Jr. NTR : ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಎನ್ ಟಿ ಅರ್ (Jr. NTR) ಅವರಿಗೆ ಕರ್ನಾಟಕದಲ್ಲೂ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅಲ್ಲದೇ ಎನ್ ಟಿ ಆರ್ ಅವರು ಸಹಾ ಬಹಳ ಸ್ಪಷ್ಟವಾಗಿ ಕನ್ನಡ ಮಾತನಾಡೋದು ಈಗಾಗಲೇ ಹಲವು ಸಂದರ್ಭಗಳಲ್ಲಿ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮತ್ತು ಕರ್ನಾಟಕದ ಜೊತೆಗೆ ನಟನ ಬಾಂಧವ್ಯ ಕೂಡಾ ಹೆಚ್ಚಾಗಿದೆ ಎಂದರೆ ಸುಳ್ಳಲ್ಲ.
ಇವೆಲ್ಲವುಗಳ ನಡುವೆ ಈಗ ತೆಲುಗು ಬಿಗ್ ಬಾಸ್ (Bigg Boss Telugu) ವೇದಿಕೆಯ ಮೇಲೆ ನಟ ಜೂ. ಎನ್ ಟಿ ಆರ್ ಅವರು ಕನ್ನಡ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ ಎಂಟು ನಡೆಯುತ್ತಿದೆ. ಈ ಶೋ ನಲ್ಲಿ ತೆಲುಗಿನಲ್ಲಿ ಹೆಸರು ಮಾಡಿರುವ ಕನ್ನಡದ ಕಲಾವಿದರು ಸ್ಪರ್ಧಿಗಳಾಗಿ ಮನೆಯಲ್ಲಿ ಇದ್ದಾರೆ.
ಈ ಹಿಂದಿನ ಸೀಸನ್ ಗಳಲ್ಲಿ ಸಹಾ ಕನ್ನಡಿಗರು ತೆಲುಗು ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿದ್ದರು. ತೆಲುಗು ಬಿಗ್ ಬಾಸ್ ನ ಮೊದಲ ಸೀಸನ್ ಅನ್ನು ನಟ ಜೂ. ಎನ್ ಟಿ ಆರ್ ನಿರೂಪಣೆ ಸಹಾ ಮಾಡಿದ್ದರು. ಆಗ ಅವರು ಮನೆಯ ಸ್ಪರ್ಧಿಗಳನ್ನು ನೀವು ಕನ್ನಡ ಚೆನ್ನಾಗಿ ಮಾತನಾಡ್ತಿದ್ದೀರಾ? ಅವ್ರು ಕನ್ನಡದವ್ರಾ? ನೀವು ಕನ್ನಡದವ್ರಾ ಅನ್ನೋ ಪ್ರಶ್ನೆ ಕೇಳಿದ್ದರು.
ಆಗ ಸ್ಪರ್ಧಿಗಳು ನಾವಿಬ್ಬರೂ ಕನ್ನಡದವರೇ ಎಂದಾಗ ಜೂ. ಎನ್ ಟಿ ಆರ್ ನನ್ನ ತಾಯಿ ಕೂಡಾ ಕನ್ನಡದವರೇ, ಅವರು ಕುಂದಾಪುರದವರು ಅಂತ ಬಹಳ ಖುಷಿಯಿಂದ ಹೇಳಿದ್ದರು. ಆ ದೃಶ್ಯದ ವೀಡಿಯೋ ಈಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
Bigg Boss 11: ತ್ರಿವಿಕ್ರಮ್ ಗೋಮುಖ ವ್ಯಾಘ್ರ, ಮೋಕ್ಷಿತಾ ತ್ರಿವಿಕ್ರಮ್ ಕಾಳಗ ; ಉಗ್ರಂ ಮಂಜು ಇದಕ್ಕೆ ಕಾರಣಾನ