Jayam Ravi : ತಮಿಳಿನ ಜನಪ್ರಿಯ ನಟ ಜಯಂ ರವಿ (Jayam Ravi) ಇತ್ತೀಚಿಗಷ್ಟೇ ಪತಿ ಆರತಿ (Aarti) ಜೊತೆ ವಿಚ್ಚೇದನ ಘೋಷಿಸಿ ಇದು ಒಮ್ಮತದ ನಿರ್ಧಾರ ಎಂದಿದ್ದರು. ಆದರೆ ಅನಂತರ ಅವರ ಪತ್ನಿ ಇದು ಸಹಮತದಿಂದ ಆಗಿದ್ದಲ್ಲ ಪತಿಯ ನಿರ್ಧಾರ ಎಂದು ಹೇಳಿ ಅಸಮಾಧಾನವನ್ನು ಹೊರ ಹಾಕಿದ್ದರು. ಇವೆಲ್ಲವುಗಳ ಬೆನ್ನಲ್ಲೇ ನಟ ತಮ್ಮ ಮಾಜಿ ಪತ್ನಿಯ ಮೇಲೆ ದೂರನ್ನ ನೀಡಿದ್ದಾರೆ.
ವಿಚ್ಚೇದನ ಘೋಷಣೆ ನಂತರ ಪತ್ನಿ ನಟನನ್ನ ಮನೆ ಒಳಗೆ ಬಿಡುತ್ತಿಲ್ಲವಂತೆ. ನಟನ ಕಾರು, ಬೈಕ್, ಬಟ್ಟೆಗಳು ಮತ್ತು ಬೆಲೆ ಬಾಳುವ ವಸ್ತುಗಳೆಲ್ಲಾ ಮನೆಯಲ್ಲೇ ಇದ್ದು ಅದಕ್ಕಾಗಿ ನಟ ಮನೆಗೆ ಹೋದಾಗ ಪತ್ನಿ ಅವರನ್ನು ಮನೆಯೊಳಗೆ ಬಿಟ್ಟುಕೊಂಡಿಲ್ಲವಂತೆ. ಇದರಿಂದ ನಟ ಅಸಮಾಧಾನಗೊಂಡು ಪೋಲಿಸರ ಮೊರೆ ಹೋಗಿದ್ದಾರೆ.
ಪತಿಯ ವಿಚ್ಚೇದನದ ನಿರ್ಧಾರದಿಂದ ಬೇಸತ್ತ ಆರತಿ ಅವರು ಗಂಡನನ್ನ ಮನೆಯೊಳಗೆ ಬರಲು ಬಿಟ್ಟಿಲ್ಲ. ಇದರಿಂದ ನಟ ಜಯಂ ರವಿ ಅವರು ಮನೆ ಇರುವ ಪ್ರದೇಶದ ವ್ಯಾಪ್ತಿಯಲ್ಲಿನ ಪೋಲಿಸ್ ಠಾಣೆಗೆ ತೆರಳಿ ಪತ್ನಿಯ ಮೇಲೆ ದೂರು ನೀಡಿದ್ದು, ಮನೆಯೊಳಗೆ ಹೋಗಲು ಅನುಮತಿ ಗಾಗಿ ಮನವಿಯನ್ನು ಮಾಡಿಕೊಂಡಿದ್ದಾರೆ.
ನಾಲ್ಕು ಗೋಡೆಗಳ ಮದ್ಯೆ ಇದ್ದ ನಟನ ಸಂಸಾರದ ಗುಟ್ಟು ಈಗ ಬೀದಿಗೆ ಬಿದ್ದಂತಾಗಿದೆ. ಇನ್ನು ಇತ್ತೀಚಿಗೆ ನಟನ ಹೆಸರು ಗೋವಾದ ಒಬ್ಬ ಗಾಯಕಿಯ ಜೊತೆಗೆ ತಳಕು ಹಾಕಿಕೊಂಡಿದೆ. ಅಲ್ಲದೇ ಆಕೆಯ ಜೊತೆ ನಟ ಗೋವಾದ ರೆಸಾರ್ಟ್ ನಲ್ಲಿ ಇರುವಾಗಲೇ ನಟನ ಪತ್ನಿ ಅಲ್ಲೇ ಗಲಾಟೆ ಮಾಡಿದ್ದರು ಎನ್ನಲಾಗಿದೆ.
Madhavi Latha: ಲಡ್ಡು ವಿಚಾರದಲ್ಲಿ ಪ್ರಕಾಶ್ ರಾಜ್ ಗೆ ಮಾತಿನಲ್ಲೇ ಛಡಿಯೇಟು ಕೊಟ್ಟ ನಟಿ ಮಾಧವಿಲತಾ