Jr. NTR : ಟಾಲಿವುಡ್ ಯುವ ಸ್ಟಾರ್ ಹೀರೋಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡು, ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿರುವ ನಟ ಜೂನಿಯರ್ ಎನ್ ಟಿ ಆರ್ (Jr NTR). ಸಿನಿಮಾ ರಂಗಕ್ಕೆ ಬಾಲ ನಟನಾಗಿ ಎಂಟ್ರಿಯನ್ನು ಕೊಟ್ಟ ಈ ನಟ ಇಂದು ಜಾಗತಿಕ ಮಟ್ಟದಲ್ಲಿ ಹೆಸರನ್ನು ಮಾಡಿರುವ ಸ್ಟಾರ್ ಆಗಿದ್ದಾರೆ. ತ್ರಿಬಲ್ ಆರ್ ಸಿನಿಮಾದ ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಈ ನಟ ಹೃತಿಕ್ ರೋಷನ್ (Hrithik Roshan) ಜೊತೆಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಅವರು ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ದೇವರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ಬಹುನಿರೀಕ್ಷಿತ ದೇವರ (Devara) ಸಿನಿಮಾ 2025ರ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ ಎನ್ನುವ ಸುದ್ದಿಯಾಗಿದೆ. ಜೂನಿಯರ್ ಎನ್ಟಿಆರ್ ಅವರು ತಮ್ಮ ಬಿಡುವಿನ ಸಮಯವನ್ನು ಹೆಚ್ಚಾಗಿ ತಮ್ಮ ಕುಟುಂಬಕ್ಕಾಗಿ ಮೀಸಲಿಡುತ್ತಾರೆ. ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಹಾಗೂ ತಮ್ಮ ಇಬ್ಬರು ಮಕ್ಕಳಾದ ಅಭಯ್ ರಾಮ್ ಮತ್ತು ಭಾರ್ಗವ ರಾಮ್ ಜೊತೆಗೆ ಸಮಯವನ್ನು ಕಳೆಯುತ್ತಾರೆ. ಕುಟುಂಬದ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿಯನ್ನು ನೀಡುತ್ತಾರೆ.
ಜೂನಿಯರ್ ಎನ್ ಟಿ ಆರ್ ಅವರ ಇಬ್ಬರು ಪುತ್ರರಿಗೆ ಸಂಬಂಧಿಸಿದ ಒಂದು ವಿಷಯ ವೈರಲ್ ಆಗುತ್ತಿದೆ. ಮಕ್ಕಳ ಶಿಕ್ಷಣದ ಕುರಿತಾಗಿ ವೈರಲ್ ಆಗಿರುವ ಸುದ್ದಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಜೂನಿಯರ್ ಎನ್ಟಿಆರ್ ಅವರ ಹಿರಿಯ ಮಗ ಅಭಯ್ ರಾಮ್ ಐದನೇ ತರಗತಿಯಲ್ಲಿ ಓದುತ್ತಿದ್ದರೆ, ಕಿರಿಯ ಮಗ ಭಾರ್ಗವ್ ರಾಮ್ ಒಂದನೇ ತರಗತಿಯ ವಿದ್ಯಾರ್ಥಿಯಾಗಿದ್ದು ಇಬ್ಬರೂ ಕೂಡಾ ಹೈದರಾಬಾದ್ ನ ಒಂದು ಪ್ರತಿಷ್ಠಿತ ಕಾರ್ಪೊರೇಟ್ ಶಾಲೆಯಲ್ಲಿ ಓದುತ್ತಿದ್ದಾರೆ.
ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜೂನಿಯರ್ ಎನ್ ಟಿ ಆರ್ ಅವರು ವರ್ಷವೊಂದಕ್ಕೆ ಲಕ್ಷಗಳ ಮೊತ್ತದಲ್ಲಿ ಶುಲ್ಕವನ್ನು ಭರಿಸುತ್ತಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅವರು ವರ್ಷಕ್ಕೆ ಸುಮಾರು 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಒಂದನೇ ತರಗತಿಗೆ ಇಷ್ಟೊಂದು ದೊಡ್ಡ ಮಟ್ಟದ ಶುಲ್ಕವನ್ನು ಪಾವತಿಸುತ್ತಿರುವುದು ಖಂಡಿತ ಸಾಮಾನ್ಯವಾದ ವಿಷಯವಲ್ಲ. ಶಾಲಾ ಶುಲ್ಕವೇ ಇಷ್ಟೊಂದು ದೊಡ್ಡ ಮೊತ್ತವಾದರೆ, ಮಕ್ಕಳ ಇನ್ನಿತರ ಅಗತ್ಯಗಳಿಗೆ ಜೂನಿಯರ್ ಎನ್ಟಿಆರ್ ಯಾವ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತಾರೆ ಎನ್ನುವುದನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ.