Jani Master: ಸ್ಟಾರ್ ಗಳನ್ನ ಕುಣಿಸಿದ್ದ ಜಾನಿ ಮಾಸ್ಟರ್ ಮೇಲೆ ಗಂಭೀರ ಆರೋಪ; 21 ವರ್ಷದ ಯುವತಿ ಮೇಲೆ

Written by Soma Shekar

Published on:

---Join Our Channel---

Jani Master : ಕನ್ನಡ, ತೆಲುಗು ಮತ್ತುವತಮಿಳು ಚಿತ್ರರಂಗದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (Jani Master) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ (Sexual Assault) ಆರೋಪವನ್ನು ಮಾಡಲಾಗಿದ್ದು, ಈ ವಿಚಾರ ಈಗ ಸಂಚಲನ ಸೃಷ್ಟಿಸಿದೆ.

ಬಹಳಷ್ಟು ಜನ ಸ್ಟಾರ್ ನಟರಿಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿರುವ ಜಾನಿ ಮಾಸ್ಟರ್, ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಸಹಾ ಕಾಣಿಸಿಕೊಂಡಿದ್ದರು. ಈಗ ಅವರ ಮೇಲೆ 21 ವರ್ಷದ ಯುವತಿಯೊಬ್ಬರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.‌

ಯುವತಿಯು ತನ್ನ ದೂರಿನಲ್ಲಿ ಜಾನಿ ಮಾಸ್ಟರ್ ಕಳೆದ ಕೆಲವು ದಿನಗಿಳಿಂದಲೂ ನನಗೆ ಕಿರುಕುಳವನ್ನು ನೀಡುತ್ತಿದ್ದರು. ಹೊರಾಂಗಣ ಚಿತ್ರೀಕರಣದ‌ ಸಂದರ್ಭದಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಮತ್ತು ಲೈಂ ಗಿ ಕ ದೌರ್ಜನ್ಯವನ್ನು ಎಸೆಗಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆನ್ನಲಾಗಿದೆ.

ದೂರು ದಾಖಲು ಮಾಡಿರುವ ಯುವತಿಯು
ನರಸಂಗಿ ನಿವಾಸಿಯಾಗಿರುವ ಕಾರಣ, ದೂರನ್ನು ನರಸಂಗಿ ಪೊಲೀಸರಿಗೆ ಪ್ರಕರಣ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದ್ದು, ಕ್ರಿಮಿನಲ್ ಬೆದರಿಕೆ ಮತ್ತು ಸ್ವಯಂಪ್ರೇರಿತ ಗಾಯ ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

Bigg Boss Kannada: ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳ ನೇರ ಎಂಟ್ರಿ, ಗಿಚ್ಚಿ ಗಿಲಿಗಿಲಿ ಟು Bigg Boss Kannada 11

Leave a Comment