Jayam Ravi: ತಮಿಳು ನಟ ಜಯಂ ರವಿ (Jayam Ravi) ತಮ್ಮ ಪತ್ನಿ ಆರತಿಗೆ ವಿಚ್ಚೇದನ ನೀಡಿದ ವಿಚಾರ ಕೆಲವೇ ದಿನಗಳ ಹಿಂದೆ ಬಹಿರಂಗವಾಗಿ ಸುದ್ದಿಗಳಾಗಿತ್ತು. ಜಯಂ ರವಿ ಆರತಿ (Aarati) ದಂಪತಿಯ ವಿಚ್ಚೇದನದ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಇದು ಇಬ್ಬರ ಪರಸ್ಪರ ಒಪ್ಪಿಗೆಯಿಂದ ಆದ ವಿಚ್ಚೇದನ ಎಂದು ನಟ ಹೇಳಿದರೆ ಅವರ ಪತ್ನಿ ಅದನ್ನು ನಿರಾಕರಿಸಿದ್ದರು. ವಿಚ್ಚೇದನ ಗಂಡನ ನಿರ್ಣಯ ಎಂದಿದ್ದರು ಆರತಿ.
ಜಯಂ ರವಿ ವಿಚ್ಚೇದನದ ಬೆನ್ನಲ್ಲೇ ನಟನಿಗೆ ಗಾಯಕಿಯೊಬ್ಬರ ಜೊತೆಗೆ ಅಫೇರ್ ಇದೆ ಎನ್ನುವ ಸುದ್ದಿ ಹರಿದಾಡಿದ್ದು, ಆ ಗಾಯಕಿಗಾಗಿಯೇ ನಟ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ ಎನ್ನುವ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಹೌದು, ಜಯಂ ರವಿ ಜೀವನದಲ್ಲಿ ಕೆನೀಷಾ (Kenishaa) ಎನ್ನುವ ಗಾಯಕಿಯ ಹೆಸರು ಈಗ ತಳಕು ಹಾಕಿಕೊಂಡಿದೆ.
ಕೆನೀಷಾ ಮೂಲತಃ ಬೆಂಗಳೂರಿನವರು ಎನ್ನಲಾಗಿದ್ದು, ಗೋವಾ (Goa) ಪಬ್ ಗಳಲ್ಲಿ ಹಾಡಿ ಜನಪ್ರಿಯತೆ ಪಡೆದು ಅನಂತರ ಸ್ವತಂತ್ರವಾಗಿ ಮ್ಯೂಸಿಕ್ ಮತ್ತು ಆ್ಯಕ್ಟಿಂಗ್ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ತಮಿಳು ಮಾದ್ಯಮವೊಂದರ ವರದಿಯ ಪ್ರಕಾರ ಕೆನಿಷಾ ಜೊತೆಗಿನ ಆತ್ಮೀಯತೆಯೇ ಜಯಂ ರವಿ ವಿಚ್ಚೇದನಕ್ಕೆ ಕಾರಣ ಎನ್ನಲಾಗಿದೆ.
ಇತ್ತೀಚಿಗೆ ಜಯಂ ರವಿ ಆಗಾಗ ಗೋವಾಗೆ ಹೋಗುತ್ತಿದ್ದು ಈ ವೇಳೆಯಲ್ಲೇ ಇಬ್ಬರಿಗೂ ಸ್ನೇಹ ಆಗಿದೆ ಎನ್ನಲಾಗಿದೆ. ಕುಟುಂಬಕ್ಕಿಂತ ನಟ ಹೆಚ್ಚಾಗಿ ಗೋವಾದಲ್ಲೇ ಸಮಯ ಕಳೆಯುತ್ತಿದ್ದು, ಅವರು ಅಲ್ಲಿ ಕೆನಿಷಾ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ ಎನ್ನುವ ಸುದ್ದಿಗಳು ಎಲ್ಲರಿಗೂ ಈಗ ಶಾಕ್ ಅನ್ನು ನೀಡುತ್ತಿದೆ.
Ananya Panday: ಅನಂತ್ ಅಂಬಾನಿ ಮದುವೇಲಿ ಸೆಲೆಬ್ರಿಟಿಗಳಿಗೆ ಕೊಟ್ಟ ಹಣ ಎಷ್ಟು? ಅನನ್ಯ ಪಾಂಡೆ ಶಾಕಿಂಗ್ ಮಾತು