Harshika Bhuvan: ಇಷ್ಟು ಬೇಗ ಮಕ್ಕಳಾ? ಅನ್ನೋರಿಗೆ ಅರ್ಥ ಆಗೋ ಹಾಗೆ ಉತ್ತರ ಕೊಟ್ಟ ಹರ್ಷಿಕಾ ಭುವನ್ ದಂಪತಿ

Written by Soma Shekar

Published on:

---Join Our Channel---

Harshika Bhuvan: ಸ್ಯಾಂಡಲ್ವುಡ್ ನ ಜನಪ್ರಿಯ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ (Harshika Bhuvan) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ಒಂದು ವಿಶೇಷವಾದ ಹಾಗೂ ವಿಶಿಷ್ಟವಾದ ಫೋಟೋಶೂಟ್ ಮಾಡಿಸುವ ಮೂಲಕ ತಾವು ತಂದೆ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದರು. ಅವರ ಫೋಟೋಗಳನ್ನು ನೋಡಿ ಬಹಳಷ್ಟು ಜನ ಮೆಚ್ಚುಗೆಗಳನ್ನು ನೀಡಿ ಶುಭ ಹಾರೈಸಿದ್ದರು.

ಆದರೆ ಇದೇ ವೇಳೆ ಕೆಲವರು ಮದುವೆಯಾಗಿ ವರ್ಷದೊಳಗೆ ಮಗುವಿನ ನಿರೀಕ್ಷೆ ಮಾಡುತ್ತಿರುವ ವಿಚಾರ ಹಂಚಿಕೊಂಡಿದ್ದನ್ನ ನೋಡಿ ಇಷ್ಟು ಬೇಗ ಮಗುನಾ? ಸಿನಿಮಾ ರಂಗಕ್ಕೆ (Sandalwood) ವಿದಾಯವನ್ನು ಹೇಳುತ್ತೀರಾ ? ಇಂಬಿತ್ಯಾದಿ ಪ್ರಶ್ನೆಗಳನ್ನ ಮಾಡಿದ್ದರು. ಹೀಗೆ ಪ್ರಶ್ನೆ ಮಾಡಿದವರಿಗೆ ಮಾದ್ಯಮಗಳ ಮುಂದೆ ಭುವನ್ ಮತ್ತು ಹರ್ಷಿಕಾ ಅವರು ಅರ್ಥಪೂರ್ಣವಾದ ಉತ್ತರವನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಭುವನ್ ಪೊನ್ನಣ್ಣನವರು,‌ ನಮಗೆ ತುಂಬಾ ಖುಷಿ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಹೇಳೋದು ಏನಂದ್ರೆ, ಈಗಿನ ಸಮಯದಲ್ಲಿ ಬಹಳಷ್ಟು ಜನ ಫ್ಯಾಮಿಲಿ ಪ್ಲಾನಿಂಗ್ ಅಂತ ಅನ್ಕೊಂಡು 5 – 10 ವರ್ಷಗಳ ಕಾಲ ಮಕ್ಕಳನ್ನ ಮಾಡಿಕೊಳ್ಳದೇ ಹಾಗೆ ಇದ್ದು ಬಿಡ್ತಾರೆ. ನನ್ನ ಪ್ರಕಾರ ಅದು ತಪ್ಪು. ಮದುವೆಯಾದ ಕೂಡಲೇ ಮಕ್ಕಳನ್ನು ಮಾಡಿಕೊಳ್ಳಿ. ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ನೋಡಿದ್ರೆ ಜಗತ್ತು ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಇರುವಷ್ಟು ದಿನ ಖುಷಿಯಾಗಿರಿ ಎಂದಿದ್ದಾರೆ.

ಇನ್ನು ಹರ್ಷಿಕಾ ಅವರು ಮಾತನಾಡಿ ಭುವನ್ ಅವರ ನಿರ್ಧಾರವೇ ನನ್ನ ನಿರ್ಧಾರವೂ ಆಗಿದ್ದು, ಸಾಕಷ್ಟು ವರ್ಷ ಸ್ನೇಹಿತರಾಗಿದ್ದ ನಾವು ನಂತರ ಮದುವೆಯಾಗಿದ್ದೇವೆ.‌ ನಮ್ಮ ನಿರ್ಧಾರ ಅದೇ ಇತ್ತು. ದೇವರು ಮಕ್ಕಳು ಕೊಟ್ಟರೆ ಮಾಡಿಕೊಳ್ಳಬೇಕು ಎಂದೇ ಇತ್ತು. ದೇವರ ಆಶೀರ್ವಾದದಿಂದ ಒಳ್ಳೆಯದೇ ಆಗಿದೆ. ಮುಂದೆ ಸಿನಿಮಾ ಮಾಡ್ತೀನಿ. ತಾಯಿಯಾಗಿ ಮಗುವಿಗೆ ಎಷ್ಟು ಸಮಯ ಕೊಡಬೇಕು ಅಷ್ಟು ಕೊಡ್ತೀನಿ ಎಂದು ಹೇಳಿದ್ದಾರೆ.

Actress Anjali: ಅಂತಹ ದೃಶ್ಯದಲ್ಲಿ ನಟಿಸುವಾಗ ಎಲ್ಲರನ್ನೂ ಹೊರಗೆ ಕಳಿಸುತ್ತಿದ್ದೆ; ಮೊದಲ ಬಾರಿಗೆ ಮೌನ ಮುರಿದ ಅಂಜಲಿ

Leave a Comment