Hardik Ananya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ (Natasha) ನಡುವಿನ ವಿಚ್ಚೇದನದ ವಿಚಾರ ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳಲ್ಲಿ ಸುದ್ದಿಯಾದ ಬಹು ಚರ್ಚಿತ ವಿಚಾರಗಳಲ್ಲಿ ಒಂದಾಗಿತ್ತು. ಆರಂಭದಲ್ಲಿ ಅದೊಂದು ವದಂತಿ ಎನ್ನಲಾಗಿತ್ತಾದ್ರೂ ಅನಂತರ ಹಾರ್ದಿಕ್ ಮತ್ತು ನತಾಶಾ ಅಧಿಕೃತವಾಗಿ ವಿಚ್ಚೇದನ ಘೋಷಣೆ ಮಾಡಿದ ಮೇಲೆ ಎಲ್ಲರಿಗೂ ವಿಷಯ ಸ್ಪಷ್ಟವಾಗಿ ತಿಳಿದಾಗಿದೆ. ಇನ್ನು ನತಾಶಾ ಈಗಾಗಲೇ ಭಾರತ ತೊರೆದು ತಮ್ಮ ತಾಯ್ತಾಡಾದ ಸರ್ಬಿಯಾ ಸೇರಿದ್ದಾರೆ.
ಅತ್ತ ಹೆಂಡತಿಯ ಜೊತೆಗೆ ವಿಚ್ಚೇದನ ಆದ ಬೆನ್ನಲ್ಲೇ ಈಗ ಹಾರ್ದಿಕ್ ಹೆಸರು ಬಾಲಿವುಡ್ ನ ಜನಪ್ರಿಯ ನಟಿ ಅನನ್ಯ ಪಾಂಡೆ ಜೊತೆಗೆ ತಳಕು ಹಾಕಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಅನಂತ್ ಅಂಬಾನಿ ಮದುವೆ ಎಂದರೆ ಸುಳ್ಳಲ್ಲ. ಹೌದು, ಅನನ್ಯ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಇನ್ನು ಹಾರ್ದಿಕ್ ಪತ್ನಿಯಿಂದ ದೂರಾಗಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ಅದ್ದೂರಿಯಾಗಿ ನಡೆದ ಅನಂತ್ ಅಂಬಾನಿ ಮದುವೆಯಲ್ಲಿ ಹಾರ್ದಿಕ್ ಮತ್ತು ಅನನ್ಯ (Hardik Ananya) ಭಾಗಿಯಾಗಿದ್ದರು. ಈ ವೇಳೆ ಇವರು ಜೊತೆಯಾಗಿ ಕಾಣಿಸಿಕೊಂಡರು. ಮದುವೆ ಸಂಭ್ರಮದಲ್ಲಿ ಇಬ್ಬರೂ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು. ವಿಷಯ ಇಷ್ಟೇ ಆಗಿದ್ದರೇ ಯಾರೂ ಏನೂ ಹೇಳುತ್ತಿರಲಿಲ್ಲವೇನೋ.
ಮದುವೆ ಮುಗಿದ ನಂತರ ಹಾರ್ದಿಕ್ ಮತ್ತು ಅನನ್ಯ ಇನ್ಸ್ಟಾಗ್ರಾಂ ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ವಿಷಯ ಸುದ್ದಿಯಾದ ಕೂಡಲೇ ಎಲ್ಲಾ ಕಡೆ ಹೊಸ ಚರ್ಚೆಗಳು ಶುರುವಾಗಿದೆ. ಹಾರ್ದಿಕ್ ವಿಚ್ಚೇದನ ಪಡೆದ ನಂತರ ಬಾಲಿವುಡ್ ಬೆಡಗಿಯ ಹಿಂದೆ ಬಿದ್ರಾ? ಎಂದು ನೆಟ್ಟಿಗರು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.
Dhruva Sarja: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್ ಪ್ರಕರಣದ ಬಗ್ಗೆ ಧೃವ ಸರ್ಜಾ ಫಸ್ಟ್ ರಿಯಾಕ್ಷನ್