Puttakkana Makkalu : ಪುಟ್ಟಕ್ಕನ ಮಕ್ಕಳು (Puttakkana Makkalu) ರಾಜಿ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು ನಟಿ ಹಂಸ (Actress Hamsa), ಇತ್ತೀಚಿಗೆ ಅವರು ಕನ್ನಡ ಬಿಗ್ ಬಾಸ್ ನ ಸೀಸನ್ 11 ಕ್ಕೆ (Bigg Boss Kannada 11) ಎಂಟ್ರಿ ಕೊಟ್ಟು, ಲಾಯರ್ ಜಗದೀಶ್ ಅವರ ಜೊತೆಗೆ ಹಾಡಿ, ಕುಣಿದು ಒಂದಷ್ಟು ಸುದ್ದಿಯಾದರು. ಆದರೆ ಹಂಸ ಅವರ ಬಿಗ್ ಬಾಸ್ ಜರ್ನಿ ಬೇಗ ಮುಗಿದು ಅವರು ಹೊರ ಬಂದರು. ಆದರೆ ಈಗ ಹೊರ ಬಂದಿರುವ ಹೊಸ ಸುದ್ದಿ ಏನೆಂದರೆ ಹಂಸ ಅವರ ವಿರುದ್ಧ ಕನ್ನಡ ಟೆಲಿವಿಷನ್ ಅಸೋಸಿಯೇಶನ್ ಗೆ ದೂರನ್ನ ನೀಡಲಾಗಿದೆ ಎನ್ನಲಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್ (Arooru Jagadish) ಅವರು, ಹಂಸ ಅವರಿಂದ ನನಗೆ ಕರೆ ಬಂದಿತ್ತು. ಅವರು ನಲವತ್ತು ದಿನಗಳ ಕಾಲ ಸಿನಿಮಾ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗ್ತಿದ್ದೇನೆ ಅಂದ್ರು. ಪೋಷಕ ನಟರನ್ನು ವಿದೇಶಕ್ಕೆ ಕರ್ಕೊಂಡು ಹೋಗಿ ನಲ್ವತ್ತು ದಿನ ಶೂಟಿಂಗ್ ಮಾಡ್ತಾರಾ ಅಂತ ನಮಗೆ ಅನಿಸಿತ್ತು.
ನಾನು ಹೋಗಿ ಬನ್ನಿ, ನಾನು ತಂಡಕ್ಕೆ ಹೇಳ್ತೀನಿ ಅಂದೆ. ಆದರೆ ಆಮೇಲೆ ನೋಡಿದ್ರೆ ಅವರು ಬಿಗ್ ಬಾಸ್ ಪ್ರೊಮೊ ನಲ್ಲಿ ಇದ್ದಾರೆ. ನನಗೆ ಏನಿದು ಅನಿಸಿಬಿಡ್ತು. ಬಿಗ್ ಬಾಸ್ ಗೆ ಹೋಗುತ್ತಿದ್ದೇನೆ ಅವರು ಹೇಳೇ ಇರಲಿಲ್ಲ. ಅದಾದ ಮೇಲೆಯೇ ನಾವು ಅವರ ವಿರುದ್ಧ ಪ್ರೊಡ್ಯೂಸರ್ ಅಸೋಸಿಯೇಶನ್ ಗೆ, ಕನ್ನಡ ಟೆಲಿವಿಷನ್ ಅಸೋಸಿಯೇಶನ್ಗೆ ದೂರು ಕೊಟ್ಟಿದ್ದೇವೆ ಎಂದಿದ್ದಾರೆ ಆರೂರು ಜಗದೀಶ್ ಅವರು.
ಬಿಗ್ ಬಾಸ್ ನಂತೆ ಪುಟ್ಟಕ್ಕನ ಮಕ್ಕಳು ಕೂಡಾ ಒಂದು ಪ್ರಾಜೆಕ್ಟ್. ಹೋಗುವವರನ್ನು ನಾವು ತಡೆಯೋದಿಲ್ಲ. ಆದರೆ ಹೋಗುವವರು ಹೇಳಿ ಹೋಗಿ. ಒಂದು ನೈತಿಕತೆ ಇಟ್ಟುಕೊಳ್ಳಿ. ಮತ್ತೆ ಸಿಗುತ್ತೇವೆ ಆಗ ಮುಖ ಕೊಟ್ಟು ಮಾತನಾಡೋ ಹಾಗೆ ಇರಬೇಕು. ಈ ರೀತಿ ವರ್ತನೆ ಕಲಾವಿದರಿಗೆ ಒಳ್ಳೇದಲ್ಲ. ಇಲ್ಲಿ ಯಾರೂ ಯಾರನ್ನೂ ತಡೆಯುವುದಿಲ್ಲ, ತಡೆಯುವ ಹಕ್ಕೂ ಇಲ್ಲ ಎಂದಿದ್ದಾರೆ ಆರೂರು ಜಗದೀಶ್ ಅವರು.
Rashmika Mandanna : ಪುಷ್ಪ 2 ಬಿಡುಗಡೆ ಹತ್ತಿರ ಇರುವಾಗ್ಲೇ ರಶ್ಮಿಕಾ ಎಮೋಷನಲ್ ಪೋಸ್ಟ್, ನಟಿ ಹೇಳಿದ್ದೇನು