Kannada Serial TRP ಟಾಪ್ 5 ರಲ್ಲಿ ಸೀರಿಯಲ್ ಗಳ ಪೈಪೋಟಿ: ಫೀನಿಕ್ಸ್ ನಂತೆ ಎದ್ದು ಅಬ್ಬರಿಸಿದೆ ಈ ಸೀರಿಯಲ್

Written by Soma Shekar

Published on:

---Join Our Channel---

Kannada Serial TRP : ವೀಕೆಂಡ್ ಬಂದಾಗ ಬಿಗ್ ಬಾಸ್ ಜೊತೆಗೆ ಯಾವ ಸೀರಿಯಲ್ ಗೆ ಎಷ್ಟು ಟಿ ಆರ್ ಪಿ (Kannada Serial TRP) ಸಿಕ್ಕಿದೆ ಮತ್ತು ಈ ವಾರ ಯಾವ ಸೀರಿಯಲ್ ಯಾವ ಸ್ಥಾನ ಪಡೆದಿದೆ ಅನ್ನೋ ವಿಷಯವನ್ನು ಕೂಡಾ ತಿಳಿಯೋಕೆ ಅನೇಕರು ಬಹಳ ಕಾತರತೆಯಿಂದ ಕಾಯ್ತಾ ಇರ್ತಾರೆ. ಕಳೆದ ವಾರ ಸಾಲು ಸಾಲು ರಜೆಯಿದ್ದ ಕಾರಣ ಈ ಬಾರಿ ಸೀರಿಯಲ್ ಗಳ ಟಿ ಆರ್ ಪಿ ಪಟ್ಟಿ ಸ್ವಲ್ಪ ತಡವಾಗಿ ಹೊರ ಬಂದಿದೆ. ಹಾಗಾದ್ರೆ ಕಳೆದ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ಸಿಕ್ಕಿದೆ ಅನ್ನೋದನ್ನ ನೋಡೋಣ ಬನ್ನಿ.

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಮತ್ತೆ ತನ್ನ ಟ್ರ್ಯಾಕ್ ಗೆ ಮರಳಿದೆ. ಈ ಸೀರಿಯಲ್ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕಳೆದ ವಾರ ಹಾಗೂ ಅದಕ್ಕೂ ಮೊದಲ ವಾರ ಕೂಡಾ ಈ ಸೀರಿಯಲ್ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ. ಸ್ನೇಹ ಪಾತ್ರದ ಸಾವು ಜನರಿಗೆ ಇಷ್ಟವಾಗಿಲ್ಲ, ನಿರ್ದೇಶಕರನ್ನ ಟೀಕಿಸುತ್ತಲೇ ಜನ ಸೀರಿಯಲ್ ಗೆ ನಂಬರ್ ಒನ್ ಸ್ಥಾನ ಕೊಡಿಸಿದ್ದಾರೆ.

ಟಿ ಆರ್ ಪಿ ಯಲ್ಲಿ ಏರಿಳಿತ ಕಾಣುತ್ತಾ ಟಾಪ್ ಐದರಲ್ಲಿ ಒಂದಲ್ಲಾ ಒಂದು ಸ್ಥಾನ ಪಡೆಯುವ ಅಮೃತಧಾರೆ (Amruthadhaare) ಸೀರಿಯಲ್ ಈ ವಾರ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಸೀರಿಯಲ್ ನಲ್ಲಿ ಧನ್ಯ,ಸುಧಾ ಪಾತ್ರಗಳ ಎಂಟ್ರಿ ಕುತೂಹಲ ಮೂಡಿಸಿದೆ. ಗೌತಮ್ ತಾಯಿ ತಂಗಿ ಬದುಕಿದ್ದಾರೆ ಎನ್ನುವ ವಿಷಯ ಕಥೆಯಲ್ಲಿ ಹೊಸ ಟ್ವಿಸ್ಟ್ ಅನ್ನು ಮೂಡಿಸಿದೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಮಯ ಬದಲಾದ ನಂತರ ಲಕ್ಷ್ಮೀ ನಿವಾಸ (Lakshmi Nivasa) ಮೊದಲ ಸ್ಥಾನವನ್ನು ತಲುಪಿತ್ತು. ಆದರೆ ಈಗ ಲಕ್ಷ್ಮೀ ನಿವಾಸ ಕಳೆದ ವಾರದ ಟಾಪ್ ಐದರಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಈ ವಾರ ಮತ್ತೆ ಮೊದಲ ಸ್ಥಾನಕ್ಕೆ ಬರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಇನ್ನು ಈ ವಾರ ನಾಲ್ಕನೇ ಸ್ಥಾನದಲ್ಲಿ ಹೊಸದಾಗಿ ಆರಂಭವಾಗಿರುವ ಅಣ್ಣಯ್ಯ ಸೀರಿಯಲ್ ಇದ್ದು, ನಾಯಕ ಶಿವು ಮತ್ತು ಪಾರು ಮದುವೆ ನಂತರ ಕಥೆಯಲ್ಲಿ ಮೂಡಿ ಬರುತ್ತಿರುವ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರ ಗಮನವನ್ನು ಸೆಳೆದಿದೆ.

ಐದನೇ ಸ್ಥಾನದಲ್ಲಿ ಅಕ್ಕ ತಂಗಿ ಸೀರಿಯಲ್ ಖ್ಯಾತಿಯ ಲಕ್ಷ್ಮಿ ಬಾರಮ್ಮ ಮತ್ತು ಭಾಗ್ಯ ಲಕ್ಷ್ಮೀ ಸೀರಿಯಲ್ ಗಳು ಸ್ಥಾನವನ್ನು ಪಡೆದುಕೊಂಡಿವೆ. ಕಳೆದ ಕೆಲವು ತಿಂಗಳುಗಳಿಂದಲೂ ಕಲರ್ಸ್ ವಾಹಿನಿಯ ಸೀರಿಯಲ್ ಗಳು ಟಿ ಆರ್ ಪಿಯಲ್ಲಿ ಬೇರೆ ಸೀರಿಯಲ್ ಗಳಿಗೆ ಗಟ್ಟಿ ಪೈಪೋಟಿ ನೀಡುತ್ತಿವೆ.

Bigg Boss Kannada ಕಿಚ್ಚನ ಅಬ್ಬರಕ್ಕೆ ಕಿರುತೆರೆ ರೆಕಾರ್ಡ್ಸ್ ನುಚ್ಚು ನೂರು; ಬಿಗ್ ಬಾಸ್ ವೀಕೆಂಡ್ ನಲ್ಲಿ ಹೊಸ ದಾಖಲೆ

Leave a Comment