Aman Sehrawat : ಇದ್ದಿದ್ದು 10 ಗಂಟೆ ಸಮಯ, 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಅಮನ್ ರೋಚಕ ಸಾಧನೆ

Written by Soma Shekar

Published on:

---Join Our Channel---

Aman Sehrawat: ಸ್ಪರ್ಧೆಗೆ ನಿಗಧಿ ಪಡಿಸಲಾಗಿರುವ ತೂಕಗಿಂತ ಹೆಚ್ಚಿನ ತೂಕವಿದ್ದ ಕಾರಣಕ್ಕೆ ಮಹಿಳಾ ಕುಸ್ತಿಪಟು ವಿನೇಶ್‌ ಪೋಗಟ್‌(vinesh phogat) ಅವರನ್ನ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ವಿಚಾರವಾಗಿ ಸಾಕಷ್ಟು ಅಸಮಾಧಾನ ಹೊರ ಬಿದ್ದಿದೆ.‌ ಇವೆಲ್ಲವುಗಳ ನಡುವೆಯೇ ಶುಕ್ರವಾರ ನಡೆದಿದ್ದ 57 ಕೆಜಿ ವಿಭಾಗದ ಪುರುಷರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಕ್ರೀಡಾಪಟು ಅಮನ್​ ಸೆಹ್ರಾವತ್(Aman Sehrawat)​ ಅವರಿಗೂ ಇದೇ ಭಯ ಕಾಡಿತ್ತು ಎನ್ನಲಾಗಿದೆ.

ಅಮನ್ ಅವರು ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕವನ್ನು ಇಳಿಸಿಕೊಂಡು ಪದಕವನ್ನು ಗೆದ್ದ ಸ್ಪೂರ್ತಿದಾಯಕ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ವೀರೇಂದ್ರ ದಹಿಯಾ(virender dahiya coach) ಅವರು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಅಮನ್​ ಅವರ ದೇಹದ ತೂಕ ಗುರುವಾರ ಸಂಜೆ, ಅಂದರೆ ಸೆಮಿಫೈನಲ್​ ಮುಗಿದ ನಂತರ 61.5 ಕೆಜಿ ಆಗಿತ್ತು.

ಅಂದರೆ ಅವರು ನಿಗಧಿತ ಮಿತಿಗಿಂತ 4.5 ಕಿಲೋಗ್ರಾಂಗಳಷ್ಟು ಹೆಚ್ಚು ತೂಕವನ್ನು ಅಮನ್ ಹೊಂದಿದ್ದರು. ಅದಾಗಲೇ ಹೆಚ್ಚುವರಿ ತೂಕದ ಕಾರಣದಿಂದಾಗಿ ಒಂದು ಪದಕ ಕಳೆದುಕೊಂಡಿದ್ದ ಕಾರಣ ಅಮನ್ ಅವರ ಮೇಲೆ ಒಂದು ರೀತಿಯ ಒತ್ತಡ ಇತ್ತು ಅನ್ನೋದ್ರಲ್ಲಿ ಅನುಮಾನ ಇಲ್ಲ.‌ ಅದಕ್ಕೆ ಅಮನ್ ಈ ಅವಕಾಶ ತಪ್ಪಿಸಿಕೊಳ್ಳಬಾರದೆಂದು ನಿರ್ಧಾರ ಮಾಡಿದ್ದರು.

ತೂಕ ಇಳಿಸಿಕೊಳ್ಳುವುದಕ್ಕಾಗಿ ಅವರು ಕುಸ್ತಿ ತಂಡದ ಹಿರಿಯ ಭಾರತೀಯ ತರಬೇತುದಾರರಾದ ಜಗಮಂದರ್ ಸಿಂಗ್ ಅಮನ್​ ಅವರು ಅಮನ್ ಗೆ ವ್ಯಾಯಾಮವನ್ನು ಮಾಡಿಸಲು ಪ್ರಾರಂಭ ಮಾಡಿಸಿದರು. ಅವರಿಗೆ ಉಳಿದಿದ್ದು ಕೇವಲ ಹತ್ತು ಗಂಟೆಗಳ ಸಮಯ. ಆರಂಭದಲ್ಲಿ ಅಮನ್ ಗೆ ಒಂದು ಗಂಟೆ ಟ್ರೆಡ್ ಮಿಲ್ ನಲ್ಲಿ ನಾನ್ ಸ್ಟಾರ್ ಓಟ ಅಭ್ಯಾಸ ಮಾಡಿಸಲಾಗಿತ್ತು.

ನಂತರ ಅವರಿಗೆ 5 ನಿಮಿಷಗಳ ವಿಶ್ರಾಂತಿಯನ್ನು ನೀಡಿ, ಸತತ ಒಂದೂವರೆ ಗಂಟೆ ಮ್ಯಾಚ್ ಸೆಷನ್ ಅಭ್ಯಾಸ ಮಾಡಿಸಿ ಅನಂತರ ಅರ್ಧಗಂಟೆ ವಿರಾಮ ನೀಡಲಾಯಿತು. ವಿರಾಮದ ನಂತರ ಮೂವತ್ತು ನಿಮಿಷಗಳ ಕಾಲ ಬಿಸಿ ನೀರಿನ ಸ್ನಾನ ಮಾಡಿಸಲಾಯಿತು. ಎಲ್ಲಾ ರೀತಿಯ ವ್ಯಾಯಮ ಮುಗಿದ ನಂತರ ಅಮನ್ ಅವರ ತೂಕದಲ್ಲಿ 3.6 ಕಿಲೋ.ಗ್ರಾಂ ಕಡಿಮೆಯಾಗಿತ್ತು.

ಇದೆಲ್ಲಾ ಆದ ಮೇಲೆ ಕೊನೆಯದಾಗಿ ಮಸಾಜ್ ಮಾಡಿ, ನಂತರ ಲಘು ಜಾಗಿಂಗ್ ಮತ್ತು 15 ನಿಮಿಷಗಳ ರನ್ನಿಂಗ್ ಸೆಷನ್ ಮಾಡಲಾಯಿತು. ಇದಾದ ನಂತರ ಬೆಳಗಿನ ಜಾವ 4:30 ರ ಸಮಯಕ್ಕೆ ಅಮನ್ ಅವರ ತೂಕ 56.9 ಕಿಲೋ ಗೆ ಕಡಿಮೆಯಾಗಿತ್ತು, ಅಂದರೆ ಅದು ಅನುಮತಿಯ ಮಿತಿಗಿಂತ 100 ಗ್ರಾಂ ಕಡಿಮೆ ಇದ್ದದ್ದನ್ನ ನೋಡಿದ ಮೇಲೆ ನಿಟ್ಟುಸಿರುವ ಬಿಡುವ ಹಾಗಾಯಿತೆಂದು ಕೋಚ್​ ವೀರೇಂದ್ರ ದಹಿಯಾ ಹೇಳಿದ್ದಾರೆ.

Tollywood Actress: ಗ್ಲಾಮರ್ ಗೊಂಬೆ ಅನಸೂಯ ಮುಖಕ್ಕೆ ಇದೇನಾಯ್ತು? ನಟಿಗೆ ಹಿಗ್ಗಾಮುಗ್ಗಾ ಬಾರಿಸಿದ್ದು ಯಾರು?

Leave a Comment