Hardik Pandya: ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನತಾಶಾ (Natasha) ಜೋಡಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಇವರು ಲವ್ ಸ್ಟೋರಿ, ಮಕ್ಕಳು ಹಾಗೂ ಮದುವೆ ವಿಚಾರವಾಗಿ ಈ ಹಿಂದೆ ಸಾಕಷ್ಟು ಸಲ ಸುದ್ದಿಗಳಾಗಿದೆ. ಆದರೆ ಈಗ ಒಂದು ಹೊಸ ಸುದ್ದಿ ವೈರಲ್ ಆಗುತ್ತಿದ್ದು, ಎಲ್ಲರಿಗೂ ಶಾಕಿಂಗ್ ಎನಿಸಿದೆ. ಹೌದು, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ಬಿರುಕು ಉಂಟಾಗಿದ್ದು, ಈ ಜೋಡಿ ಈಗಾಗಲೇ ವಿಚ್ಚೇದನ ಪಡೆದಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.
ಹಾರ್ದಿಕ್ ಪಾಂಡ್ಯ ವಿಚ್ಛೇದನದ ನಂತರ ಪತ್ನಿಗೆ ತಮ್ಮ ಆಸ್ತಿಯಲ್ಲಿನ 70% ನೀಡಿದ್ದಾರೆ ಎನ್ನುವುದು ಸುದ್ದಿ. ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಮೂಲತಃ ಭಾರತದವರಲ್ಲ, ಅಕೆ ಸೈಬೀರಿಯಾ ದೇಶದವರಾಗಿದ್ದು, ನತಾಶಾ ಮತ್ತು ಹಾರ್ದಿಕ್ ಮೊದಲ ಬಾರಿಗೆ ಮುಂಬೈ ನ ನೈಟ್ ಕ್ಲಬ್ (Mumbai Night Club) ಒಂದರಲ್ಲಿ ಭೇಟಿಯಾದರು. ಅಲ್ಲಿಂದ ಅವರ ಸ್ನೇಹ ಆರಂಭವಾಯಿತು. ಅವರ ಸ್ನೇಹ ದಿನ ಕಳೆದಂತೆ ಇನ್ನಷ್ಟು ಗಾಢವಾಯಿತು.
2020 ರಲ್ಲಿ ಹಾರ್ದಿಕ್ ನತಾಶಾಗೆ ಪ್ರಪೋಸ್ ಮಾಡಿದ ಮೇಲೆ ಅವರ ನಡುವಿನ ಸ್ನೇಹ ಪ್ರೀತಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಅದೇ ವರ್ಷ ಮೇ ತಿಂಗಳಲ್ಲಿ ನತಾಶಾ ಗರ್ಭಿಣಿಯಾದರು. ನತಾಶಾ ಮತ್ತು ಹಾರ್ದಿಕ್ ಒಂದು ಗಂಡು ಮಗುವಿನ ತಂದೆ ತಾಯಿ ಆದರು. ಮಗನ ಜನನದ ನಂತರ ಈ ಜೋಡಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು.
ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ಬಿರುಕು ಉಂಟಾಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ವಿಷಯ ಸುದ್ದಿಯಾದ ಬೆನ್ನಲ್ಲೇ ಹಾರ್ದಿಕ್ ನ ಟ್ರೋಲ್ ಕೂಡಾ ಮಾಡ್ತಿದ್ದಾರೆ ನೆಟ್ಟಿಗರು. ಬಿರುಗಾಳಿಯಂತೆ ಹರಡುತ್ತಿರುವ ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಈ ಹಾರ್ಡಿಕ್ ಅಥವಾ ನತಾಶಾ ಸ್ಪಷ್ಟನೆ ನೀಡಬೇಕಾಗಿದೆ.