Kriti Sanon: ಗ್ರೀಸ್ ದೇಶದಲ್ಲಿ ಕೃತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್; ಇದೆಲ್ಲಾ ಯಾಕೆ ಬೇಕು ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Kriti Sanon : ಬಾಲಿವುಡ್ ನ (Bollywood) ಸುಂದರಿ ಕೃತಿ ಸನೋನ್ (Kriti Sanon) ಆಗಾಗ ಸಿನಿಮಾ ವಿಚಾರಗಳಿಗೆ ಸುದ್ದಿಯಾಗುತ್ತಾರೆ. ಆದರೆ ಈ ಬಾರಿ ನಟಿ ಸಿನಿಮಾ ವಿಷಯಕ್ಕಾಗಿ ಅಲ್ಲ ಬದಲಿಗೆ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸುದ್ದಿಯಾಗಿದ್ದಾರೆ. ಪ್ರಸ್ತುತ ನಟಿ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಗ್ರೀಸ್ (Greece) ದೇಶವನ್ನು ಸುತ್ತಲು ಹೋಗಿದ್ದು, ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವೇಳೆ ನಟಿಯು ಒಂದು ಫೋಟೋದಲ್ಲಿ ಸಿಗರೇಟ್ ಸೇದುತ್ತಾ ನಿಂತಿರುವ ಪೋಸ್ ಅನ್ನು ನೀಡಿದ್ದು, ಈ ಫೋಟೋ ಈಗ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ನಟಿ ಕೃತಿ ಸೆನೊನ್ ಗ್ರೀಸ್‌ನಲ್ಲಿ ಬಾಯ್‌ಫ್ರೆಂಡ್ ಕಬೀರ್ ಬಹಿಯಾ (Kabir Bahiya) ಮತ್ತು ಸಹೋದರಿ ನೂಪುರ್ ಜೊತೆ ಹುಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನಟಿ ಕೃತಿ ಅಲ್ಲಿ ಧೂಮಪಾನ ಮಾಡುತ್ತಾ ನಿಂತಿರುವ ಸ್ಟೈಲ್ ನ ಫೋಟೋ ಈಗ ವೈರಲ್ ಆಗಿದೆ. ಇದನ್ನ ನೋಡಿದ ನೆಟ್ಟಿಗರು ಸೆಲೆಬ್ರಿಟಿಗಳು ಸಾಮಾನ್ಯ ಜನರಿಗೆ ಮಾದರಿಯಾಗಬೇಕಾದವರು ಆದರೆ ಅವರೇ ಹೀಗೆ ಮಾಡುವುದು ಎಷ್ಟು ಸರಿ ಎಂದು ನಟಿಯನ್ನು ಟೀಕೆ ಮಾಡುತ್ತಿದ್ದಾರೆ.

ಅಭಿಮಾನಿಗಳು ನಟಿಯ ಸ್ಟೈಲ್ ಗೆ ಭರ್ಜರಿ ಮೆಚ್ಚುಗೆಗಳನ್ನು ನೀಡಿದ್ದಾರೆ. ಇದೇ ವೇಳೆ ಕೆಲವರು ಟೀಕೆ ಮಾಡುವವರಿಗೆ ಪ್ರತಿಕ್ರಿಯೆ ನೀಡುತ್ತಾ, ನಟಿಯ ಖಾಸಗಿ ವಿಚಾರ ಹಾಗೂ ಅವರ ಇಷ್ಟ ಕಷ್ಟಗಳ ಬಗ್ಗೆ ಮಾತನಾಡುವ ಹಕ್ಕು ಬೇರೆ ಅವರಿಗೆ ಇಲ್ಲ ಎನ್ನುವ ಮೂಲಕ ನಟಿಗೆ ಬೆಂಬಲ ನೀಡಿದ್ದಾರೆ.

Shah Rukh Khan: ಶಾರೂಖ್ ಕಣ್ಣಿಗೆ ಏನಾಯ್ತು? ಚಿಕಿತ್ಸೆ ಫೇಲ್, ಈಗ ಅಮೆರಿಕಾಕ್ಕೆ ಹಾರಿದ ನಟ

Leave a Comment