುತೂಹಲವನ್ನು ಮೂಡಿಸಿದೆ.

ಐದನೇ ಸ್ಥಾನದಲ್ಲಿ ಕಲರ್ಸ್ ವಾಹಿನಿಯ ಲಕ್ಷ್ಮೀ ಬಾರಮ್ಮ ಸೀರಿಯಲ್ ಪಡೆದಿದೆ. ಕಾವೇರಿ ಮಾಡಿದ ಕುತಂತ್ರ ಅರಿತ ಕೀರ್ತಿ ಕಾವೇರಿಗೆ ಬುದ್ಧಿ ಕಲಿಸೋಕೆ ಮಾಡೋ ಪ್ರಯತ್ನಗಳು ವಿಶೇಷ ಆಕರ್ಷಣೆ ಆಗಿದ್ದು, ಲಕ್ಷ್ಮೀ ಬಾರಮ್ಮ ಈಗ ಐದನೇ ಸ್ಥಾನದಲ್ಲಿದೆ.‌

Government Scheme: ಈ ಯೋಜನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ಸ್ವಾವಲಂಬಿಗಳಾಗೋಕೆ ಇದೇ ಮಾರ್ಗ

Leave a Comment