Janhvi Kapoor: ಬಟಾ ಬಯಲಾದ ಜಾನ್ವಿ ಕಪೂರ್ ರಹಸ್ಯ? ಫೋಟೋದಲ್ಲಿ ಕಂಡ ವ್ಯಕ್ತಿ ಮಾಡಿ ಬಿಟ್ಟ ಅಂತಹ ಕೆಲಸ

Written by Soma Shekar

Published on:

---Join Our Channel---

Janhvi Kapoor: ಇತ್ತೀಚಿನ ದಿನಗಳಲ್ಲಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ಬಾಲಿವುಡ್ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನಪ್ರಿಯತೆ ಮತ್ತು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಬಹಳಷ್ಟು ನಟಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿರುವ ಉದಾಹರಣೆಗಳಿವೆ. ಜಾನ್ವಿ ಕಪೂರ್ ಸಹಾ ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇಂತಹದೊಂದು ಸರ್ಜರಿಗೆ ಒಳಗಾಗಿದ್ದಾರೆ ಅನ್ನೋದು ಅನೇಕರ ವಾದ. ಇದಕ್ಕೆ ಕಾರಣ ನಟಿಯ ಹಳೆಯ ಫೋಟೋಗಳು ಎಂದರೂ ಸುಳ್ಳಲ್ಲ.

ಈಗ ಮತ್ತೊಮ್ಮೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾಗಿದ್ದು ಜನಪ್ರಿಯ ಪ್ಲಾಸ್ಟಿಕ್ ಸರ್ಜನ್ ಡಾಕ್ಟರ್ ರಾಜ್ ಕನೋಡಿಯಾ (Raj Kanodia) ಅವವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ಕಮೆಂಟ್ ಗೆ ಲೈಕ್ ಮಾಡಿದ್ದೇ ಆಗಿದೆ. ಜಾನ್ವಿ ಬಾಲಿವುಡ್ ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸನ್ನ ಪಡೆದುಕೊಂಡಿಲ್ಲವಾದರೂ ಅವಕಾಶಗಳು ಮಾತ್ರ ಕಡಿಮೆ ಏನಿಲ್ಲ. ಇದಕ್ಕೆ ಕಾರಣ ಅವರು ಸ್ಟಾರ್ ಕಿಡ್ ಅಂತ ಟೀಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಅಲ್ಲದೇ ನಟಿ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ ಎನ್ನುವುದು ಬಹಳಷ್ಟು ಜನ ಅಭಿಪ್ರಾಯವಾಗಿದೆ. ಆದರೆ ಜಾನ್ವಿ ಕಪೂರ್ ಮಾತ್ರ ಈ ವಿಚಾರವಾಗಿ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ಈ ವಿಷಯದ ಕುರಿತಾಗಿ ಜನ ಮರೆತಿದ್ದರು. ಆದರೆ ಈಗ ಮತ್ತೆ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ಜನಪ್ರಿಯ ಪ್ಲಾಸ್ಟಿಕ್ ಸರ್ಜನ್ ಆಗಿರುವ ಡಾಕ್ಟರ್ ರಾಜ್ ಕನೋಡಿಯಾ ಮಾಡಿದ ಒಂದೇ ಒಂದು ಲೈಕ್ ಈಗ ಜನರ ಅನುಮಾನಗಳಿಗೆ ಉತ್ತರವನ್ನು ಮತ್ತು ಸ್ಪಷ್ಟತೆಯನ್ನು ನೀಡಿದಂತಾಗಿದೆ.

ಜಾನ್ವಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಎಂದು ಟೀಕಿಸುವವರಿಗೆ ಈಗ ಸಾಕ್ಷಿ ಸಿಕ್ಕಂತಾಗಿದೆ. ಸಿನಿಮಾ ಸೆಲೆಬ್ರಿಟಿಗಳ ವಲಯದಲ್ಲಿ ಡಾಕ್ಟರ್ ರಾಜ್ ಕನೋಡಿಯ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಏಕೆಂದರೆ ಅವರು ಬಾಲಿವುಡ್ ಮತ್ತು ಹಾಲಿವುಡ್ ನ ಹಲವು ಸೆಲೆಬ್ರಿಟಿಗಳಿಗೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿದ್ದು, ಕಲಾವಿದರ ಅಂದವನ್ನು ಹೆಚ್ಚಿಸುವಲ್ಲಿ ನೆರವನ್ನು ನೀಡಿದ್ದಾರೆ.

