Jason Sanjay: ಪ್ರಸ್ತುತ ತಮಿಳು ಸಿನಿಮಾ ರಂಗದಲ್ಲಿ ನಟ ಕೆವಿನ್ (Kevin) ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದಾರೆ. ಡಾಡಾ ಚಿತ್ರ ಕಂಡಂತಹ ಯಶಸ್ಸಿನಿಂದ ಈ ನಟ ಕಾಲಿವುಡ್ ನಲ್ಲಿ ಅತ್ಯುತ್ತಮ ನಟ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ಸಿನಿಮಾದ ಗೆಲುವಿನ ನಂತರ ಕೆವಿನ್ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದ್ದು, ಹಲವು ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈಗ ಲೈಕಾ ನಿರ್ಮಾಣದ ಸಿನಿಮಾದಲ್ಲಿ ಕೆವಿನ್ ನಟಿಸುತ್ತಿದ್ದು, ಈ ಸಿನಿಮಾದ ವಿಶೇಷತೆ ಏನೆಂದರೆ ಇದನ್ನು ಸ್ಟಾರ್ ನಟ ದಳಪತಿ ವಿಜಯ್ ಅವರ ಮಗ ಜೇಸೆನ್ ಸಂಜಯ್ (Jason Sanjay) ನಿರ್ದೇಶನ ಮಾಡುತ್ತಿದ್ದಾರೆ.
ಜೇಸನ್ ಸಂಜಯ್ ನಿರ್ದೇಶನದ ಸಿನಿಮಾದಲ್ಲಿ ಕೆವಿನ್ ನಟಿಸುವ ವಿಚಾರವಾಗಿ ಮಾತುಕತೆ ನಡೆಯುತ್ತಿದೆಯೋ ಇಲ್ಲವೋ ಎಂದು ಸಂದರ್ಶನ ಒಂದರಲ್ಲಿ ಕೆವಿನ್ ಅವರನ್ನು ಪ್ರಶ್ನಿಸಲಾಗಿದ್ದು, ಅವರು ಅದಕ್ಕೆ ಉತ್ತರವನ್ನು ನೀಡಿದ್ದು ಈ ಸಿನಿಮಾದ ವಿಚಾರವಾಗಿ ಹೊಸ ಅಪ್ಡೇಟ್ ಹೊರಗೆ ಬಂದಿದೆ. ಹೊಸ ಸಿನಿಮಾದ ವಿಚಾರವಾಗಿ ನಮ್ಮ ನಡುವೆ ಮೀಟಿಂಗ್ ನಡೆದಿದ್ದು ನಿಜ. ನನ್ನ ಬದ್ಧತೆಯ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಕೆಲವು ಬದಲಾವಣೆಗಳನ್ನು ಮಾಡಿದ ನಂತರ ಅವರು ಮತ್ತೆ ನನ್ನನ್ನು ಭೇಟಿ ಮಾಡುವುದಾಗಿ ಹೇಳಿದ್ದರು.
ಅನಂತರ ಇಲ್ಲಿಯವರೆಗೆ ಅವರಿಂದ ಯಾವುದೇ ಕರೆ ಬಂದಿಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಿದ್ದಾರೆ. ಇದೆ ವೇಳೆ ಜೇಸನ್ ಬಗ್ಗೆ ಮಾತನಾಡಿದ ಕೆವಿನ್ ನಾವೆಲ್ಲರೂ ವಿಜಯ್ ಅವರನ್ನು ಹೊಗಳಿ ಕೊಂಡಾಡುತ್ತೇವೆ. ಆದರೆ ಅವರು ಬಹಳ ಸಿಂಪಲ್ ನಟ. ಅವರ ಮಗನು ಕೂಡಾ ಹಾಗೆ. ಜೇಸನ್ ಸಂಜಯ್ ನಾನೊಬ್ಬ ಸೆಲೆಬ್ರಿಟಿ ಮಗ ಎಂಬ ಭಾವನೆಯನ್ನು ಹೊಂದಿಲ್ಲ. ಎಲ್ಲರನ್ನೂ ಅತ್ಯಂತ ಶಾಂತ ಚಿತ್ತದಿಂದ ಗೌರವಿಸಿ ನೋಡುವಂತಹ ವ್ಯಕ್ತಿತ್ವ ಅವರದ್ದು ಎನ್ನುವ ಮಾತನ್ನು ಹೇಳಿದ್ದಾರೆ.
ಸಿನಿಮಾ ರಂಗದಲ್ಲಿ ಸಾಮಾನ್ಯವಾಗಿ ಸ್ಟಾರ್ ಗಳ ಮಕ್ಕಳು ನಟನೆಯ ಕಡೆಗೆ ಗಮನವನ್ನು ನೀಡುತ್ತಾರೆ. ನಟನಾಗಿ ಲಾಂಚ್ ಆಗುವುದು ಅವರಿಗೆ ಸುಲಭದ ಕೆಲಸವಾಗಿರುತ್ತದೆ. ಹಲವು ಸ್ಟಾರ್ ನಟರು ತಮ್ಮ ಮಕ್ಕಳು ಸ್ಟಾರ್ ಗಳೇ ಆಗಬೇಕೆಂದು ಸಾಕಷ್ಟು ತಯಾರಿಯನ್ನು ನಡೆಸುತ್ತಾರೆ. ಆದರೆ ವಿಜಯ್ ಅವರ ಪುತ್ರ ಜೇಸನ್ ನಟನೆಯ ಬದಲಾಗಿ ನಿರ್ದೇಶನದ ಕಡೆಗೆ ಗಮನವಹಿಸಿದ್ದು, ಈ ಬಗ್ಗೆ ತರಬೇತಿ ಪಡೆದ ನಂತರ ಕೆಲವು ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಈಗ ಲೈಕಾ ಪ್ರೊಡಕ್ಷನ್ (Laica Production) ಅಡಿಯಲ್ಲಿ ತಮ್ಮ ಮೊದಲ ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈ ವಿಷಯ ಕಳೆದ ಆಗಸ್ಟ್ ನಲ್ಲಿ ಘೋಷಣೆಯಾಗಿತ್ತು. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಕೆವಿನ್ ನಟಿಸುತ್ತಾರೆ ಎಂದು ಸುದ್ದಿಗಳು ಹರಡಿದ್ದವು. ಆದರೆ ಅನಂತರ ಸಿನಿಮಾದ ಕುರಿತಾಗಿ ಯಾವುದೇ ಹೊಸ ಅಪ್ಡೇಟ್ ಗಳು ಹೊರಬಂದಿಲ್ಲ. ಮತ್ತೊಂದು ವಿಶೇಷ ಏನೆಂದರೆ ವಿಜಯ್ ಪುತ್ರನ ಮೊದಲ ಸಿನಿಮಾಕ್ಕೆ ಎಆರ್ ರೆಹಮಾನ್ ಅವರ ಪುತ್ರ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.