Kamal Haasan: ಕಲಿಕೆಗೆ ವಯಸ್ಸು ಅಡ್ಡವಲ್ಲ, 69ರ ವಯಸ್ಸಲ್ಲಿ ಓದಲು ಅಮೆರಿಕಾಕ್ಕೆ ಹೋದ ಕಮಲ್; ಯಾವ ವಿಷಯ ಗೊತ್ತಾ?

Written by Soma Shekar

Published on:

---Join Our Channel---

Kamal Haasan: ಕಲಿಯುವ (Learning) ಆಸಕ್ತಿ ಇರುವಾಗ ಕಲಿಕೆಗೆ ವಯಸ್ಸು ಎಂದಿಗೂ ಸಹಾ ಅಡ್ಡಿಯಾಗುವುದಿಲ್ಲ ಎಂದು ಹೇಳಬಹುದು. ವಿಶ್ವದ ವಿವಿಧೆಡೆಗಳಲ್ಲಿ ಬಹಳಷ್ಟು ಜನರು ವಯಸ್ಸಾದ ನಂತರವೂ ಹೊಸ ಹೊಸ ಕೋರ್ಸ್ ಗಳನ್ನು ಅಧ್ಯಯನ ಮಾಡಿ ಹೊಸ ವಿಚಾರಗಳನ್ನ ಕಲಿಯುವ ಕಡೆಗೆ ಆಸಕ್ತಿಯನ್ನು ತೋರುತ್ತಾರೆ. ಈಗ ಆ ಪಟ್ಟಿಗೆ ಹಿರಿಯ ಸ್ಟಾರ್ ನಟ ಕಮಲ ಹಾಸನ್ (Kamal Haasan) ಅವರು ಸಹಾ ಸೇರಿದ್ದಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ಅಥವಾ ಎಐ (AI) ಅನ್ನೋದು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ತಂತ್ರಜ್ಞಾನ ಆಗಿದ್ದು, ಯಾವುದೆಲ್ಲಾ ಊಹೆ ಮಾಡೋಕು ಕಷ್ಟ ಇತ್ತೋ ಅಂತದ್ದೆಲ್ಲಾ ಈಗ ಎಐ ನಿಂದಾಗಿ ಸುಲಭ ಸಾಧ್ಯವಾಗ್ತಿದೆ. ಎಐ ಪವಾಡಗಳನ್ನೇ ಸೃಷ್ಟಿ ಮಾಡ್ತಿದೆ ಅಂದ್ರೆ ಅದು ತಪ್ಪಾಗೋದಿಲ್ಲ.

ಈಗ ನಟ ಕಮಲ ಹಾಸನ್ ಅವರು ಎಐ ತಂತ್ರಜ್ಞಾನದ ಕುರಿತು ಅಧ್ಯಯನವನ್ನು ಮಾಡೋದಕ್ಕೆ ಅಂತ 90 ದಿನಗಳ ಕೋರ್ಸ್ ಒಂದನ್ನು ಮಾಡೋದಕ್ಕೆ ಅಮೆರಿಕಾಕಕ್ಕೆ ತೆರಳಿದ್ದರು ಎನ್ನಲಾಗಿದೆ. ಇದು 45 ದಿನಗಳು ನೇರವಾಗಿ ತರಗತಿ ಬೋಧನೆ ಮತ್ತು ಇನ್ನುಳಿದ 45 ದಿನಗಳು ಆನ್ಲೈನ್ ತರಬೇತಿ ಎನ್ನಲಾಗಿದೆ.

69 ರ ಹರೆಯದಲ್ಲೂ ಕಾಲಕ್ಕನುಗುಣವಾಗಿ ಹೊಸ ವಿಚಾರಗಳನ್ನು ತಿಳಿಯುವ ಕಲಿಯುವ ಆಸಕ್ತಿಯನ್ನು ತೋರಿರುವ ಕಮಲ ಹಾಸನ್ ಅವರ ಅವರ ಈ ಪ್ರಯತ್ನ ಕಂಡು ಅನೇಕರು ಮೆಚ್ಚುಗೆಗಳನ್ನು ನೀಡಿದ್ದು, ಅಂತಹ ಕಲಿಕೆಯ ಹಂಬಲವು ಎಲ್ಲರಲ್ಲೂ ಇರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.

Puttakkana Makkalu: ಮಹಾ ತಿರುವಿನತ್ತ ಪುಟ್ಟಕ್ಕನ ಮಕ್ಕಳು; ಒಂದೇ ಸಮಯಕ್ಕೆ ಬಯಲಾಯ್ತು ಎರಡು ರಹಸ್ಯಗಳು

Leave a Comment