ನಿಮಿಷವೊಂದಕ್ಕೆ 50 ಲಕ್ಷ, Jhanvi Kapoor ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳೋದು ಖಚಿತ, ಅಂತದ್ದೇನಿದೆ ಈ ನಟಿ ಹತ್ರ

Written by Soma Shekar

Published on:

---Join Our Channel---

Janhvi Kapoor : ಸೌತ್ ಸಿನಿಮಾ ಮತ್ತು ಬಾಲಿವುಡ್ ಅನ್ನು ಆಳಿದ ದಿವಂಗತ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ (Janhvi Kapoor) ದೇವರ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿಯನ್ನು ನೀಡಿದ್ದಾರೆ. ಮೊದಲ ಸಿನಿಮಾ ಬಿಡುಗಡೆಗೂ ಮೊದಲೇ ನಟಿ ರಾಮ್ ಚರಣ್ ಜೊತೆಗೆ ಮತ್ತೊಂದು ಸಿನಿಮಾಕ್ಕೂ ಒಪ್ಪಿಗೆ ನೀಡಿದ್ದರು. ಈಗ ಇವೆಲ್ಲವುಗಳ ನಡುವೆ ದೇವರ ಸಿನಿಮಾಕ್ಕೆ ನಟಿ ಪಡೆದ ಸಂಭಾವನೆ ಸುದ್ದಿ ಗಮನ ಸೆಳೆದಿದೆ.

ದೇವರ (Devara) ಸಿನಿಮಾದಲ್ಲಿ ಜೂ. ಎನ್ ಟಿ ಆರ್ ಗೆ ನಾಯಕಿ ಆಗಿರುವ ಜಾನ್ವಿ ಕಪೂರ್ ತೆರೆಯ ಮೇಲೆ ಕಾಣಿಸಿಕೊಂಡಿರುವುದು ಕೇವಲ ಒಂದು ಹಾಡು ಮತ್ತು ಕೆಲವೇ ದೃಶ್ಯಗಳಲ್ಲಿ. ಅದು ಕೂಡಾ ಹತ್ತು ನಿಮಿಷಗಳ ಅವಧಿಗೆ ಮಾತ್ರ ಅನ್ನೋದು ನಿಜ.

ಆದ್ರೆ ನಟಿ ಪಡೆದಿದ್ದು ಮಾತ್ರ ಐದು ಕೋಟಿ ರೂ.ಗಳ ಸಂಭಾವನೆ ಅನ್ನೋದು ಮಾತ್ರ ಶಾಕಿಂಗ್. ಸೌತ್ ಸ್ಟಾರ್ ನಟಿಯರಿಗಿಂತ ಹೆಚ್ಚು ಸಂಭಾವನೆಯನ್ನು ಜಾನ್ವಿ ಪಡೆದುಕೊಂಡಿದ್ದಾರೆ ಎನ್ನುವುದು ಖಂಡಿತ ಅಚ್ಚರಿಯನ್ನು ಮೂಡಿಸುತ್ತದೆ.

ನಟಿ ನಿಮಿಷವೊಂದಕ್ಕೆ 50 ಲಕ್ಷ ರೂ. ಗಳ ಸಂಭಾವನೆ ಪಡೆದಿದ್ದಾರೆ ಎಂದೇ ಹೇಳಬಹುದು. ದಕ್ಷಿಣ ಸಿನಿಮಾ ರಂಗದಲ್ಲೇ ನಟಿಯರಿದ್ದರೂ ಬಾಲಿವುಡ್ ನ ನಟಿಯರಿಗೆ ಹೆಚ್ಚು ಸಂಭಾವನೆ ನೀಡಿ ಮಣೆ ಹಾಕುವುದು ಸೌತ್ ಸಿನಿಮಾದಲ್ಲಿ ಹಿಂದಿನಿಂದಲೂ ಕಾಣಬಹುದಾಗಿದೆ.

Kantara Chapter 1 ನಲ್ಲಿ ರಿಷಬ್ ಶೆಟ್ಟಿ ತಂದೆ ಪಾತ್ರಕ್ಕೆ ಸೂಪರ್ ಸ್ಟಾರ್ ನಟನ ಎಂಟ್ರಿ; ಸುದ್ದಿ ಕೇಳಿ ನಡುಗಿದ ಚಿತ್ರರಂಗ

Leave a Comment