Jani Master: ವ್ಯಾನ್ ಒಳಗೆ ಬಂದು ಪ್ಯಾಂಟ್ ಜಿಪ್ ಬಿಚ್ಚಿ, ಜಾನಿ ಮಾಸ್ಟರ್ ಬಗ್ಗೆ ಸ್ಪೋಟಕ ವಿಷಯ ಬಿಚ್ಚಿಟ್ಟ ಸಂತ್ರಸ್ತೆ

Written by Soma Shekar

Published on:

---Join Our Channel---

Jani Master : ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ದೊಡ್ಡ ಹೆಸರನ್ನು ಮಾಡಿರುವ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ (Jani Master) ಕನ್ನಡದಲ್ಲೂ ಕೆಲವು ಸಿನಿಮಾಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಈಗ ಜಾನಿ ಮಾಸ್ಟರ್ ಮೇಲೆ 21 ರ ಯುವತಿಯೊಬ್ಬಳು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಂಗಿ ಪೋಲಿಸ್ ಠಾಣೆಯಲ್ಲಿ ಲೈಂ ಗಿ ಕ ದೌರ್ಜನ್ಯದ ಕೇಸನ್ನ ದಾಖಲು ಮಾಡಿದ್ದಾಳೆ.

ಪೋಲಿಸರ ಮುಂದೆ ಮೂರು ಗಂಟೆಗಳ ಕಾಲ ಯುವತಿ ಸ್ಪೋಟಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ. ಪ್ರತಿದಿನ ಶೂಟಿಂಗ್ ಸಮಯದಲ್ಲಿ ಜಾನಿ ಮಾಸ್ಟರ್ ವ್ಯಾನ್ ಒಳಗೆ ಬಂದು ಪ್ಯಾಂಟ್ ಜಿಪ್ ಓಪನ್ ಮಾಡಿ ಬಲವಂತ ಮಾಡುತ್ತಿದ್ದರು. ಕಾಮತೃಷೆ ಈಡೇರಿಸಿಕೊಳ್ಳಲು ನನಗೆ ಕಿರುಕುಳವನ್ನು ನೀಡುತ್ತಿದ್ದರು.

ಮುಂಬೈ ಹೊಟೇಲ್ ನಲ್ಲಿ ಮಾತ್ರವೇ ಅಲ್ಲದೇ ಹೈದರಾಬಾದ್ ನಲ್ಲೂ ಹಲವು ಬಾರಿ ನನ್ನ ಮೇಲೆ ಅ ತ್ಯಾ ಚಾ ರ ಮಾಡಿದ್ದಾರೆ. ಆಫರ್ ಬೇಕು ಅಂದ್ರೆ ಇದೆಲ್ಲಾ ಮಾಡಬೇಕು ಎಂದು ಬಲವಂತ ಮಾಡಿದರು. ಆಸೆ ಈಡೇರಿಸದಿದ್ದರೆ ಚೆನ್ನಾಗಿರಲ್ಲ ಅಂತ ಬೆದರಿಕೆ ಹಾಕಿದ್ದರು. ಅವರ ಪತ್ನಿ ಮತ್ತು ಅವರು ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದರು.

ನನಗೆ ಮತಾಂತರವಾಗಿ ಮದುವೆ ಆಗು ಅಂತ ಒತ್ತಡವನ್ನು ಹೇರಿದ್ದರು ಎಂದು ಸಹಾ ಸಂತ್ರಸ್ತೆ ಹೇಳಿದ್ದಾಳೆ. ಜಾನಿ ಮಾಸ್ಟರ್ ಮೇಲೆ ಕೇಳಿ ಬಂದಿರುವ ಈ ವಿಚಾರವು ಸುದ್ದಿಯಾಗಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಈ ವಿಚಾರವಾಗಿ ಜಾನಿ ಮಾಸ್ಟರ್ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment