Bigg Boss : ಬಿಗ್ ಬಾಸ್ ಶೋ (Bigg Boss) ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದರಲ್ಲೂ ಹಿಂದಿ ಬಿಗ್ ಬಾಸ್ ನ ಪ್ರತಿ ಸೀಸನ್ ಕೂಡಾ ದೊಡ್ಡ ಚರ್ಚೆ, ವಿವಾದಗಳನ್ನೂ ಸಹಾ ಹುಟ್ಟು ಹಾಕುತ್ತದೆ. ಅನೇಕರು ಬಿಗ್ ಬಾಸ್ ನ ಆಫರ್ ಗೆ ಕಾಯುವಾಗಲೇ ತನಗೆ ಆಫರ್ ನೀಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ ಬಾಲಿವುಡ್ ನ ಸ್ಟಾರ್ ನಟನ ಪತ್ನಿ.
ಬಾಲಿವುಡ್ ಒಂದು ಕಾಲದ ಸ್ಟಾರ್ ನಟ, ಹಿರಿಯ ನಟ ಗೋವಿಂದ (Actor Govinda) ಅವರಿಗೆ ಸಿನಿಮಾ ರಂಗದಲ್ಲಿ ತನ್ನದೇ ಆದ ವರ್ಚಸ್ಸನ್ನು ಪಡೆದಿದ್ದು, ಅವರ ಪತ್ನಿ ಸುನಿತಾ ಅಹುಜಾ (Sunitha Ahuja) ಅವರಿಗೆ ಬಿಗ್ ಬಾಸ್ ಗಾಗಿ ನಾಲ್ಕು ಸಲ ಆಫರ್ ಬಂದಿತ್ತು ಎನ್ನಲಾಗಿದೆ. ಅಂಕಿತ್ ಅವರ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ಸುನೀತಾ ಅವರು ಈ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ.
ಅನಿಲ್ ಕಪೂರ್ (Anil Kapoor) ಅವರ ಓಟಿಟಿ ಸೀಸನ್ ಸಮಯದಲ್ಲಿ ಎರಡು ಸಲ ಆಫರ್ ನೀಡಿದ್ರು. ನಿಮಗೆ ಹುಚ್ಚು ಹಿಡಿದೆದೆಯಾ? ಬಿಗ್ ಬಾಸ್ ಮನೆಯ ಬಾತ್ರೂಮ್ ನಾನು ತೋಳಿತೀತಿ ಅಂತ ಹೇಗೆ ಅನ್ಕೊಂಡ್ರಿ. ನನಗೆ ಆಫರ್ ಕೊಟ್ಟ ಹಾಗೆ ಶಾರೂಖ್ ಖಾನ್ ಪತ್ನಿಗೆ ಆಫರ್ ಕೊಡ್ತೀರಾ ಎಂದು ಸುನೀತಾ ಅವರು ಸವಾಲು ಹಾಕಿದ್ದರಂತೆ.
ನಾನು ರಿಜೆಕ್ಟ್ ಮಾಡಿದ್ದಕ್ಕೆ ನನ್ನ ಮಗಳು ಟೀನಾಗೆ ಆಫರ್ ಕೊಟ್ರು ಎಂದು ಸುನೀತಾ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಸಲ್ಮಾನ್ ಖಾನ್ ಜೊತೆಗೆ ಹೋಸ್ಟ್ ಮಾಡೋ ಚಾನ್ಸ್ ಇದ್ದಾಗ ಹೇಳಿ ಆಗ ಬರ್ತೀನಿ ಎಂದು ನಾನು ಹೇಳಿದ್ದೇನೆ ಎಂಬುದಾಗಿ ಸುನೀತಾ ಅವರು ತಿಳಿಸಿದ್ದಾರೆ.
Bhagyalakshmi Serial: ಮಚ್ಚು ಹಿಡಿದು ಮಂಟಪಕ್ಕೆ ಬಂದ ಕುಸುಮಾ; ತಾಂಡವ್, ಶ್ರೇಷ್ಠ ಇಬ್ಬರಿಗೂ ನಡುಕ ಶುರುವಾಯ್ತು