Divya Khosla : ಭಾಷೆ ಯಾವುದೇ ಆಗಿರಲಿ ಸ್ಟಾರ್ ಗಳ ಸಿನಿಮಾಗಳು ಬಿಡುಗಡೆ ಆದ ನಂತರ ಒಂದೇ ದಿನದಲ್ಲಿ ಕೋಟಿ ಕೋಟಿ ಕಲೆಕ್ಷನ್ ಎಂದು ಸುದ್ದಿಗಳಾಗುತ್ತವೆ. ಕೆಲವೊಮ್ಮೆ ಒಂದೇ ದಿನದಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಸಹಾ ಸುದ್ದಿಗಳು ವೈರಲ್ ಆಗುತ್ತದೆ. ಅನೇಕ ಸಲ ಇದು ನಿಜವೋ, ಸುಳ್ಳೋ ಎನ್ನುವ ಅನುಮಾನಗಳು ಸಹಾ ಮೂಡುತ್ತದೆ.
ಈಗ ಇಂತದೇ ಒಂದು ಚರ್ಚೆಗೆ ಕಾರಣವಾಗಿದೆ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ನಿರ್ಮಿಸಿ, ನಟಿಸಿರುವ ಜಿಗ್ರಾ (Jigra) ಸಿನಿಮಾ. ಈ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ ವಿಚಾರವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವರಿಂದಲೇ ಅನುಮಾನ ವ್ಯಕ್ತವಾಗಿದ್ದು, ಇದು ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ.
ನಿರ್ಮಾಪಕಿ, ನಿರ್ದೇಶಕಿ ಟಿ ಸಿರೀಸ್ ಮಾಲೀಕ ಭೂಷಣ್ ಕುಮಾರ್ ಅವರ ಪತ್ನಿ ದಿವ್ಯಾ ಖೋಸ್ಲಾ (Divya Khosla) ಅವರು ಜಿಗ್ರಾ ಸಿನಿಮಾ ಕಲೆಕ್ಷನ್ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಜಿಗ್ರಾ ಸಿನಿಮಾ ನೋಡೋದಕ್ಕೆ ನಾನು ಇಂದು ಸಿಟಿ ಮಾಲ್ ಪಿವಿಆರ್ಗೆ ಹೋಗಿದ್ದೆ, ಆದರೆ ಅಲ್ಲಿ ಥಿಯೇಟರ್ ಪೂರ್ತಿ ಖಾಲಿ ಇತ್ತು. ಆಲಿಯಾ ಭಟ್ ಅವರ ಧೈರ್ಯವನ್ನು ನಿಜಕ್ಕೂ ಮೆಚ್ಚಬೇಕು.
ಅವರೇ ಥಿಯೇಟರ್ ಗಳಲ್ಲಿ ಎಲ್ಲಾ ಟಿಕೆಟ್ ಹರಿಸಿ, ಸಿನಿಮಾ ಹೌಸ್ಫುಲ್ ಆಗಿದೆ ಎನ್ನುವ ಹಾಗೆ ಬಿಂಬಿಸಿ, ಗಳಿಕೆಯ ಲೆಕ್ಕವನ್ನು ಕೂಡಾ ಮನಸ್ಸಿಗೆ ಬಂದ ಹಾಗೆ ಹೇಳಿಕೊಂಡಿದ್ದಾರೆ ಎಂದಿದ್ದು, ಆಲಿಯಾ ಭಟ್ ವಿಚಾರವಾಗಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಮಾದ್ಯಮಗಳ ಇದರ ಬಗ್ಗೆ ಏನೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ದಿವ್ಯಾ ಖೋಸ್ಲಾ ಅವರ ಪೋಸ್ಟ್ ಬಾಲಿವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಲ್ಲದೇ ಜಿಗ್ರಾ ಸಿನಿಮಾದ ಮತ್ತೊಬ್ಬ ನಿರ್ಮಾಪಕ ಕರಣ್ ಜೋಹರ್ ದಿವ್ಯಾ ಅವರ ಪೋಸ್ಟ್ ಗೆ ಬುದ್ಧಿ ಇಲ್ಲದವರ ಜೊತೆಗೆ ವಾದಕ್ಕೆ ಇಳಿಯಬಾರದು ಎನ್ನುವಂತೆ ಪ್ರತಿಕ್ರಿಯೆ ನೀಡಿದ್ದಾರೆ.
South Heroins ಅತಿ ಹೆಚ್ಚು ಸಂಭಾವನೆ ಪಡೆಯೋ ಸೌತ್ ಬ್ಯೂಟಿ ಯಾರು? ರಶ್ಮಿಕಾ ಅಥವಾ ಅನುಷ್ಕಾ ಅಲ್ಲ