Malaika Arora : ಬಾಲಿವುಡ್ ನಟಿ, ಡ್ಯಾನ್ಸರ್ ಸಹಾ ಆಗಿರುವ ಮಲೈಕಾ ಅರೋರಾ (Malaika Arora) ತಂದೆ ಅನಿಲ್ ಅರೋರಾ (Anil Arora) ಆ ತ್ಯ ಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ಎಲ್ಲರಿಗೂ ದೊಡ್ಡ ಆಘಾತವನ್ನೇ ಮೂಡಿದೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯ ಟೆರೇಸ್ ನಿಂದ ಜಿಗಿದು ಆ ತ್ಯ ಹ ತ್ಯೆ (Suicide) ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇಂದು (ಸೆ.11) ಬೆಳಗ್ಗೆ ಅನಿಲ್ ಅರೋರಾ ಅವರು ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ಅವರ ತಂದೆ ಪ್ರಾಣ ಬಿಟ್ಟಿದ್ದಾರೆ. ಅನಿಲ್ ಅವರ ಮನೆಯ ಬಳಿ ನಟಿ ಮಾಜಿ ಪತಿ ಅರ್ಬಾಜ್ ಖಾನ್ (Arbaaz Khan) ಭೇಟಿ ನೀಡಿದ್ದಾರೆ.
ಸದ್ಯ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಅನಿಲ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅನಿಲ್ ಅರೋರಾ ಅವರ ಆ ತ್ಮ ಹ ತ್ಯೆಗೆ ಕಾರಣವೇನೆಂಬುದು ಇನ್ನೂ ಗೊತ್ತಾಗಿಲ್ಲ.
ಪ್ರಕರಣ ದಾಖಲಿಸಿಕೊಂಡು ಮುಂಬೈ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ತಂದೆಯ ಅನಿರೀಕ್ಷಿತ ಸಾವಿನಿಂದ ನಟಿ ಮಲೈಕಾ ಮತ್ತು ಅವರ ಸಹೋದರಿ ಅಮೃತಾ ಇಬ್ಬರೂ ಕೂಡಾ ನೋವಿನಲ್ಲಿದ್ದಾರೆ. ಸೆಲೆಬ್ರಿಟಿಗಳು ಕೂಡಾ ವಿಷಯ ತಿಳಿದು ಶಾಕ್ ಆಗಿದ್ದಾರೆ.
Puttakkana Makkalu Serial: ಸಿಂಗಾರಮ್ಮನ ಅಸಲಿಯತ್ತು ಬಯಲಾಯ್ತು, ಪೋಲಿಸಪ್ಪ ಕೊಟ್ಟ ಸುಳಿವು