BBK 11 : ಬಿಗ್ ಬಾಸ್ ಮನೇಲಿ ಅನ್ನಕ್ಕಾಗಿ ಯುದ್ಧ, ಐಶ್ವರ್ಯ ಮತ್ತು ಗೋಲ್ಡ್ ಸುರೇಶ್ ನಡ್ವೆ ಮಾತಿನ ಕಾಳಗ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಕೆಲವೊಂದು ಸಂದರ್ಭಗಳು ಸ್ಪರ್ಧಿಗಳಿಗೆ ಜೀವನದ ಪಾಠವನ್ನು ಕಲಿಸುತ್ತದೆ. ಬಿಗ್ ಬಾಸ್ (BBK 11) ಮನೆಯಲ್ಲಿ ಊಟಕ್ಕೆ ಕೂಡಾ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮನೆ ಮಂದಿ ತಮ್ಮ ಮನಸ್ಸಿಗೆ ಬಂದ ಹಾಗೆ ತಿನ್ನುವುದಕ್ಕೆ ಇಲ್ಲಿ ಅವಕಾಶ ಖಂಡಿತ ಇಲ್ಲ. ಮನೆಗೆ ಬರುವ ದಿನಸಿಯನ್ನು ಲೆಕ್ಕಾಚಾರವಾಗಿ ಬಳಸಬೇಕು ಹಾಗೂ ಏನಾದರೂ ಎಡವಟ್ಟು ಮಾಡಿದರೆ ಬಂದಿರೋ ದಿನಸಿ ಸಹಾ ವಾಪಸ್ ಹೋಗುವ ಸಾಧ್ಯತೆಗಳು ಇರುತ್ತವೆ.

ಆಗ ತಿನ್ನುವ ಅನ್ನದ ವಿಚಾರಕ್ಕೆ ಮನೆಯಲ್ಲಿ ಐಶ್ವರ್ಯ (Aishwarya) ಮತ್ತು ಗೋಲ್ಡ್ ಸುರೇಶ್ (Gold Suresh) ಅವರ ನಡುವೆ ಮಾತಿಗೆ ಮಾತು ಬೆಳೆದಿದೆ. ಐಶ್ವರ್ಯ ಸ್ವಲ್ಪ ಹೆಚ್ಚು ಅನ್ನವನ್ನು ತಮ್ಮ ಪ್ಲೇಟ್ ಗೆ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಗೋಲ್ಡ್ ಸುರೇಶ್ ಮನೇಲಿ ನೀವೊಬ್ರೆ ಇಲ್ಲ, ಬೇರೆ ಅವರು ಇದ್ದಾರೆ. ನೀವು ಹೀಗೆ ಹಾಕ್ಕೊಂಡ್ರೆ ಬೇರೆ ಅವ್ರಿಗೆ ಅನ್ನ ಇರಲ್ಲ ಅನ್ನೋ ರೀತಿ ಸುರೇಶ್ ಮಾತನಾಡಿದ್ದಾರೆ.

ಗೋಲ್ಡ್ ಸುರೇಶ್ ಮಾತಿಂದ ಸಿಟ್ಟಾದ ಸ್ವಲ್ಪ ರೈಸ್ ಹಾಕ್ಕೊಂಡಿದ್ದೀನಿ. ಅಷ್ಟಕ್ಕೇನೇ ಇಷ್ಟು ಮಾತ್ ಆಡೋದಾ? ಯಾಕೆ ಇಷ್ಟು ಮಾತಾಡ್ಬೇಕು. ನನ್ನ ಪಾಲಿನ ರೈಸ್ ನಾನು ಹಾಕ್ಕೊಂಡಿದ್ದೇನೆ. ಅದು ಬಿಟ್ರೆ, ಸ್ವಲ್ಪ ಅನ್ನ ಹಾಕಿಕೊಂಡಿದ್ದೇನೆ ಹೊರತು ಮತ್ತೇನೂ ಮಾಡಿಲ್ಲ ಅಂತಾ ಗಟ್ಟಿಯಾಗಿ ಹೇಳಿದ್ದು, ಮನೆ ಮಂದಿ ಸಹಾ ಐಶ್ವರ್ಯಗೆ ಸಪೋರ್ಟ್ ಮಾತನಾಡಿದ್ದಾರೆ.

ಮಂಜು ಅವರು ಮಾತನಾಡ್ತಾ ಯಾರಾದ್ರೂ ಸ್ವಲ್ಪ ಅನ್ನ ಕೇಳಿದ್ರೆ ಹಾಕೋಕೆ ಏನ್ ಪ್ರಾಬ್ಲಂ‌ ಇದೆ ಅಂದಿದ್ದಾರೆ. ಯಾರಾದ್ರೂ ಬಂದ್ರೆ ಸ್ವಲ್ಪ ಅನ್ನ ಹಾಕು ಅಂದಿದ್ದಾರೆ. ‌ಐಶ್ವರ್ಯ ಸಿಟ್ಟಿನಿಂದ ಮಾತನಾಡಿದ್ರು ಶಿಶಿರ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿ ಇದ್ದುದ್ದು ಪ್ರೊಮೋದಲ್ಲಿ ಕಂಡಿದೆ. ‌ಊಟಕ್ಕಾಗಿ ಬಿಗ್ ಬಾಸ್ ನ ಈ ಸೀಸನ್ ನಲ್ಲಿ ಇದೇ ಮೊದಲ ಜಗಳ ಅನ್ಸುತ್ತೆ.

Ram Gopal Varma; ದಾಖಲಾಯ್ತು ದೂರು, ರಾಮ್ ಗೋಪಾಲ್ ವರ್ಮಾ ಅರೆಸ್ಟ್ ಪಕ್ಕಾನ? ದೂರು ಕೊಟ್ಟಿದ್ಯಾರು

Leave a Comment