Eshani: ಕೆಟ್ಟದಾಗಿ ಕಾಮೆಂಟ್ ಮಾಡೋರಿಕೆ ಖಡಕ್ ಆಗಿ ಉತ್ತರ ಕೊಡ್ತಾ ಚಳಿ ಬಿಡಿಸಿದ ಇಶಾನಿ

Written by Soma Shekar

Published on:

---Join Our Channel---

Eshani : ಬಿಗ್ ಬಾಸ್ ಕನ್ನಡ ಸೀಸನ್ 10 ರ (Bigg Boss Kannada 10) ಮೂಲಕ ಜನಪ್ರಿಯತೆ ಪಡೆದ ಗಾಯಕಿ ಇಶಾನಿ (Eshani) ಅವರ ಅಸಲಿ ಬಣ್ಣ (Asali Banna) ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಈ ಹಾಡಿನ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಮಹಿಳೆಯರು, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ತಿರುಗೇಟನ್ನ ನೀಡಿದ್ದಾರೆ ಇಶಾನಿ. ಇಶಾನಿ ಅವರ ಜನ್ಮದಿನದಂದು ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಅಸಲಿ ಬಣ್ಣ ಹಾಡು ಬಿಡುಗಡೆ ಆಗಿದೆ.

ಹಾಡಿನ ಬಗ್ಗೆ ಮಾತನಾಡುತ್ತಾ, ಮಹಿಳೆಯರಿಗೆ ಬ್ಯಾಡ್ ಕಾಮೆಂಟ್ ಮಾಡೋರಿಗೆ ಟಾಂಗ್ ಕೊಟ್ಟಿದ್ದೇನೆ. ಅಂತಹವರಿಗೆ ನಮ್ಮ ಫೀಲಿಂಗ್ಸ್ ಅರ್ಥ ಆಗ್ಬೇಕು. ನನ್ನ ಬಗ್ಗೆ ಯಾರೆಲ್ಲಾ ಕೆಟ್ಟ ಪದಗಳನ್ನು ಬಳಸಿದ್ದರೋ ಅದೇ ಪದಗಳನ್ನು ನಾನು ಅವರಿಗೆ ವಾಪಸ್ ಕೊಟ್ಟಿದ್ದೇನೆ. ಬಿಗ್ ಬಾಸ್ ನಡೆಯೋವಾಗಲೇ ನಾನು ಈ ಹಾಡನ್ನು ಬರೆದಿದ್ದೆ.

ನನಗೆ ಅನಿಸಿದ್ದನ್ನ ಹೇಳಿಕೊಳ್ಳೋದಕ್ಕೆ ಇದು ಸರಿಯಾದ ದಾರಿ ಅನಿಸಿತು. ಮಾರ್ಟಿನ್ ಇದಕ್ಕೆ ಪೈನಲ್ ಟಚ್ ಕೊಟ್ಟಿದ್ದು, ಈ ಹಾಡಿನ ಉದ್ದೇಶ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳನ್ನು ಸ್ಟ್ರಾಂಗ್ ಮಾಡೋದು ಅಂತ ಇಶಾನಿ ತಮ್ಮ ಹೊಸ ಹಾಡಿನ ಬಗ್ಗೆ ತಿಳಿಸಿದ್ದಾರೆ. ವೆಂಕಟ್ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ಉಳಿದಂತೆ ಗಿರಿಗೌಡ ಅವರ ನಿರ್ದೇಶನ, ಮಾರ್ಟಿನ್ ಅವರ ಸಾಹಿತ್ಯ ಇದ್ದು, ಕೀರ್ತನ್ ಪೂಜಾರಿ ಅವರ ಕ್ಯಾಮೆರಾ ವರ್ಕ್ ಜೊತೆಗೆ ಡಿಜೆ ಲೆಥಲ್ ಅವರ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಇಶಾನಿ ಅವರ ಹಾಡುಗಳ ಅಭಿಮಾನಿಗಳು ಹೊಸ ಹಾಡಿನ ಬಗ್ಗೆ ಮೆಚ್ಚುಗೆಗಳನ್ನು ನೀಡಿದ್ದಾರೆ.‌

Bhagyalakshmi Serial: ಪೂಜಾ, ಭಾಗ್ಯ,‌ಕುಸುಮಾ.. ಮದ್ವೆ ಮಂಟಪಕ್ಕೆ ಮೊದ್ಲು ಬರೋದ್ಯಾರು? ಮದ್ವೆ ನಿಲ್ಸೋದು ಯಾರು?

Leave a Comment