BBK 11: ಬಿಗ್ ಬಾಸ್ ನ ಪ್ರತಿ ಸೀಸನ್ ಸಹಾ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮತ್ತು ಸುದ್ದಿಯನ್ನು ಮಾಡುತ್ತದೆ. ಒಂದಷ್ಟು ವಿಚಾರಗಳಿಗೆ ವಿವಾದ ಸಹಾ ಹುಟ್ಟು ಹಾಕುತ್ತದೆ. ಕನ್ನಡದ ಬಿಗ್ ಬಾಸ್ (BBK 11) ಮೊದಲ ವಾರದಲ್ಲೇ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಸ್ವರ್ಗ ನರಕ ಕಾನ್ಸೆಪ್ಟ್ ನಲ್ಲಿ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ.
ಈಗ ಶೋ ಆರಂಭವಾದ ಮೊದಲ ವಾರದಲ್ಲೇ ಬಿಗ್ ಬಾಸ್ ಶೋ ವಿರುದ್ಧ ವಕೀಲೆಯೊಬ್ಬರು ದೂರನ್ನು ದಾಖಲಿಸಿದ್ದಾರೆ. ರಾಜ್ಯ ಮಹಿಳಾ ಆಯೋಗಕ್ಕೆ ವಕೀಲೆ ದೂರನ್ನು ನೀಡಿದ್ದಾರೆ ಎನ್ನುವುದಾಗಿ ಸುದ್ದಿಯಾಗಿದೆ. ಭಾರತದಲ್ಲಿ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿ ಇರಿಸೋ ಹಾಗೆ ಇಲ್ಲ.
ಆದ್ರೆ ಶೋನಲ್ಲಿ ಪುರುಷರು ಮತ್ತು ಮಹಿಳೆಯರನ್ನ ಒಂದು ಜೈಲಿನ ತರ ಕಾಣೋ ಬಂಧೀಖಾನೆಯಂತ ಕೋಣೆಯಲ್ಲಿ ಇರಿಸಲಾಗಿದ್ದು, ಅದನ್ನ ನೂರಾರು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗೋ ರೀತಿಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಅವರಿಗೆ ಗಂಜಿಯನ್ನ ಆಹಾರವಾಗಿ ನೀಡಲಾಗ್ತಿದೆ.
ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದೇ ಇರುವುದು ಅಪರಾಧ. ಅಲ್ಲದ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ಇಲ್ಲ. ದೈಹಿಕ ಬಾದೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸುವ ಹಾಗೆ ಮಾಡಿರುವುದು ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದಿದ್ದಾರೆ.
ಬಿಗ್ ಬಾಸ್ ಕನ್ನಡ 11ರಲ್ಲಿ (Bigg Boss Kannada 11) ಭಾಗವಹಿಸಿರುವ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು, ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನ ಬಾಹಿರವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ನ ಪ್ರತಿ ಸೀಸನ್ ವೇಳೆಯಲ್ಲೂ ಹಲವು ವಿಚಾರಗಳು ಮುನ್ನೆಲೆಗೆ ಬರುವುದು ಸಾಮಾನ್ಯವಾಗಿದೆ.
Lakshmi Nivasa ಪ್ರಾಣ ಹೋದ್ರು ಸರಿ ಭಾವನಾನ ಬಿಡಲ್ಲ ಅಂದ ಸಿದ್ಧೇ ಗೌಡ್ರು; ಸಿದ್ಧುನ ಒಪ್ಪಿಕೊಳ್ತಾಳಾ ಭಾವನಾ