Pradeep Eshwar: ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾದಲ್ಲಿ ಶಾಸಕ ಪ್ರದೀಪ್ ಈಶ್ವರ್ ? ಏನಿದು ಹೊಸ ಸುದ್ದಿ

Written by Soma Shekar

Published on:

---Join Our Channel---

Pradeep Eshwar: ಟಾಲಿವುಡ್‌ ನ ಹಿರಿಯ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಜೊತೆ ನಟಿಸುವ ಅವಕಾಶ ತನಗೆ ಸಿಕ್ಕಿದೆ ಎಂಬುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆನ್ನುವ ವಿಷಯ ಮಾದ್ಯಮಗಳಲ್ಲಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರು ನಾನು ಮೆಗಾಸ್ಟಾರ್ ಚಿರಂಜೀವಿಯವರ ದೊಡ್ಡ ಅಭಿಮಾನಿ. ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ನಾನು ಚಿರಂಜೀವಿ ಅವರ ಸಮುದಾಯದ ಹುಡುಗ ಎಂದೂ ಹೇಳಿದ್ದು, ನಾನು ಶಾಸಕನಾದಾಗಲೂ ಮನೆಗೆ ಕರೆಸಿದ್ದರು ಎನ್ನುವ ಮಾತುಗಳನ್ನ ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರು ಚುನಾವಣೆಯಲ್ಲಿ ಗೆದ್ದಾಗ ಫೋನ್ ಮಾಡಿ ವಿಶ್ ಮಾಡಿದ್ದೆ. ನಟನೆಯ ಅವಕಾಶದ ಕುರಿತಾಗಿ ಚರ್ಚೆ ನಡೆದಿರೋದು ನಿಜವಾದ ವಿಷಯ. ಪ್ರಸ್ತುತ ಚಿರಂಜೀವಿ ಅವರು ವಿಶ್ವಂಭರ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಇದಾದ ನಂತರ ಅವರ ಮುಂದಿನ ಸಿನಿಮಾದಲ್ಲಿ ಅವಕಾಶದ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದಾರೆ.

ಪಾತ್ರ ಯಾವುದು? ಏನು? ಎನ್ನುವ ವಿಚಾರಗಳನ್ನು ಅವರೇ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ ಎಂದು ಪ್ರದೀಪ್ ಈಶ್ವರ್ ಅವರು ತಿಳಿಸಿದ್ದಾರೆ. ಚಿರಂಜೀವಿ ಅವರ ಜೊತೆಗೆ ಡ್ಯಾನ್ಸ್ ಮಾಡಬೇಕು ಎನ್ನುವುದು ಆಸೆಯಾಗಿದ್ದು, ಅವರ ಜೊತೆ ಚಿಕ್ಕ ಸ್ಟೆಪ್ ಹಾಕಲು ಅವಕಾಶ ಸಿಕ್ಕರೂ ಅದು ಸೌಭಾಗ್ಯ ಎನ್ನುವ ಮಾತನ್ನು ಹೇಳಿದ್ದಾರೆ.‌

Leave a Comment