Chanakya Niti ಈ ಸಂದರ್ಭಗಳಲ್ಲಿ ಮಾತಿಗಿಂತ ಮೌನಕ್ಕೆ ಹೆಚ್ಚು ಶಕ್ತಿ; ಚಾಣಾಕ್ಯ ಹೇಳಿದ ಮಾತುಗಳು ಅದ್ಭುತ

Written by Soma Shekar

Published on:

---Join Our Channel---

Chanakya Niti: ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಮಾತಿಗಿಂತ ಮೌನವೇ (Silence) ಉತ್ತಮ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ನಮ್ಮಲ್ಲಿ ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತು ಸಹಾ ರೂಢಿಯಲ್ಲಿದೆ. ಆಚಾರ್ಯ ಚಾಣಾಕ್ಯ (Chanakya Niti) ಸಹಾ ನಾವು ಯಾವ ಸಂದರ್ಭಗಳಲ್ಲಿ ಮೌನವಾಗಿರಬೇಕೆಂಬುದನ್ನು ತಿಳಿಸಿದ್ದಾರೆ. ಯಾವುದು ಆ ಸಂದರ್ಭಗಳು ತಿಳಿಯೋಣ ಬನ್ನಿ.

ಯಾವುದಾದರೂ ವ್ಯಕ್ತಿ ಸರಿಯಾದ ಕಾರಣವಿಲ್ಲದೇ, ಸರಿಯಾದ ವಿಷಯ ಇಲ್ಲದೇ ಅನಾವಶ್ಯಕವಾಗಿ ಮೂರ್ಖನಂತೆ (Fool) ಚರ್ಚೆ ಆರಂಭಿಸಿದರೆ ಅಂತಹರೊಡನೆ ವಾದಕ್ಕೆ ಇಳಿಯುವ ಬದಲು ಮೌನವಾಗಿರಬೇಕು.

ನಾವು ಕೋಪದಲ್ಲಿರುವಾಗ ಕೆಲವು ಸಲ ನಾಲಗೆಯ ಮೇಲೆ ಹಿಡಿತ ತಪ್ಪಿ ಆವೇಶದಿಂದ ಆಡುವ ಮಾತುಗಳು ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕೆ ಕೋಪದಲ್ಲಿರುವಾಗ ಮಾತಿಗಿಂತ ಮೌನವೇ ಉತ್ತಮ.‌

ಕೆಲವೊಮ್ಮೆ ನಮ್ಮ ಕುರಿತಾಗಿ ವದಂತಿಗಳು (Gossips) ಹರಡಿದಾಗ ಕೂಡಲೇ ಅದಕ್ಕೆ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರೆ ಅದು ಅನಾವಶ್ಯಕ ನಾಟಕೀಯ ಘಟನೆಗಳು ನಡೆಯದಂತೆ ತಡೆಯಲು ನೆರವನ್ನು ನೀಡುತ್ತದೆ.‌

ನಮ್ಮ ಸುತ್ತ ಮುತ್ತ ಕೆಲವು ಹಠಮಾರಿ ವ್ಯಕ್ತಿತ್ವದವರು ಇರ್ತಾರೆ. ಅವರು ನಾವು ಎಷ್ಟೇ ತಿಳಿ ಹೇಳಿದರೂ ತಮ್ಮ ಆಲೋಚನೆ ಬದಲಿಸಲು ಸಿದ್ಧರಿರುವುದಿಲ್ಲ. ಅಂತಹವರ ಜೊತೆಗೆ ಮಾತಿಗಿಂತ ಮೌನವೇ ಲೇಸು.

ಮದ್ಯ ಸೇವನೆ ಮಾಡಿರುವ ವ್ಯಕ್ತಿಗಳು ತಮ್ಮ ನಿಯಂತ್ರಣ ಕಳೆದುಕೊಂಡಿರುತ್ತಾರೆ. ಅಂತಹವರ ಜೊತೆಗೆ ಯಾವುದೇ ಕಾರಣಕ್ಕೂ ಕೂಡಾ ಚರ್ಚೆ,ವಾದ ಮಾಡದೇ ಮೌನವಾಗಿರುವುದೇ ಉತ್ತಮ.

Puttakkana Makkalu ಡಿಸಿ ಸ್ನೇಹ ತಲೇಲಿ ಬುದ್ಧಿ ಇಲ್ವಾ? ನೆಟ್ಟಿಗರು ಹೀಗೆ ಸ್ನೇಹ ಮೇಲೆ ಸಿಟ್ಟಾಗಿದ್ದಾದ್ರು ಯಾಕೆ

Related Post

Leave a Comment