Ekta Kapoor : ನಾನು ಹಿಂದೂ, ನಾಚಿಕೆ ಏಕೆ ? ಬೇರೆ ಧರ್ಮದ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ, ಏಕ್ತಾ ಮಾತಿಗೆ ಭಾರೀ ಮೆಚ್ಚುಗೆ

Written by Soma Shekar

Published on:

---Join Our Channel---

Ekta Kapoor : ದಿ ಸಾಬರಮತಿ ವರದಿಯ (The Sabarmati Report) ಟ್ರೈಲರ್ ಬಿಡುಗಡೆಯಾಗಿದ್ದು ಈ ಸಮಾರಂಭದಲ್ಲಿ ಸಿನಿಮಾದ ನಿರ್ಮಾಪಕ ಏಕ್ತಾ ಕಪೂರ್ (Ekta Kapoor) ಧರ್ಮದ ಕುರಿತಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆ ಈಗ ಎಲ್ಲೆಲ್ಲೂ ವೈರಲ್ ಆಗಿದ್ದು, ಏಕ್ತಾ ಕಪೂರ್ ಅವರ ಬಗ್ಗೆ ಪ್ರಶಂಸೆಗಳು ಹರಿದು ಬರುತ್ತಿದೆ. ಸುದ್ದಿಗೋಷ್ಠಿಯಲ್ಲಿ ಈ ಸಿನಿಮಾ ಯಾವುದಾದರು ಒಂದು ಧರ್ಮದ ಮೇಲೆ ಕೇಂದ್ರೀಕೃತವಾಗಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಏಕ್ತಾ ಕಪೂರ್ ಅದಕ್ಕೆ ಬಹಳ ನೇರವಾದ ಉತ್ತರವನ್ನು ನೀಡಿದ್ದಾರೆ.

ನಾನು ಹಿಂದೂ (Hindu) ಅಂದರೆ ನಾನು ಜಾತ್ಯಾತೀತ. ನಾನು ಯಾವುದೇ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ನಾನು ಹಿಂದೂ ಮತ್ತು ನಾನು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇನೆ ಎಂದು ಹೇಳುವುದಕ್ಕೆ ಬಯಸುತ್ತೇನೆ. ಈ ಹೇಳಿಕೆಯನ್ನ ಕೇಳಿದ ಜನರು ಏಕ್ತಾ ಅವರ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಾನು ನನ್ನ ಧರ್ಮದಲ್ಲಿ ನಂಬಿಕೆ ಉಳ್ಳವಳು ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳನ್ನೇ ಆಗಲಿ ಮನಃಪೂರ್ವಕವಾಗಿ ಮಾಡುತ್ತೇನೆ.

ಅದನ್ನು ಯಾರಿಂದಲೂ ಮುಚ್ಚಿಡುವ ಅಗತ್ಯ ಇಲ್ಲ. ನಾನು ನನ್ನ ಸ್ವಂತ ಧರ್ಮವನ್ನು ಹೊತ್ತಿದ್ದಕ್ಕಾಗಿ ನನ್ನನ್ನು ಟ್ರೋಲ್ ಮಾಡಲಾಯಿತು. ಉಂಗುರ ಬಳೆಗಳನ್ನು ಧರಿಸಿದ್ದಕ್ಕೆ ಗೇಲಿ ಮಾಡಿದರು. ಕೆಲವರು ಗುಟ್ಟಾಗಿ ಪೂಜೆ ಮಾಡುತ್ತಾರೆ‌. ಆದರೆ ನಾನು ನಮ್ಮ ನಂಬಿಕೆಗಾಗಿ ಅದನ್ನು ಮಾಡುತ್ತೇನೆ‌ ಅದಕ್ಕಾಗಿ ನಾಚಿಕೆ ಏಕೆ ಪಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ ಏಕ್ತಾ ಕಪೂರ್.

ಸಾಬರ್ ಮತಿ ಬಿಡುಗಡೆಗೆ ಇನ್ನು ಕೇವಲ ಒಂದು ವಾರ ಮಾತ್ರ ಇದ್ದು, ನವೆಂಬರ್ 15 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ವಿಕ್ರಾಂತ್ ಮಾಸ್ಸಿ (Vikrant Massi) ನಾಯಕನಾಗಿ ಕಾಣಿಸಿಕೊಂಡಿದ್ದು, ರಿದ್ದಿ ಡೋಗ್ರಾ ಮತ್ತು ರಾಶಿ ಖನ್ನಾ (Rashi Khanna) ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು ಬಿಡುಗಡೆಯ ನಂತರ ಹೆಚ್ಚಿನ ವಿವರಗಳು ತಿಳಿಯಲಿದೆ.‌

BBK 11: ನೆಟ್ಟಗೆ ಡಿಸಿಷನ್ ತಗೊಳ್ಳೊಕೆ ಬರಲ್ಲ, ಧನರಾಜ್ ಮೇಲೆ ರೊಚ್ಚಿಗೆದ್ದ ಮೋಕ್ಷಿತಾ ಪೈ, ಅನುಷಾ ರೈ; ಕ್ಯಾಪ್ಟನ್ಸಿ ರೇಸ್ ಅಬ್ಬರ

Leave a Comment