Devara : ಜೂ. NTR ದೇವರಾ ಸಿನಿಮಾಕ್ಕೆ ಬಿಗ್ ಶಾಕ್; ಸಿನಿಮಾದ ಪ್ರಮುಖ ದೃಶ್ಯಗಳಿಗೆ ಬಿತ್ತು ಕತ್ತರಿ

Written by Soma Shekar

Published on:

---Join Our Channel---

Devara : ಜೂ. ಎನ್ ಟಿ ಆರ್ (Jr. NTR) ನಾಯಕನಾಗಿರುವ ದೇವರಾ (Devara) ಸಿನಿಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆ ಆಗಿದ್ದು ಸಖತ್ ಸೆನ್ಸೇಷನ್ ಅನ್ನು ಕ್ರಿಯೇಟ್ ಮಾಡಿದೆ.‌ ಬಿರುಗಾಳಿ ಎಬ್ಬಿಸಿರುವ ಈ ಟ್ರೈಲರ್ ಬೆನ್ನಲ್ಲೇ ಹೊಸ ಅಪ್ಡೇಟ್ ಒಂದು ಹೊರಗೆ ಬಂದಿದ್ದು, ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಿಗೆ ಇದು ದೊಡ್ಡ ಶಾಕ್ ಅನ್ನು ನೀಡಿದೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್ ನಿಂದ U/A ಸರ್ಟಿಫಿಕೇಟ್ ಪಡೆದಿರುವ ಸಿನಿಮಾದಲ್ಲಿನ ಕೆಲವು ದೃಶ್ಯಗಳಿಗೆ ಕತ್ತರಿ ಬಿದ್ದಿದೆ ಎನ್ನುವ ವಿಷಯವನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಹಾಗಾದರೆ ಈಗ ಈ ಸಿನಿಮಾದಿಂದ ತೆಗೆದು ಹಾಕಿರುವ ಆ ದೃಶ್ಯಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಸಿನಿಮಾದಲ್ಲಿ ವ್ಯಕ್ತಿಯೊಬ್ಬ ಹೆಂಡತಿಯ ಹೊಟ್ಟೆಗೆ ಒದೆಯುವ ದೃಶ್ಯ, ಮತ್ತೊಬ್ಬರು ತನ್ನ ತಾಯಿಯನ್ನು ಒದೆಯುವ ದೃಶ್ಯ, ಕತ್ತಿಯ ಮೇಲೆ ನೇತಾಡುವ ದೇಹದ ಐದು ಸೆಕೆಂಡುಗಳ ಶಾಟ್ ಅನ್ನು ಈಗ ಸಿನಿಮಾದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದ್ದು, ಎಲ್ಲರಿಗೂ ಇದು ಅಚ್ಚರಿಯನ್ನ ಮೂಡಿಸಿದೆ.

ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ದೇವರಾ ಸಿನಿಮಾದಲ್ಲಿ ಬಹುತಾರಾಗಣವಿದ್ದು, ಜೂ.ಎನ್ ಟಿ ಆರ್, ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್ (Saif Ali Khan), ಪ್ರಕಾಶ್ ರಾಜ್, ನಟ ಶ್ರೀಕಾಂತ್ ಹೀಗೆ ಜನಪ್ರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಇರುವುದು ವಿಶೇಷವಾಗಿದೆ.

Leave a Comment