Yash Toxic : ಯಶ್ ಸಿನಿಮಾದಲ್ಲಿ ನಾಲ್ಕು ಜನ ಸ್ಟಾರ್ ಹೀರೋಯಿನ್ ಗಳು, ಅಪ್ಡೇಟ್ ಕೇಳಿ ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Toxic : ಕೆಜಿಎಫ್ (KGF) ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ಸಿನಿಮಾ ಯಾವುದು ಎನ್ನುವ ನಿರೀಕ್ಷೆಯಲ್ಲಿ ಬಹಳಷ್ಟು ದಿನಗಳ ಕಾದಿದ್ದ ಅಭಿಮಾನಿಗಳಿಗೆ ಈಗಾಗಲೇ ಅದಕ್ಕೆ ಉತ್ತರ ಸಿಕ್ಕಿದೆ. ಡ್ರ” ಗ್ ಮಾ ಫಿ ಯಾ ಹಿನ್ನೆಲೆಯ ಕಥೆಯನ್ನು ಆಧರಿಸಿದ ಟಾಕ್ಸಿಕ್ (Toxic) ಸಿನಿಮಾದಲ್ಲಿ ಯಶ್ ಅವರು ನಾಯಕನಾಗಿ ನಟಿಸುತ್ತಿದ್ದು, ಜನಪ್ರಿಯ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಟಾಕ್ಸಿಕ್ ಸಿನಿಮಾದ ಕುರಿತಾಗಿ ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಸುದ್ದಿ ಮಾದ್ಯಮಗಳಲ್ಲಿ ಕೆಲವೊಂದು ಅಪ್ಡೇಟ್ ಗಳು ಹೊರಬರುವ ಮೂಲಕ ಸಿನಿಮಾ ಕುರಿತಾಗಿ ಇನ್ನಷ್ಟು ಕುತೂಹಲವನ್ನ ಕೆರಳಿಸುತ್ತಿವೆ. ಹೊಸ ಸುದ್ದಿಗಳ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಒಬ್ಬರು ಇಬ್ಬರಲ್ಲ ಬದಲಾಗಿ ಬರೋಬ್ಬರಿ ನಾಲ್ಕು ಜನ ಹೀರೋಯಿನ್ ಗಳಿದ್ದಾರೆ ಎನ್ನಲಾಗಿದೆ.

ಟಾಕ್ಸಿಕ್ ಸಿನಿಮಾದಲ್ಲಿ ನಾಲ್ಕು ಜನ ಜನಪ್ರಿಯ, ಸ್ಟಾರ್ ನಟಿಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ವಿಷಯ ಈಗ ಪ್ರೇಕ್ಷಕರ ಹಾಗೂ ಅಭಿಮಾನಿಗಳ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಹಾಗಾದರೆ ಯಾರು ಆ ನಾಲ್ಕು ಜನ ನಟಿಯರು ಎನ್ನುವುದಕ್ಕೆ ಇಲ್ಲಿದೆ ಉತ್ತರ.‌

ಟಾಕ್ಸಿಕ್ ಸಿನಿಮಾದಲ್ಲಿ ತಮಿಳು ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ನಾಯಕ ಯಶ್ ರವರ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದೇ ಪಾತ್ರಕ್ಕೆ ಕರೀನಾ ಕಪೂರ್ ಹೆಸರು ಕೇಳಿಬಂದಿತ್ತು. ಆದರೆ ಅನಂತರ ಕರೀನಾ ಬದಲಾಗಿ ನಯನತಾರಾ ಈ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿಯಾಗಿದೆ.

ಈ ಸಿನಿಮಾದಲ್ಲಿ ನಟ ಯಶ್ ಪಕ್ಕ ನಾಯಕಿಯರಾಗಿ ಕಿಯಾರಾ ಅಡ್ವಾಣಿ (Kiara Advani) ಮತ್ತು ತಾರಾ ಸುತಾರಿಯ (Tara Sutaria) ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ ಇವರಲ್ಲಿ ಯಶ್ ಗೆ ಜೋಡಿಯಾಗುವ ಆಯ್ಕೆ ಯಾರು ಅನ್ನೋದನ್ನ ಕಾದು ನೋಡಬೇಕಾಗಿದೆ. ಬಹಳಷ್ಟು ಜನ ಕಿಯಾರಾ ನಾಯಕಿ ಎಂದು ಊಹಿಸಿದ್ದಾರೆ.

ಬಾಲಿವುಡ್ ನ ಮತ್ತೊಬ್ಬ ಪ್ರತಿಭಾವಂತ ನಟಿ ಹುಮಾ ಖುರೇಶಿ (Huma Qureshi) ಟಾಕ್ಸಿಕ್ ಸಿನಿಮಾದ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಅಲ್ಲದೇ ಹುಮಾ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ನ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆನ್ನುವುದು ಎನ್ನುವುದು ವಿಶೇಷ ಆಸಕ್ತಿಯನ್ನು ಕೆರಳಿಸಿದೆ.

ಸಿನಿಮಾದ ಕಲಾವಿದರ ಕುರಿತಾಗಿ ಈಗಾಗಲೇ ಒಂದಷ್ಟು ಸುದ್ದಿಗಳು ವೈರಲ್ ಆಗಿವೆ. ಇನ್ನು ಚಿತ್ರತಂಡದಿಂದ ಈ ಕುರಿತಾಗಿ ಅಧಿಕೃತ ಮಾಹಿತಿ ಹೊರ ಬೀಳಬೇಕಾಗಿದೆ.‌ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಟಾಕ್ಸಿಗ್ ಸಿನಿಮಾದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ ಎನ್ನುವುದು ಖಂಡಿತ ಸುಳ್ಳಲ್ಲ.

Leave a Comment