Cinema : ಆ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದ ಜೂ.NTR, ಅಚ್ಚರಿಯಲ್ಲಿ ಫ್ಯಾನ್ಸ್, ಇಷ್ಟಕ್ಕೂ ಯಾವ ವಿಶೇಷ ದಿನಕ್ಕಾಗಿ ನಿರೀಕ್ಷೆ

Written by Soma Shekar

Published on:

---Join Our Channel---

Cinema : ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ (Jr NTR) ಅವರ ಮುಂಬರಲಿರುವ ಸಿನಿಮಾ (Cinema) ದೇವರಾ. ಈ ಚಿತ್ರವನ್ನು ಟಾಲಿವುಡ್ ನ ಸ್ಟಾರ್ ನಿರ್ದೇಶಕ ಕೊರಟಾಲ ಶಿವ (Koratala Shiva) ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಅಲ್ಲದೇ ಸಿನಿಮಾ ಘೋಷಣೆಯಾದ ದಿನದಿಂದಲೂ ಸಹಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಈ ಚಿತ್ರದ ಮೂಲಕ ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಟಾಲಿವುಡ್‌ ಗೆ ಎಂಟ್ರಿಯನ್ನು ನೀಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಸಿನಿಮಾ ನಿರೀಕ್ಷೆಗಳು ದುಪ್ಟಟ್ಟಾಗಿದೆ. ದೇವರಾ ಸಿನಿಮಾ ಸಾಗರದ ಹಿನ್ನೆಲೆಯ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ.

ಇತ್ತೀಚೆಗಷ್ಟೇ ಎನ್‌ಟಿಆರ್‌ ಅವರು ದೇವರ (Devara) ಭಾಗ-1ಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪ್ಡೇಟ್‌ ಒಂದನ್ನು ನೀಡಿದ್ದಾರೆ. ಸದ್ಯ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ ಎಂದು ಅದರಿಂದ ತಿಳಿದುಬಂದಿದೆ. ನಟ ತಮ್ಮ ಪೋಸ್ಟ್ ನಲ್ಲಿ ಈ ಪಯಣ ಅದ್ಭುತವಾಗಿ ಸಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸೆಪ್ಟೆಂಬರ್ 27ಕ್ಕೆ ಕಾತರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸೆಟ್‌ ನಲ್ಲಿ ಅವರು ನಿರ್ದೇಶಕರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ಎನ್ನುವಂತೆ ಬಾಲಿವುಡ್ ನ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ನಟ ಮೊದಲ ಬಾರಿಗೆ ದಕ್ಷಿಣದ ಸಿನಿಮಾವೊಂದಕ್ಕೆ ಎಂಟ್ರಿ ನೀಡಿದ್ದಾರೆ.‌

Ayodhya: ಭಾರಿ ಭದ್ರತೆಯ ಅಯೋಧ್ಯೆಯ ರಾಮಪಥ, ಕಂಬ ಸಹಿತ ಲಕ್ಷಗಳ ಬೆಲೆಯ ಲೈಟ್ ಗಳನ್ನ ಎಗರಿಸಿದ ಕಳ್ಳರು

Leave a Comment