Actress Rekha: ಮೂವರನ್ನ ಮದುವೆ ಆಗಿದ್ದೇನೆ ಅದಕ್ಕೆ ಸಿಂಧೂರ ಇಡುತ್ತೇನೆ; ನಟಿ ರೇಖಾ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Actress Rekha: ಬಾಲಿವುಡ್ ನ (Bollywood) ಎವರ್ ಗ್ರೀನ್ ನಟಿ ರೇಖಾ (Actress Rekha) ಕೆರಿಯರ್ ನಲ್ಲಿ ದೊಡ್ಡ ಸಕ್ಸಸ್ ಅನ್ನು ಪಡೆದ ನಟಿ. ಆದರೆ ಅವರ ವೈಯಕ್ತಿಕ ಜೀವನದ ಕಡೆ ನೋಡಿದಾಗ ಅಲ್ಲೊಂದು ವಿಶಾದದ ಛಾಯೆ ಕಾಣುತ್ತೆ. ರೇಖಾ ಮತ್ತು ಬಾಲಿವುಡ್ ನ ಬಿಗ್ ಬಿ ಅಮಿತಾಬ್ (Amitab Bachchan) ನಡುವಿನ ಅಫೇರ್ ಒಂದು ಕಾಲದಲ್ಲಿ ಭಾರೀ ಚರ್ಚೆಗೆ ಒಳಗಾದ ವಿಷಯವಾಗಿತ್ತು. ಆದರೆ ಅಮಿತಾಬ್ ಮದುವೆ ಜಯಾ ಜೊತೆ ನಡೆದಿದ್ದು ಎಲ್ಲರಿಗೂ ಶಾಕ್ ನೀಡಿತ್ತು.

ರೇಖಾ ಮಾತ್ರ ಎಲ್ಲೂ ಈ ಸಂಬಂಧದ ಕುರಿತಾಗಿ ಮಾತನಾಡಲಿಲ್ಲ. ನಟಿ ರೇಖಾ 1990 ರಲ್ಲಿ ಉದ್ಯಮಿ ಮುಖೇಶ್ ಅಗರ್ವಾಲ್ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಆದರೆ ಈ ಸಂಬಂಧದಲ್ಲಿ ಎಲ್ಲವೂ ಸರಿ ಇರಲಿಲ್ಲ. ರೇಖಾ ಪತಿಯಿಂದ ಬೇರಯಾಗಲು ನಿರ್ಧರಿಸಿದ್ದರು. ಆದರೆ ಮದುವೆ ನಂತರ 7 ತಿಂಗಳಾದ ಮೇಲೆ ರೇಖಾ ಅವರ ಪತಿ ಮುಖೇಶ್ ಆ ತ್ಮ ಹ ತ್ಯೆಗೆ ಶರಣಾದರು..

ಆದರೆ ನಟಿ ರೇಖಾ ಅವರು ಮಾತ್ರ ಎಲ್ಲಿಗೇ ಬಂದರೂ ಹಣೆಯಲ್ಲಿ ಸಿಂಧೂರವನ್ನು ಧರಿಸಿಯೇ ಬರುತ್ತಾರೆ. ಅದಕ್ಕೆ ನಟಿಯನ್ನು ಎರಡನೇ ಮದುವೆಯಾಗಿದ್ದೀರಾ ಎನ್ನುವ ಮಾತನ್ನು ಕೇಳಿದಾಗ ನಟಿ ನೀಡಿದ ಉತ್ತರ ಕೇಳಿ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ನಟಿ ಹೇಳಿದ್ದಾದರೂ ಏನು ಎನ್ನುವುದನ್ನ ತಿಳಿಯೋಣ.

ರೇಖಾ ಅವರು, ನನ್ನ ಗಂಡನನ್ನು ಹೊರತುಪಡಿಸಿ, ನಾನು ಮೂವರನ್ನು ಮದುವೆ ಆಗಿದ್ದೇನೆ. ನನ್ನನ್ನು, ನನ್ನ ವೃತ್ತಿಯನ್ನು ಮತ್ತು ನನ್ನ ಹೃದಯದಲ್ಲಿ ನನ್ನ ಅಭಿಮಾನಿಗಳನ್ನು ಮದುವೆಯಾಗಿದ್ದೇನೆ ಎಂದು ಹೇಳಿದ ನಟಿ ಅನೇಕರ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಮದುವೆಗೆ ಪುರುಷನ ಅಗತ್ಯ ಇಲ್ಲ, ಮಹಿಳೆ ತನ್ನನ್ನ ತಾನು ರಕ್ಷಿಸಿಕೊಳ್ಳಬಹುದೆಂದು ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Kareena Kapoor: ರಾಹುಲ್ ಗಾಂಧಿ ಬಗ್ಗೆ ಕರೀನಾ ಹೇಳಿದ ಮಾತಿಗೆ ನೆಟ್ಟಿಗರು ಶಾಕ್! ಕರೀನಾಗೆ ಅಂತ ಫೀಲಿಂಗ್ ಇತ್ತಾ

Leave a Comment