Kannada Serial TRP ಯಲ್ಲಿ ಏರುಪೇರು, ಜೀ ಕನ್ನಡಕ್ಕೆ ಟಕ್ಕರ್ ಕೊಟ್ಟ ಕಲರ್ಸ್ ಸೀರಿಯಲ್ ಗಳು, ಯಾವ ಸೀರಿಯಲ್ ಗೆ ಯಾವ ಸ್ಥಾನ

Written by Soma Shekar

Published on:

---Join Our Channel---

Kannada Serial TRP : ಸೀರಿಯಲ್ ಗಳ ಟಿ ಆರ್ ಪಿ (Kannada Detail TRP) ವಿಚಾರ ಬಂದಾಗಲೆಲ್ಲಾ ಪ್ರತಿ ವಾರ ಟಾಪ್ ಐದರಲ್ಲಿ ಜೀ ಕನ್ನಡದ ಸೀರಿಯಲ್ ಗಳದ್ದೇ ಪಾರುಪತ್ಯ ಇರುತ್ತೆ. ಆದರೆ ಕಳೆದ ಕೆಲವು ವಾರಗಳಿಂದ ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್ ಗಳು ಸಹಾ ಟಾಪ್ ಐದಕ್ಕೆ ಎಂಟ್ರಿ ಕೊಟ್ಟು ಜೀ ಸೀರಿಯಲ್ ಗಳಿಗೆ ಸ್ಪರ್ಧೆ ನೀಡಿದ್ದು ಇದು ಈ ವಾರ ಸಹಾ ಮುಂದುವರೆದಿದೆ..

ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಮಯ ಬದಲಾದಾಗಿನಿಂದಲೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದ್ದು, ಈ ವಾರ ಸಹಾ ಅದು ಅದೇ ಸ್ಥಾನವನ್ನು ಉಳಿಸಿಕೊಂಡಿದೆ.

ಎರಡನೇ ಸ್ಥಾನದಲ್ಲಿ ಕೆಲವೇ ತಿಂಗಳುಗಳ ಹಿಂದೆ ಆರಂಭವಾದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಇದ್ದು, ಆರಂಭದಲ್ಲಿ ಮೂರನೇ ಸ್ಥಾನ ಪಡೆದಿದ್ದ ಸೀರಿಯಲ್ ಈಗ ಎರಡನೇ ಸ್ಥಾನವನ್ನು ಬಂದು ಸೇರಿದೆ.

ಈ ವಾರ ಮೂರನೇ ಸ್ಥಾನದಲ್ಲಿ ಅಚ್ಚರಿ ಎನ್ನುವ ಹಾಗೆ ಭಾಗ್ಯಲಕ್ಷ್ಮೀ (Bhagyalakshmi) ಸೀರಿಯಲ್ ಸ್ಥಾನ ಪಡೆದಿದೆ. ಶ್ರೇಷ್ಠ ಮತ್ತು ತಾಂಡವ್ ಮದುವೆ ಎಪಿಸೋಡ್ ಗಳು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದವು. ಕುತೂಹಲ ಕೆರಳಿಸಿದ್ದ ಎಪಿಸೋಡ್ ಗಳ ಪರಿಣಾಮ ಭಾಗ್ಯಲಕ್ಷ್ಮೀ ಮೂರನೇ ಸ್ಥಾನ ಪಡೆದಿದೆ.

ನಾಲ್ಕನೇ ಸ್ಥಾನವನ್ನು ಈ ವಾರ ಜೀ ವಾಹಿನಿಯ ಅಮೃತಧಾರೆ (Amruthadhaare) ಮತ್ತು ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಸೀರಿಯಲ್ ಗಳು ತಮ್ಮದಾಗಿಸಿಕೊಂಡಿವೆ. ಎರಡೂ ಸೀರಿಯಲ್ ಗಳ ಟಿ ಆರ್ ಪಿ ಸಮನಾದ ಕಾರಣ‌ ನಾಲ್ಕನೇ ಸ್ಥಾನ ಎರಡೂ ಸೀರಿಯಲ್ ಗಳ ಪಾಲಾಗಿದೆ.

ಇನ್ನು ಐದನೇ ಸ್ಥಾನದ ವಿಚಾರಕ್ಕೆ ಬಂದರೆ‌ ಇಲ್ಲಿ ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಸೀರಿಯಲ್ ಗಳು ಸ್ಥಾನವನ್ನು ಪಡೆದುಕೊಂಡಿವೆ. ಪುಟ್ಟಕ್ಕ‌ನ ಮಕ್ಕಳು ಸಮಯದ ಬದಲಾವಣೆ ನಂತರ ಮತ್ತೆ ಟಾಪ್ ಐದಕ್ಕೆ ಕಮ್ ಬ್ಯಾಕ್ ಮಾಡಿದೆ.

Bigg Boss Kannada Season 11 ಕ್ಕೆ ಎಂಟ್ರಿ ಕೊಟ್ಟ ಪಾರು ಸೀರಿಯಲ್ ಖ್ಯಾತಿಯ ನಟ ಮೋಕ್ಷಿತಾ ಪೈ

Leave a Comment