Government Scheme: ಕೇಂದ್ರ ಸರ್ಕಾರವು ದೇಶದ ಪ್ರಜೆಗಳಿಗಾಗಿ ಹತ್ತು ಹಲವು ರೀತಿಯ ಯೋಜನೆಗಳನ್ನು (Government Schemes) ಜಾರಿಗೆ ತಂದದೆ. ಈ ಯೋಜನೆಗಳ ಫಲವನ್ನು ಅರ್ಹರು ಪಡೆದುಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶವಾಗಿದೆಯಾದರೂ ಸಹಾ ಅನೇಕರಿಗೆ ಇಂತಹ ಯೋಜನೆಗಳ ಕುರಿತಾಗಿ ಸೂಕ್ತವಾದ ಮಾಹಿತಿಯಿಲ್ಲ ಎನ್ನುವುದು ಸಹಾ ವಾಸ್ತವದ ವಿಚಾರವಾಗಿದೆ.
ಅಂತಹ ಯೋಜನೆಗಳಲ್ಲಿ ಪಿಂಚಣಿ ಯೋಜನೆಗಳು ಸಹಾ ಸೇರಿದ್ದು, ಇವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸಹಾ ನಡೆಸುತ್ತಿವೆ. ಇಂದು ನಾವು ನಿಮಗೆ ಕೇಂದ್ರ ಸರ್ಕಾರ ಆರಂಭಿಸಿರುವಂತಹ ಅಟಲ್ ಪಿಂಚಣಿ ಯೋಜನೆಯ (Atal Pension Scheme) ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಅಟಲ್ ಪಿಂಚಣಿ ಯೋಜನೆಯ ಪ್ರಕಾರ 60 ವರ್ಷ ವಯಸ್ಸಾದವರು ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಆದರೂ ಈ ಯೋಜನೆಯ ಲಾಭ ಪಡೆಯಲು, ನೀವು ಮೊದಲು ಅದರಲ್ಲಿ ಹೂಡಿಕೆಯನ್ನು ಮಾಡಬೇಕಾಗುತ್ತದೆ ಎನ್ನುವುದನ್ನ ತಿಳಿದಿರಬೇಕು. ನೀವು 18 ನೇ ವಯಸ್ಸಿನಿಂದಲೇ ಪ್ರತಿ ತಿಂಗಳು 210 ರೂ ಹೂಡಿಕೆ ಮಾಡಬೇಕು.
ನಂತರ ಅರವತ್ತು ವರ್ಷ ವಯಸ್ಸಿನ ನಂತರ ನಿಮಗೆ ತಿಂಗಳಿಗೆ 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ.18 ರಿಂದ 40 ವರ್ಷದೊಳಗಿನ ವ್ಯಕ್ತಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯ ಮೂಲಕ, ನೀವು ವೃದ್ಧಾಪ್ಯದಲ್ಲಿ ಸ್ವಾವಲಂಬಿಯಾಗಬಹುದು. ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಪಿಂಚಣಿ ಸುಲಭವಾಗಿ ಸಿಗುತ್ತದೆ. ನೀವು ಇಂದೇ ಅರ್ಜಿ ಸಲ್ಲಿಸಿ.
Serial Actress: ಥೈಲ್ಯಾಂಡ್ ನಲ್ಲಿ ಪೋಸ್ ಕೊಟ್ಟ ಈ ಕಿರುತೆರೆಯ ನಟಿ ಯಾರು ಗೊತ್ತಾಯ್ತಾ? ಹೇಳಿ ನೋಡೋಣ