Kannada Serial TRP: ಪುಟ್ಟಕನಿಗೆ ಮತ್ತೆ ಸಿಗದ ಸ್ಥಾನ, ಹೊಸ ಸೀರಿಯಲ್ ಗಳ ಅಬ್ಬರ, ಟಾಪ್ 5 ರಲ್ಲಿ ಕಲರ್ಸ್ ನ ಸೀರಿಯಲ್ ಗಳು

Written by Soma Shekar

Updated on:

---Join Our Channel---

Kannada Serial TRP: ಧಾರಾವಾಹಿಗಳ ಟಿ ಆರ್ ಪಿ ರೇಸ್ ನಲ್ಲಿ (Kannada Serial TRP) ದೀರ್ಘ ಸಮಯದಿಂದ ನಂಬರ್ ಒನ್ ಸ್ಥಾನದಲ್ಲಿ ಗಟ್ಟಿಯಾಗಿ ಕುಳಿತುಕೊಂಡಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದ ಒಂದು ವರ್ಷದಿಂದ ನಂಬರ್ ಒನ್ ಸ್ಥಾನವನ್ನು ಕಾಪಾಡಿಕೊಂಡಿತ್ತು. ಪ್ರೈಮ್ ಟೈಮಲ್ಲಿ ಪ್ರಸಾರವಾಗ್ತಿದ್ದ ಈ ಸೀರಿಯಲ್ ನ ಸಮಯ ಯಾವಾಗ ಬದಲಾಯ್ತೋ ಅಲ್ಲಿಂದ ಟಿ ಆರ್ ಪಿ ಯಲ್ಲಿ ತೀವ್ರ ಕುಸಿತ ಕಂಡಿದೆ.

ಈ ವಾರ ಮೊದಲ ಸ್ಥಾನದಲ್ಲಿ ಕಳೆದ ವಾರದ ಹಾಗೆಯೇ ಲಕ್ಷ್ಮೀ ನಿವಾಸ (Lakshmi Nivasa) ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬೇರೆಲ್ಲಾ ಧಾರಾವಾಹಿಗಳಿಗಿಂತ ಹೆಚ್ಚು ಟಿಆರ್‌ಪಿಯನ್ನ ಪಡೆದುಕೊಂಡು ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ.

ಎರಡನೇ ಸ್ಥಾನದ ವಿಚಾರಕ್ಕೆ ಬಂದರೆ ಕಳೆದ ವಾರವಷ್ಟೇ ಆರಂಭವಾದ ಹೊಸ ಧಾರಾವಾಹಿ ಅಣ್ಣಯ್ಯ (Annayya) ಮೊದಲ ವಾರದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈಗ ಈ ವಾರವೂ ಉತ್ತಮ ಟಿ ಆರ್ ಪಿ ಯನ್ನು ಪಡೆದುಕೊಂಡು ತನ್ನ ಎರಡನೇ ಸ್ಥಾನವನ್ನ ಉಳಿಸಿಕೊಂಡಿದೆ.

ವಿಶೇಷ ಏನೆಂದರೆ ಈ ವಾರ ಎರಡನೇ ಸ್ಥಾನವನ್ನು ಮತ್ತೊಂದು ಧಾರಾವಾಹಿಯೂ ಹಂಚಿಕೊಂಡಿದೆ. ಹೌದು, ಕಳೆದ ವಾರ ಮೂರನೇ ಸ್ಥಾನದಲ್ಲಿದ್ದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಈ ವಾರ ಅಣ್ಣಯ್ಯ ಸೀರಿಯಲ್ ಜೊತೆ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.

ಮೂರನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ (Ramachari) ಧಾರಾವಾಹಿ ಇದ್ದು ರಾಮಾಚಾರಿ ಮತ್ತು ಚಾರು ಮದುವೆಯ ಎಪಿಸೋಡ್ ಗಳು ಭರ್ಜರಿ ಮನರಂಜನೆಯನ್ನು ನೀಡಿ ಟಿ ಆರ್ ಪಿ ಪಡೆದುಕೊಂಡು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ವಾರ ನಾಲ್ಕನೇ ಸ್ಥಾನದಲ್ಲಿ ಸೀತಾರಾಮ ಧಾರಾವಾಹಿ ಇದೆ. ಸೀತಾರಾಮನ ಮದುವೆಯ ನಂತರ ಸಿಹಿಯನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸಲಾಗಿದೆ. ಇನ್ನು ಭಾರ್ಗವಿಯ ಹೊಸ ತಂತ್ರಗಳು, ಸಿಹಿಯ ನಿಜವಾದ ಅಪ್ಪನ ಆಗಮನ ವಿಚಾರಗಳು ಪ್ರೇಕ್ಷಕರ ಗಮನ ಸೆಳೆದಿದೆ.

ಕಲರ್ಸ್ ವಾಹಿನಿಯ ಲಕ್ಷ್ಮೀ ಬಾರಮ್ಮ (Lakshmi Baramma) ಟಿಆರ್‌ಪಿ ಏರಿಕೆಯಾಗಿದ್ದು ಐದನೇ ಸ್ಥಾನವನ್ನು ಪಡೆದುಕೊಂಡು ಮಿಂಚುತ್ತಿದೆ. ಸದಾ ಟಾಪ್ ಐದರಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್ ಗಳೇ ಇರುತ್ತಿದ್ದವು. ಆದರೆ ಈ ವಾರ ಕಲರ್ಸ್ ವಾಹಿನಿಯ ಎರಡು ಸೀರಿಯಲ್ ಗಳು ಇಲ್ಲಿ ಸ್ಥಾನ ಪಡೆದುಕೊಂಡಿದೆ.

Puttakkana Makkalu: ಕಥೆಯಲ್ಲಿ ಮತ್ತೆ ಹೊಸ ಟ್ವಿಸ್ಟ್ ಗಳು, ಕಂಠಿ ಮತ್ತು ಸಹನಾಗೆ ಎದುರಾಯ್ತು ಹೊಸ ಸವಾಲು

Leave a Comment