Kannada Serial TRP: ಅಣ್ಣಯ್ಯ ಎಂಟ್ರಿ ಪುಟ್ಟಕ್ಕನ ಮಕ್ಕಳಿಗೆ ಬಿತ್ತು ಹೊಡೆತ: ಈ ವಾರ TRP ಏರುಪೇರು, ಪುಟ್ಟಕ್ಕ ರೇಸ್ ನಿಂದ ಹೊರಕ್ಕೆ

Written by Soma Shekar

Published on:

---Join Our Channel---

Kannada Serial TRP : ವಾರದಿಂದ ವಾರಕ್ಕೆ ಟಿ ಆರ್ ಪಿ (Kannada Serial TRP) ಲೆಕ್ಕಾಚಾರ ಅನ್ನೋದು ಬದಲಾದರೂ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಕೆಲವು ಸೀರಿಯಲ್ ಗಳ ಸ್ಥಾನದಲ್ಲಿ ಯಾವುದೇ ಬದಲಾವಣೆ ಖಂಡಿತ ಆಗಿರಲಿಲ್ಲ. ಆದರೆ ಈ ವಾರ ಹೊಸ ಧಾರಾವಾಹಿ ಅಣ್ಣಯ್ಯನ ಆಗಮನದಿಂದಾಗಿ ಲೆಕ್ಕಾಚಾರಗಳು ತಲಕೆಳಗಾಗಿದೆ. ನಂಬರ್ ಒನ್ ಸ್ಥಾನದಲ್ಲಿ ಗಟ್ಟಿ ನೆಲೆ ಕಂಡಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಾಪ್ ಐದರ ರೇಸ್ ನಿಂದ ಏಕಾಏಕೀ ಹೊರ ಬಂದಿದೆ. ಹಾಗಾದರೆ ಈ ವಾರ ಯಾವ ಸೀರಿಯಲ್ ಗೆ ಎಷ್ಟನೇ ಸ್ಥಾನ ? ಇಲ್ಲಿದೆ ಉತ್ತರ.

ಲಕ್ಮ್ಮೀನಿವಾಸ (Lakshmi Nivasa) : ಪುಟ್ಟಕ್ಕನ ಮಕ್ಕಳು ಸೀರಿಯಲ್ ನಿಂದಾಗಿ ಎರಡನೇ ಸ್ಥಾನದಲ್ಲೇ ಇದ್ದ ಲಕ್ಷ್ಮೀ ನಿವಾಸ ಈ ವಾರ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಸಮಯ ಬದಲಾವಣೆ ಕಾರಣ ಪುಟ್ಟಕ್ಕನ ಮಕ್ಕಳಿಗೆ ದೊಡ್ಡ ಹೊಡೆತವೇ ಬಿದ್ದಿದ್ದು ಈ ವಾರ ಟಾಪ್ ಐದರಿಂದಲೇ ಪುಟ್ಟಕ್ಕನ ಮಕ್ಕಳು ಕಾಣೆಯಾಗಿದೆ.

ಅಣ್ಣಯ್ಯ (Annayya) : ಪುಟ್ಟಕ್ಕನ ಮಕ್ಕಳು ಸೀರಿಯಲ್ ಟೈಮ್ ಗೆ ಎಂಟ್ರಿ ಕೊಟ್ಟ ಹೊಸ ಸೀರಿಯಲ್ ಅಣ್ಣಯ್ಯ ಮೊದಲ ವಾರದಲ್ಲೇ ಟಿ ಆರ್ ಪಿ ವಿಚಾರದಲ್ಲಿ ಪುಟ್ಟಕ್ಕನ ಮಕ್ಕಳನ್ನು ಹಿಂದೆ ಹಾಕಿ ಎರಡನೇ ಸ್ಥಾನಕ್ಕೆ ಬಂದಿದೆ. ಪುಟ್ಟಕ್ಕನ ಮಕ್ಕಳಿಗೆ ಅಣ್ಣಯ್ಯ ಸೀರಿಯಲ್ ದೊಡ್ಡ ಶಾಕ್ ನೀಡಿದೆ.

ಶ್ರಾವಣಿ ಸುಬ್ರಹ್ಮಣ್ಯ: ಕಳೆದ ಕೆಲವು ವಾರಗಳಿಂದಲೂ ಮೂರನೇ ಸ್ಥಾನವನ್ನು ಉಳಿಸಿಕೊಂಡಿರುವ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಈ ವಾರವೂ ಅದೇ ಸ್ಥಾನವನ್ನು ಉಳಿಸಿಕೊಂಡಿದ್ದು, ಈ ವಾರ ಹೊಸ ಟ್ವಿಸ್ಟ್ ಗಳು ಇನ್ನಷ್ಟು ಮನರಂಜನೆಯನ್ನು ನೀಡಿದೆ.

ಸೀತಾರಾಮ : ಇನ್ನು ಈ ವಾರ ನಾಲ್ಕನೇ ಸ್ಥಾನದಲ್ಲಿ ಸೀತಾ ರಾಮ ಇದ್ದು, ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಲಾಗಿದೆ. ಹೊಸ ಪಾತ್ರಗಳು ಎಂಟ್ರಿಯಾಗಿದೆ. ಸಿಹಿಯ ನಿಜವಾದ ಅಪ್ಪ ಯಾರೆಂದು ತಿಳಿಯುವ ಸಮಯ ಹತ್ತಿರವಾದ ಹಾಗೆ ಕಂಡಿದೆ.

ಅಮೃತಧಾರೆ : ಈ ವಾರ ಅಮೃತಧಾರೆ ಐದನೇ ಸ್ಥಾನದಲ್ಲಿ ಇದೆ. ಶಕುಂತಲಾ ಕುತಂತ್ರ ಫಲಿಸಿದೆ..ಅಪೇಕ್ಷಾ ಭೂಮಿಕಾಗೆ ವಿರೋಧಿಯಾಗಿದ್ದಾಳೆ. ಜೈದೇವ್ ಅಸಲಿಯತ್ತು ಆನಂದ್ ಗೆ ಗೊತ್ತಾಗಿದೆ. ಒಟ್ಟಿನಲ್ಲಿ ಈ ವಾರ ಟಿ ಆರ್ ಪಿ ನಲ್ಲಿ ದೊಡ್ಡ ಹೊಡೆತ ಬಿದ್ದಿದ್ದು ಪುಟ್ಟಕ್ಕ ಮಕ್ಕಳಿಗೆ ಅನ್ನೋದಂತೂ ಸತ್ಯ.

Bhagyalakshmi Serial: ನಡು ರಸ್ತೆಗಲ್ಲೇ ಭಾಗ್ಯಾಗೆ ಬೆಂಡೆತ್ತಿದ್ದ ಶ್ರೇಷ್ಠ, ಹುಚ್ಚರ ಸಂತೆ ಎಂದು ಸಿಟ್ಟಾದ ನೆಟ್ಟಿಗರು

Leave a Comment