Bigg Boss Kannada : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 (Bigg Boss Kannada) ಐದನೇ ವಾರಕ್ಕೆ ಎಂಟ್ರಿ ಕೊಟ್ಟಾಗಿದೆ. ನಿನ್ನೆ ಮಾನಸ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಾಗಿದೆ. ಈಗ ಮನೆಯಲ್ಲಿ ಐದನೇ ವಾರದ ಆಟಗಳು ಆರಂಭವಾಗಿದೆ. ಮೊದಲ ದಿನವೇ ಬಿಗ್ ಬಾಸ್ ಮನೆಯವರಿಗೆ ದೊಡ್ಡ ಶಾಕ್ ಅನ್ನು ನೀಡಿದ್ದಾರೆ. ಒಬ್ಭರು ಇನ್ನೊಬ್ಬರ ಬಗ್ಗೆ ಹಿಂದೆ ಏನು ಮಾತಾಡಿದ್ದಾರೆ ಅನ್ನೋ ಕ್ಲಿಪ್ ಗಳನ್ನ ತೋರಿಸಿ ಒಂದಷ್ಟು ಅನುಮಾನಗಳಿಗೆ ತೆರೆಯನ್ನು ಎಳೆದಿದ್ದಾರೆ.
ಈಗ ವಾಹಿನಿ ಹೊಸ ಪ್ರೊಮೊವೊಂದನ್ನ ಶೇರ್ ಮಾಡಿದೆ. ಹೊಸ ಟಾಸ್ಕ್ ವೊಂದರ ದೃಶ್ಯ ಪ್ರೊಮೋದಲ್ಲಿ ಕಂಡಿದ್ದು, ಪಗಡೆ ಆಟದಂತಹ ಈ ಟಾಸ್ಕ್ ನಲ್ಲಿ ಚೈತ್ರಾ ಕುಂದಾಪುರ (Chaithra Kundapura) ಅವರು ಗೌತಮಿ (Gowthami) ಅವರನ್ನು ಸೇಫ್ ಮಾಡಿದ್ದಾರೆ. ಟಾಸ್ಕ್ ಮುಗಿದ ನಂತರ ಅನುಷಾ ಅವರು ನಾವೇ ಅಲ್ಲೇ ಇದ್ವಿ, ನಿಮ್ಮ ಕಣ್ಣಿಗೆ ಕಾಣಿಸಲಿಲ್ವಾ? ಅಂತ ಚೈತ್ರಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಚೈತ್ರಾ ಕೊಟ್ಟ ಉತ್ತರ ಅನುಷಾ ಅಸಮಾಧಾನಕ್ಕೆ ಕಾರಣವಾಗಿದೆ.
ಚೈತ್ರ ಅವರು ನನ್ನ ಕಣ್ಣಿಗೆ ಕಾಣಿಸಿದರೂ ಕೂಡಾ ನಾನು ಕಾಣಿಸದೇ ಇರೋ ಹಾಗೆ ಹೋಗೋದು ಅಂತ ಹೇಳುತ್ತಾ ಅನುಷಾ ಅವರ ತಲೆಗೆ ಸುಮ್ಮನೆ ಹಾಗೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಅನುಷಾ (Anusha) ಚೈತ್ರ ಮೇಲೆ ರೇಗಾಡಿದ್ದಾರೆ. ಚೈತ್ರಾಗೆ ಶಟ್ ಅಪ್ ಅಂತ ಹೇಳಿದ್ದಾರೆ, ನಾನು ಸೀರಿಯಸ್ಸಾಗೇ ಹೇಳ್ತಾ ಇದ್ದೀನಿ ಅಂತ ಅನುಷಾ ಸಿಟ್ಟನ್ನು ಹೊರ ಹಾಕಿದ್ದಾರೆ. ಅನುಷಾ ಅವರ ವರ್ತನೆಗೆ ಚೈತ್ರ ಕೂಡಾ ಅಸಮಾಧಾನದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಅಮ್ಮಾ ತಾಯಿ ಇನ್ಯಾವತ್ತೂ ಮಾತಾಡೋದೇ ಇಲ್ಲ, ಇದನ್ನ ನೆನಪಲ್ಲಿ ಇಟ್ಕೊಳ್ತೀನಿ ಅಂತ ಚೈತ್ರ ಅಲ್ಲಿಂದ ಎದ್ದು ಹೋಗಿದ್ದಾರೆ. ಅನುಷಾ ಕೂಡಾ ಮಾತಾಡಬೇಡ, ನೆನಪಲ್ಲಿ ಇಟ್ಕೊ ಅಂತಾನೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರೊಮೊದಲ್ಲಿ ಚೈತ್ರ ಮತ್ತು ಅನುಷಾ ನಡುವೆ ಆದ ಮನಸ್ತಾಪ ಕಂಡಿದೆ. ಆದ್ರೆ ಅದಕ್ಕೆ ಅಸಲಿ ಕಾರಣ ಏನು? ಮುಂದೆ ಇನ್ನೇನೆಲ್ಲಾ ಆಯ್ತು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.
Viral Video : ತೀರ್ಥ ಅಂತ ಭ್ರಮಿಸಿ ಗುಡಿಯಲ್ಲಿ AC ನೀರನ್ನ ಕುಡಿದ ಭಕ್ತರು : ವೀಡಿಯೋ ವೈರಲ್