Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಚೈತ್ರ ಕುಂದಾಪುರ (Chaithra Kundapura) ಅವರು ತನ್ನನ್ನ ಮನೆಯವರು ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಭವ್ಯ ಅವರ ಬಳಿ ತಾನು ಈ ಮನೆಗೆ ಸೂಕ್ತವಲ್ಲ ಎಂದು ಹೇಳಿದ್ದು ಮಾತ್ರವೇ ಅಲ್ಲದೇ ಬಿಗ್ ಬಾಸ್ (Bigg Boss) ಮನೆಗೆ ಬರುವ ಆಯ್ಕೆ ಮಾಡಿದ್ದು ತಪ್ಪಾಯ್ತು ಎನ್ನುವಂತೆ ಚೈತ್ರ ಅವರು ಪಶ್ಚಾತ್ತಾಪದ ಮಾತುಗಳನ್ನು ಸಹಾ ಆಡಿದ್ದಾರೆ.
ಹೊಸ ಪ್ರೊಮೊದಲ್ಲಿ, ಬಂದ ಆರೋಪಗಳನ್ನ ನಾನು ಸಾಬೀತು ಮಾಡಿಕೊಳ್ಳದೆ ಹೋದರೆ, ಬಲಿ ಕಾ ಬಕ್ರಾ ತರ ಎಲ್ಲರ ಆರೋಪಗಳನ್ನ ನಾನು ತಲೆ ಮೇಲೆ ಹೊತ್ತಿಕೊಳ್ಳಬೇಕಾಗುತ್ತದೆ ಎಂದು ಕಣ್ಣೀರಿಟ್ಟಿರುವ ಚೈತ್ರಾ ಕುಂದಾಪುರ.. ಎರಡು ಟಿಶ್ಯೂ ಪೇಪರ್‌ಗಳಲ್ಲಿ ಏನ್ನನ್ನೋ ಬರೆದಿದ್ದಾರೆ.
ನಂತರ ಆ ಟಿಶ್ಯೂ ಪೇಪರ್‌ಗಳನ್ನ ಅವರು ಮನೆಯಲ್ಲಿರುವ ದೇವಿಯ ವಿಗ್ರಹದ ಎರಡೂ ಕೈಗಳ ಮೇಲೆ ಇಟ್ಟು ಪ್ರಾರ್ಥನೆ ಮಾಡುತ್ತಾ, ‘’ವ್ಯಂಗ್ಯದ ಮಾತುಗಳಿಗೆ ಸಮಯವೇ ಉತ್ತರ ಕೊಡುತ್ತದೆ’’ ಎಂದಿದ್ದು, ಈ ವೇಳೆ ಚೈತ್ರಾ ಕುಂದಾಪುರಗೆ ದೇವಿ ಎಡಗಡೆ ಪ್ರಸಾದ ಕೊಟ್ಟುಬಿಟ್ಟಿದ್ದಾಳೆ!
ದೇವಿಯನ್ನ ಬಹಳವಾಗಿ ನಂಬುವಂತಹ ಚೈತ್ರಾ ಕುಂದಾಪುರಗೆ ದೇವಿ ಎಡಗಡೆ ವರ ಕೊಟ್ಟಿದ್ದಾಳೆ. ಇದನ್ನ ಚೈತ್ರಾ ಹೇಗೆ ಸ್ವೀಕರಿಸ್ತಾರೆ? ಏನಾದರೂ ಕಠಿಣ ನಿರ್ಧಾರವನ್ನು ಮಾಡ್ತಾರಾ ಕಾದು ನೋಡಬೇಕಾಗಿದೆ. ಸದ್ಯಕ್ಕೆ ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ಈ ದೃಶ್ಯಗಳಿದ್ದು ಎಲ್ಲರ ಗಮನ ಸೆಳೆದು ಚರ್ಚೆಗೆ ಕಾರಣವಾಗಿದೆ.