Alia Bhatt : ಬಾಲಿವುಡ್ (Bollywood) ಬೆಡಗಿ, ಸ್ಟಾರ್ ನಟಿ ಆಲಿಯಾ ಭಟ್ (Alia Bhatt) ಅವರ ಮುಖಕ್ಕೆ ಪಾರ್ಶ್ವವಾಯು ಆಗಿದೆ ಎನ್ನುವ ಒಂದು ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುದ್ದಿ ಎಲ್ಲೆಡೆ ವೈರಲ್ ಆದ ಕೂಡಲೇ ನಿನ್ನೆ ಅಂದರೆ ಶುಕ್ರವಾರದಂದು ಆಲಿಯಾ ಭಟ್ ಪೋಸ್ಟ್ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಬೊಟೊಕ್ಸ್ ಸರ್ಜರಿಗೆ ಒಳಗಾಗಿದ್ದಾರೆ.
ಅದರಿಂದಾಗಿ ನಟಿಯ ಮುಖಕ್ಕೆ ಪಾರ್ಶ್ವವಾಯು ಹೊಡೆದಿದ್ದು, ಅವರ ಮುಖದಲ್ಲಿ ಕೆಲವು ಬದಲಾವಣೆಗಳು ಉಂಟಾಗಿದೆ ಎಂದು ಹೇಳುವ ಒಂದಷ್ಟು ವೀಡಿಯೋಗಳು ಹರಿದಾಡಿದೆ.
ಈ ವಿಚಾರಕ್ಕೆ ಕೋಪಗೊಂಡಿರುವ ನಟಿ ಈಗ ಪೋಸ್ಟ್ ಒಂದರ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ನಟಿ ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುವವರಿಗೆ ತಿರುಗೇಟನ್ನ ನೀಡಿದ್ದಾರೆ.
ನಟಿಯು, ಕಾಸ್ಮೆಟಿಕ್ ಸರ್ಜರಿ (Cosmetic Surgery) ಆಯ್ಕೆಮಾಡುವವರ ಬಗ್ಗೆ ಜಡ್ಜ್ ಮಾಡೋ ಅಧಿಕಾರ ಯಾರಿಗೂ ಇಲ್ಲ. ನನ್ನ ವಿಷಯದಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ನಾನು ಮಾಡಿಸಿಕೊಂಡಿರುವ ಬೊಟೊಕ್ಸ್ ಸರ್ಜರಿ ದೋಷಪೂರಿತ ಎನ್ನುವ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ.
ಸರ್ಜರಿಯಿಂದ ನನ್ನ ನಗು ಹಾಗೂ ಮುಖದಲ್ಲಿ ಬದಲಾವಣೆ ಕಾಣುತ್ತಿದೆ ಎಂದು ತೋರಿಸುವಂತೆ ಎಡಿಟ್ ಮಾಡಿದ್ದಾರೆ. ಕೇವಲ ಕ್ಲಿಕ್ ಗಾಗಿ, ಜನರ ಗಮನ ಸೆಳೆಯಲು ಹೀಗೆಲ್ಲಾ ಹೇಳುತ್ತಿರುವಿರಿ. ಅದಕ್ಕೆ ಅರ್ಥವಿಲ್ಲ. ವೈರಲ್ ವೀಡಿಯೋಗಳ ಪ್ರಕಾರ ನನ್ನ ದೇಹದ ಭಾಗ ಒಂದಕ್ಕೆ ಪಾರ್ಶ್ವವಾಯು ಆಗಿದೆ ಎನ್ನುವುದು ಸುಳ್ಳು ಎಂದು ನಟಿ ಹೇಳಿದ್ದಾರೆ.
ಇಂಡಸ್ಟ್ರಿಗೆ ಶಾಕ್ ಕೊಟ್ಟ ಸುದ್ದಿ! ಸಲ್ಮಾನ್ ಖಾನ್ ಗೆಸ್ಟ್ ಹೌಸ್ ನಲ್ಲಿ Rashmika Mandanna