Jr. NTR : ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ (Jr. NTR) ಅವರು ತಮ್ಮ ತಾಯಿ ಮತ್ತು ಪತ್ನಿಯೊಡನೆ ಉಡುಪಿಯ (Udupi) ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ವಿಚಾರವು ಈಗಾಗಲೇ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ನಟ ಜೂ. ಎನ್ ಟಿ ಆರ್ ಮತ್ತು ರಿಷಬ್ ಶೆಟ್ಟಿ (Rishab Shetty) ಅವರು ಜೊತೆಯಾಗಿರುವ ಫೋಟೋಗಳು ವೀಡಿಯೋಗಳು ವೈರಲ್ ಆಗಿದ್ದು, ಇದೇ ವೇಳೆ ಕನ್ನಡ ಜನರು ಎನ್ ಟಿ ಆರ್ ಅವರಿಗೆ ವಿಶೇಷ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.
ಹೌದು, ಜೂ. ಎನ್ ಟಿ ಆರ್ ಅವರು ಇಲ್ಲಿಗೆ ಬಂದಾಗಿನಿಂದಲೂ ಮಾದ್ಯಮಗಳ ಮುಂದೆ ಕಾಣಿಸಿಕೊಂಡಾಗ ಕನ್ನಡ ಭಾಷೆಯಲ್ಲೇ ಮಾತನಾಡುತ್ತಿದ್ದಾರೆ. ಬಹಳ ಸ್ಪಷ್ಟವಾಗಿ ಮತ್ತು ಜನ ಮೆಚ್ಚುವಂತೆ ಕನ್ನಡ ಮಾತನಾಡುತ್ತಾ ಎಲ್ಲರ ಗಮನವನ್ನು ಸೆಳೆದು ಜನರ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಜೂ. ಎನ್ ಟಿ ಆರ್ ಅವರ ಕನ್ನಡ ಮಾತನಾಡುವ ಶೈಲಿಯನ್ನು ನೋಡಿದ ಜನರು ನಮ್ಮಲ್ಲಿ ಕನ್ನಡದವರೇ ಆದರೂ ರಿಯಾಲಿಟಿ ಶೋ ಗಳು ಮತ್ತು ಮಾದ್ಯಮಗಳ ಮುಂದೆ ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಯನ್ನೇ ಹೆಚ್ಚಾಗಿ ಬಳಸುವ ಸೆಲೆಬ್ರಿಟಿಗಳಿಗಿಂತ ನೀವೇ ಉತ್ತಮ ಎಂದು ಜೂ. ಎನ್ ಟಿಆರ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ.
ಕನ್ನಡದಿಂದಲೇ ಬಂದವರು ಜನಪ್ರಿಯತೆ ಪಡೆದ ಕೂಡಲೇ ಕನ್ನಡ ಮರೆಯುವಾಗ ತೆಲುಗಿನ ನಟ ಕನ್ನಡ ಮಾತನಾಡುವುದು ನಿಜಕ್ಕೂ ಖುಷಿಯನ್ನು ನೀಡಿದೆ, ನಮ್ಮ ಸೆಲೆಬ್ರಿಟಿಗಳು ಇದನ್ನು ನೋಡಿಯಾದರೂ ಮಾತನಾಡುವಾಗ ಹೆಚ್ಚೆಚ್ಚು ಕನ್ನಡವನ್ನು ಬಳಸುವ ಕೆಲಸವನ್ನು ಮಾಡಿ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
Actress Charmila: ಹೊಟೇಲ್ ರೂಮ್ ನಲ್ಲಿ 28 ಮಂದಿಯಿಂದ ದೌರ್ಜನ್ಯ, ಮಾಲಿವುಡ್ ನ ಭೀಕತ ಸತ್ಯ