Jani Master ಲೈಂ* ಗಿಕ ಕಿರುಕುಳ ನೀಡಿದ್ದೆ, ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡು ಶಾಕ್ ಕೊಟ್ಟ ಜಾನಿ ಮಾಸ್ಟರ್

Written by Soma Shekar

Published on:

---Join Our Channel---

Jani Master: ಟಾಲಿವುಡ್ ನ (Tollywood) ಪ್ರಮುಖ ನಿರ್ದೇಶಕ ಜಾನಿ ಮಾಸ್ಟರ್ (Jani Master) ತಮ್ಮ 21 ವರ್ಷ ವಯಸ್ಸಿನ ಅಸಿಸ್ಟೆಂಟ್ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಲಿಸ್ ಕಸ್ಟಡಿಯಲ್ಲಿದ್ದು, ಜಾನಿ ಮಾಸ್ಟರ್ ವಿಚಾರ ಸಿನಿಮಾ ರಂಗದಲ್ಲಿ ಒಂದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 20 ರಂದು ಜಾನಿ ಮಾಸ್ಟರ್ ಅನ್ನು ಕೋರ್ಟ್ ನಲ್ಲಿ ಹಾಜರು ಪಡಿಸಲಾಗಿತ್ತು.

ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ… ಜಾನಿ ಮಾಸ್ಟರ್ ವಿರುದ್ಧ ಪೊಲೀಸರು ಸಲ್ಲಿಸಿರುವ ರಿಮಾಂಡ್ ವರದಿಯಲ್ಲಿ ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ. ನ್ಯಾಯಾಲಯದ ಮುಂದೆ ಜಾನಿ ಮಾಸ್ಟರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಪೋಲಿಸರು ರಿಮಾಂಡ್ ವರದಿಯಲ್ಲಿ ತಿಳಿಸಿದ್ದಾರೆ. ಜಾನಿ ಮಾಸ್ಟರ್ ಅಸಿಸ್ಟೆಂಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

2019 ರಲ್ಲಿ ಜಾನಿ ಮಾಸ್ಟರ್ ಸಂತ್ರಸ್ತೆಯನ್ನು ಭೇಟಿಯಾಗಿದ್ದರೆಂದು ಹೇಳಲಾಗಿದ್ದು, ಆದರೆ ದುರುದ್ದೇಶದಿಂದ ಆಕೆಯನ್ನು ಅಸಿಸ್ಟೆಂಟ್ ಮಾಡಿಕೊಂಡು, 2020 ರಲ್ಲಿ ಮುಂಬೈನ ಹೋಟೆಲ್‌ನಲ್ಲಿ ಮೊದಲ ಬಾರಿಗೆ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಆಗ ಸಂತ್ರಸ್ತೆಯ ವಯಸ್ಸಯ ಕೇವಲ 16 ವರ್ಷ ವಯಸ್ಸಾಗಿತ್ತೆಂದು ಪೊಲೀಸರು ರಿಮಾಂಡ್ ವರದಿಯಲ್ಲಿ ತಿಳಿಸಿದ್ದಾರೆ.

ಅಂದಿನಿಂದ ಜಾನಿ ಮಾಸ್ಟರ್ ನಾಲ್ಕು ವರ್ಷಗಳಲ್ಲಿ ಸಂತ್ರಸ್ತೆಯ ಮೇಲೆ ಹಲವು ಬಾರಿ ಅ ತ್ಯಾ ಚಾರ ಮಾಡಿದ್ದಾನೆಂದು ಹೇಳಲಾಗಿದ್ದು, ಈ ವಿಷಯವನ್ನು ಬಹಿರಂಗ ಪಡಿಸಿದರೆ ಸಿನಿಮಾ ಅವಕಾಶಗಳು ಸಿಗದಂತೆ ಮಾಡುವ ಬೆದರಿಕೆ ಹಾಕಿದ್ದಾರೆಂದು, ಜಾನಿ ಮಾಸ್ಟರ್‌ ಪತ್ನಿ ಆಯೆಷಾ ಅಲಿಯಾಸ್ ಸುಮಲತಾ ಕೂಡಾ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದಾರೆಂದು ರಿಮಾಂಡ್ ವರದಿಯಲ್ಲಿ ವಿವರಿಸಲಾಗಿದೆ.

Leave a Comment