Kannada Serial TRP: ಕನ್ನಡ ಕಿರುತೆರೆಯ ಲೋಕದಲ್ಲಿ ಧಾರಾವಾಹಿಗಳದ್ದೇ (Kannada Serial TRP) ಕಾರುಬಾರು. ಪ್ರತಿ ಸೀರಿಯಲ್ ಕೂಡಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಒಂದಲ್ಲಾ ಒಂದು ಹೊಸ ಟ್ವಿಸ್ಟ್ ಮೂಲಕ ಬರುತ್ತಿವೆ. ಕಥೆಯಲ್ಲಿ ಹೊಸ ಹೊಸ ಪಾತ್ರಗಳು ಎಂಟ್ರಿ ನೀಡುತ್ತಿವೆ. ಇಂತಹ ತಿರುವುಗಳ ಕಾರಣದಿಂದಾಗಿಯೇ ಟಿ ಆರ್ ಪಿ ಯಲ್ಲೂ ಏರಿಳಿತ ಸಾಮಾನ್ಯ. ಇನ್ನು ಈ ವಾರ ನಂಬರ್ ಒನ್ ಸ್ಥಾನದಲ್ಲಿ ಎರಡು ಸೀರಿಯಲ್ ಗಳು ಬಂದು ಸೇರಿವೆ. ಹಾಗಾದರೆ ನಂ 1 ಸ್ಥಾನದಲ್ಲಿರೋ ಆ ಎರಡು ಸೀರಿಯಲ್ ಗಳು ಯಾವುವು? ತಿಳಿಯೋಣ ಬನ್ನಿ.
ಪುಟ್ಟಕ್ಕನ ಮಕ್ಕಳು (Puttakkana Makkalu), ಎಂದಿನಂತೆ ಈ ವಾರವೂ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ದೊಡ್ಡ ಪಾತ್ರವರ್ಗ ಇರುವ ಈ ಸೀರಿಯಲ್ ನಲ್ಲಿ ಈಗ ಕಥೆಯಲ್ಲಿ ಹೊಸ ಟ್ವಿಸ್ಟ್ ಎನ್ನುವ ಹಾಗೆ ಬಂಗಾರಮ್ಮನ ಜಾಗಕ್ಕೆ ಸಿಂಗಾರಮ್ಮನ ಆಗಮನ ಆಗಿದ್ದು, ಇದರ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿದೆ.
ಲಕ್ಷ್ಮೀ ನಿವಾಸ (Lakshmi Nivasa), ಪ್ರತಿ ವಾರ ಎರಡನೇ ಸ್ಥಾನದಲ್ಲಿ ಇರುತ್ತಿದ್ದ ಲಕ್ಷ್ಮೀ ನಿವಾಸ ಸೀರಿಯಲ್ ಈ ವಾರ ಮೊದಲನೇ ಸ್ಥಾನಕ್ಕೆ ಬಂದಿದೆ. ಈ ವಾರ ಒಂದನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಮತ್ತು ಲಕ್ಷ್ಮಿ ನಿವಾಸ ಈ ಸ್ಥಾನವನ್ನು ಶೇರ್ ಮಾಡಿಕೊಂಡು ಮಿಂಚುತ್ತಿವೆ.
ಮೂರನೇ ಸ್ಥಾನದಲ್ಲಿ ಮಿಂಚಿದ್ದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಈ ವಾರ ಎರಡನೇ ಸ್ಥಾನಕ್ಕೆ ಏರಿದೆ. ಶ್ರಾವಣಿ ಸಾಲಿಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ಸಿದ್ಧವಾಗ್ತಿದ್ದರೆ ಮತ್ತೊಂದು ಕಡೆ ಸುಬ್ಬ ತಂಗಿಯ ಪ್ರೇಮ ವಿಚಾರ ಹೊರಗೆ ಬಂದು ದೊಡ್ಡ ಜಗಳವೇ ನಡೆದಿದೆ.
ಸೀತಾ ರಾಮನ (SeethaRama) ಮದುವೆ ಎಪಿಸೋಡ್ ಗಳ ನಂತರ ಈಗ ಸೀತಾರಾಮ ಸೀರಿಯಲ್ ಗಳು ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿದೆ. ಭಾರ್ಗವಿಯ ಕುತಂತ್ರಗಳು ಒಂದು ಕಡೆಯಾದರೆ, ಸೀತಾ ರಾಮ್ ಜೋಡಿಯ ನಡುವಿನ ಒಡನಾಟ ಪ್ರೇಕ್ಷಕರಿಗೆ ಖುಷಿಯನ್ನು ನೀಡುತ್ತಿದ್ದು, ಈ ಗಾರ ಸೀತಾ ರಾಮ ಮೂರನೇ ಸ್ಥಾನ ಪಡೆದಿದೆ.
ಅಮೃತಧಾರೆ (Amruthadhaare) ಸೀರಿಯಲ್ ಈ ವಾರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಪಾರ್ಥ ತನ್ನ ಪ್ರೇಮಕ್ಕಾಗಿ ಸದಾಶಿವನ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದು ಕಡೆ ಶಕುಂತಲಾ ಮನೆಯವರನ್ನು ಒಪ್ಪಿಸಿ ಪಾರ್ಥನಿಗೆ ಸ್ಟೇಟಸ್ ಗೆ ತಕ್ಕಂತಹ ಹುಡುಗಿಯನ್ನು ನೋಡಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಈ ವಾರ ಐದನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಇದ್ದು, ಕಲರ್ಸ್ ವಾಹಿನಿಯ ಈ ಒಂದು ಸೀರಿಯಲ್ ಮಾತ್ರವೇ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಜಾತಕದ ವಿಚಾರ ವೈಷ್ಣವ್ ಗೆ ಗೊತ್ತಾಗಿದೆ. ಇದೇ ವೇಳೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದಕ್ಕೆ ಲಕ್ಷ್ಮೀ ಮತ್ತು ಕೀರ್ತಿ ಇಬ್ಬರೂ ಕೈಜೋಡಿಸಿದ್ದಾರೆ.
Abhishek Bachchan: ನನ್ನೆಲ್ಲಾ ಸಂಘರ್ಷಕ್ಕೆ ನಮ್ಮಪ್ಪನೇ ಕಾರಣ, ಮನಸ್ಸಿನ ನೋವು ಬಿಚ್ಚಿಟ್ಟ ಅಭಿಷೇಕ್ ಬಚ್ಚನ್