Yuva Rajkumar : ನಟ ಯುವ ರಾಜ್ಕುಮಾರ್ (Yuva Rajkumar) ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ವಿಚ್ಚೇದನದ ಅರ್ಜಿ ಸಲ್ಲಿಸಿರುವ ವಿಚಾರ ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಈ ವಿಷಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗುತ್ತಿದೆ. ಡಿವೋರ್ಸ್ ನಲ್ಲಿ ಯುವ ರಾಜ್ಕುಮಾರ್ ಅವರು ತನಗೆ ಪತ್ನಿಯಿಂದ ಮಾನಸಿಕ ಹಿಂಸೆ, ಟಾರ್ಚರ್ ಆಗಿದೆ ಎನ್ನುವುದನ್ನು ಉಲ್ಲೇಖ ಮಾಡಿದ್ದಾರೆ. ಆದರೆ ಈಗ ಯುವ ಅವರ ಆರೋಪಗಳಿಗೆ ಶ್ರೀದೇವಿ ಅವರು ಸಹಾ ಪ್ರತಿಕ್ರಿಯೆ ನೀಡಿದ್ದಾರೆ.
ಯುವ ಅವರು ತಮ್ಮ ಪತ್ನಿಗೆ ಡಿವೋರ್ಸ್ ನೀಡುವ ಮೊದಲು ಲೀಗಲ್ ನೋಟೀಸ್ ಅನ್ನು ನೀಡಿದ್ದಾರೆ. ಪತಿಯ ಕಡೆಯಿಂದ ಬಂದಿರುವ ಈ ನೋಟೀಸ್ ಗೆ ಶ್ರೀದೇವಿ (Sridevi) ಅವರು ತಮ್ಮ ಸವಿವರವಾದ ಉತ್ತರವನ್ನು ನೀಡಿದ್ದಾರೆ. ಅವರು ತನಗೂ ಸಹಾ ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ಟಾರ್ಚರ್ ಅನುಭವಿಸಿರುವುದಾಗಿ ಉಲ್ಲೇಖ ಮಾಡಿರುವುದು ಗಮನಾರ್ಹವಾಗಿದೆ.
ಯುವ ಅವರ ಲೀಗಲ್ ನೋಟೀಸ್ ಗೆ ಉತ್ತರ ಕೊಟ್ಟಿರುವ ಶ್ರೀದೇವಿ ಅವರು ಸ್ನೇಹಿತೆಯ ಜೊತೆಗೆ ಮದುವೆಯಾಗಿ, ಈಗ ಸಹ ನಟಿಯ ಜೊತೆ ಲವ್ ಮಾಡುತ್ತಿದ್ದಾರೆ. ನನಗೂ ಮತ್ತು ಯುವರಾಜ್ ಗೂ ನಾಲ್ಕು ವರ್ಷಗಳ ವಯಸ್ಸಿನ ಅಂತರವಿದೆ. ನಾಲ್ಕು ವರ್ಷ ಚಿಕ್ಕವನಾದರೂ ಯುವ ರಾಜ್ ಅವರನ್ನು ಸಹಿಸಿಕೊಂಡಿದ್ದೆ. ಸುಳ್ಳು ಮತ್ತು ಹುರುಳಿಲ್ಲದ ಆರೋಪಗಳಿಂದ ಅವರು ಹಿಂಸೆ ಮಾಡುತ್ತಿದ್ದಾರೆ.
ನೋಟೀಸ್ ನಲ್ಲಿ, ನಿಮ್ಮ ಕಕ್ಷಿದಾರ, ಅವರ ಸಹ ನಟಿ ಸಪ್ತಮಿ ಗೌಡ (Saptami Gowda) ಜೊತೆ ಸಂಬಂಧ ಹೊಂದಿದ್ದರು. ಸುಮಾರು ಒಂದು ವರ್ಷದಿಂದ ಸಪ್ತಮಿ ಗೌಡ ಜೊತೆ ಸಂಬಂಧವನ್ನು ಹೊಂದಿದ್ದಾರೆ. ಕಾನೂನು ನೋಟಿಸ್ ನೀಡುವ ಮೂಲಕ ನಮ್ಮ ಕಕ್ಷಿದಾರರ ವಿರುದ್ಧ ತನ್ನ ಕ್ರೂರ ಉದ್ದೇಶವನ್ನು ದೃಢಪಡಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈಗ ಈ ವಿಚಾರ ಸಾಕಷ್ಟು ವೈರಲ್ ಆಗ್ತಿದೆ.