Entertainment

South Actress: ನವ ಯುವ ನಟಿಯರು ಏನಾದ್ರು?? ಯುವ ಸ್ಟಾರ್ ನಟನ ಸಿನಿಮಾಕ್ಕೆ ಸಮಂತಾ, ತ್ರಿಶಾ ನಾಯಕಿಯರು

South Actress: ಪುಷ್ಪ ಸಿನಿಮಾ ಮೂಲಕ ಐಕಾನ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ (Allu Arjun) ಜೊತೆಗೆ ಜವಾನ್ ನಂತಹ ಸೂಪರ್ ಹಿಟ್ ಸಿನಿಮಾ ನಿರ್ದಶನ ಮಾಡಿದ ಆಟ್ಲಿ (Atlee) ಸೇರಿ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಹೊಸ ಸುದ್ದಿ ಹೊರ ಬಂದ ಮೇಲೆ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಘೋಷಣೆ ಆಗಿದ್ದೇ ತಡ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗೋ ನಟಿ (South Actress) ಸಮಂತಾ ಎನ್ನುವ ಸುದ್ದಿ ಇನ್ನಷ್ಟು ಅಚ್ಚರಿಯನ್ನು ಮೂಡಿಸಿದೆ ಅಂದ್ರೆ ಖಂಡಿತ ಸುಳ್ಳಲ್ಲ.

ಸನ್ ಆಫ್ ಸತ್ಯ ಮೂರ್ತಿ ಯಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿದ್ದ ಸಮಂತಾ (Samantha) ಅನಂತರ ಪುಷ್ಪ ಸಿನಿಮಾದಲ್ಲಿ ಬೋಲ್ಡ್ ಹಾಡಿಗೆ ಸಖತ್ ಬೋಲ್ಡ್ ಆಗಿ ಅಲ್ಲು ಅರ್ಜುನ್ ಜೊತೆಗೆ ಸಮಂತಾ ಹೆಜ್ಜೆ ಹಾಕಿ ಸಂಚಲನ ಸೃಷ್ಟಿಸಿದ್ದರು. ಈಗ ವರ್ಷಗಳ ನಂತರ ಮತ್ತೆ ಸಮಂತಾ ಅಲ್ಲು ಅರ್ಜುನ್ ಗೆ ನಾಯಕಿ ಆಗ್ತಾರೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.‌ ಆದರೆ ಈ ಥ್ರಿಲ್ ನಡುವೆಯೇ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಂದಿದೆ.

ಹೌದು, ಈಗ ಬಂದಿರೋ ಹೊಸ ಸುದ್ದಿ ಏನಂದ್ರೆ ಅಲ್ಲು ಅರ್ಜುನ್ ಮತ್ತು ಆ್ಯಟ್ಲಿ ಕಾಂಬಿನೇಷನ್ ಸಿನಿಮಾದಲ್ಲಿ ಒಬ್ಬ ನಾಯಕಿಯಲ್ಲ ಬದಲಾಗಿ ಇಬ್ಬರು ನಾಯಕಿಯರು ಎನ್ನಲಾಗಿದ್ದು, ಮತ್ತೊಬ್ಬ ನಾಯಕಿಯಾಗಿ ಸದ್ಯಕ್ಕೆ ಸೌತ್ ಸಿನಿಮಾದ ಅತಿ ಹೆಚ್ಚು ಸಂಭಾವನೆ ಪಡೀತಾ ಇರೋ ನಟಿ ತ್ರಿಶಾ (Trisha) ಅಂತ ಹೇಳಲಾಗ್ತಿದೆ. ಒಂದು ಕಡೆ ಸಮಂತಾ, ಮತ್ತೊಂದು ಕಡೆ ತ್ರಿಶಾ ಇಬ್ಬರ ಜೊತೆಗೆ ಅಲ್ಲು ಅರ್ಜುನ್ ಡ್ಯುಯೆಟ್ ಅನ್ನೋ ಸುದ್ದಿ ಹರಿದಾಡಿದೆ.

ಒಟ್ನಲ್ಲಿ ಯುವ ನವ ನಟಿಯರಿಗಿಂತ ಸೀನಿಯರ್ ಹೀರೋಯಿನ್ ಗಳು ಮತ್ತೆ ಮಿಂಚ್ತಾ ಇರೋದಂತೂ ಪಕ್ಕಾ ಆಗಿದೆ. ಒಂದು ಕಡೆ ನಯನತಾರಾ, ಮತ್ತೊಂದು ಕಡೆ ತ್ರಿಶಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿಯರಾಗಿ ಕಾಣಿಸಿಕೊಂಡಿದ್ದು, ಖುಷಿ ನಂತರ ಬ್ರೇಕ್ ನಲ್ಲಿದ್ದ ಸಮಂತಾ ಈಗ ಅಲ್ಲು ಅರ್ಜುನ್ ಸಿನಿಮಾದಲ್ಲಿ ನಾಯಕಿ ಅನ್ನೋದು ಬಹಳ ವಿಶೇಷ ಎನಿಸಿದೆ.‌

Soma Shekar

Recent Posts

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

2 hours ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

20 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

21 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

1 day ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

1 day ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

1 day ago

This website uses cookies.