ಜಾನ್ವಿ ಕಪೂರ್ ಸಹಾ ಇದೇ ವೈದ್ಯರ ಬಳಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ ಎನ್ನುವುದು ಅನೇಕರ ಅನಿಸಿಕೆಯಾಗಿದೆ. ಇತ್ತೀಚೆಗೆ ಅದ್ದೂರಿಯಾಗಿ ನಡೆದ ಅನಂತ್ ಅಂಬಾನಿ ಮದುವೆಗೆ ರಾಜ್ ಕನೋಡಿಯಾ ಅವರು ಹಾಜರಾಗಿದ್ದರು. ಅಲ್ಲಿ ಅವರು ಬಹಳಷ್ಟು ಜನ ಸೆಲೆಬ್ರಿಟಿಗಳ ಜೊತೆಗೆ ಅವರು ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಅವರು ಶೇರ್ ಮಾಡಿದ ಫೋಟೋಗಳಲ್ಲಿ ಜಾನ್ವಿ ಕಪೂರ್ ಜೊತೆಗಿನ ಫೋಟೋ ಸಹಾ ಇದ್ದು, ಇದನ್ನು ನೋಡಿದ ನೆಟ್ಟಿಗರು ಸಾಕಷ್ಟು ಕಾಮೆಂಟ್ ಗಳನ್ನು ಪಾಸ್ ಮಾಡಿದ್ದಾರೆ. ಜಾನ್ವಿ ಕಪೂರ್ ತನ್ನ ಅಂದವನ್ನು ಹೆಚ್ಚಿಸಿದ ವ್ಯಕ್ತಿಯ ಜೊತೆಗೆ ಎಂದು ಅರ್ಥ ಬರುವಂತೆ ನೆಟ್ಟಿಗರಬ್ಬರು ಕಾಮೆಂಟನ್ನು ಮಾಡಿದ್ದು, ಈ ಕಾಮೆಂಟ್ ಗೆ ಸ್ವತಃ ಡಾಕ್ಟರ್ ರಾಜ್ ಕನೋಡಿಯ ಲೈಕ್ ಅನ್ನು ಒತ್ತಿದ್ದಾರೆ. ಅಂತಹದೊಂದು ಕಾಮೆಂಟ್ ಗೆ ಅವರು ಲೈಕ್ ಒತ್ತಿದ್ದೇ ತಡ, ಆ ಲೈಕ್ ನ ಮೂಲಕವೇ ಅವರು ಪ್ಲಾಸ್ಟಿಕ್ ಸರ್ಜರಿ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ ಅನ್ನೋದು ಅನೇಕರ ಮಾತಾಗಿದೆ.

ಡಾಕ್ಟರ್ ರಾಜ್ ಕನೋಡಿಯಾ ನೀಡಿದ ಒಂದು ಲೈಕ್ ಜಾನ್ವಿ ಕಪೂರ್ ಅವರ ಪ್ಲಾಸ್ಟಿಕ್ ಸರ್ಜರಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದಂತಾಗಿದೆ ಎಂದು ಅನೇಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ಪ್ಲಾಸ್ಟಿಕ್ ಸರ್ಜರಿ ವಿಚಾರವಾಗಿ ಈಗ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಇಷ್ಟೆಲ್ಲಾ ಸುದ್ದಿಯಾಗಿರುವ ವಿಚಾರದ ಬಗ್ಗೆ ಜಾನ್ವಿ ಹೇಗೆ ಪ್ರತಿಕ್ರಿಯೆ ನೀಡ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Pranitha Subhash: ಫ್ಯಾಂಟ್ ಫಿಟ್ ಆಗ್ತಿಲ್ಲಾ ಅಂತಾನೇ ಸಿಹಿ ಸುದ್ದಿ ಕೊಟ್ಟ ಪ್ರಣೀತಾ ಸುಭಾಷ್; 2ನೇ ಮಗು ನಿರೀಕ್ಷೆಯಲ್ಲಿ ನಟಿ

Leave a Comment