Bipasha Basu: ನೀಳಕಾಯದ ಚೆಲುವೆ, ಕೃಷ್ಣ ಸುಂದರಿ ಎಂದೆಲ್ಲಾ ಹೆಸರನ್ನು ಪಡೆದು ಒಂದು ಕಾಲದಲ್ಲಿ ತನ್ನ ಬೋಲ್ಡ್ ನೆಸ್ ನಿಂದಲೇ ಬಾಲಿವುಡ್ ನಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ನಟಿ ಬಿಪಾಶ ಬಸು (Bipasha Basu) ಇತ್ತೀಚಿಗೆ ನಟಿ ಸಂದರ್ಶನವೊಂದರಲ್ಲಿ ತಮ್ಮ ಹದಿಹರೆಯದ ಪ್ರೇಮ ವಿಚಾರವೊಂದನ್ನು ಮಾತನಾಡುತ್ತಾ ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ.
ಬಿಪಾಶ 2001 ರಲ್ಲಿ ಜಿಸ್ಮ್ (Jism) ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಯನ್ನು ನೀಡಿದರು. ಅನಂತರ ಸ್ಟಾರ್ ಗಳ ಜೊತೆಗೆ ನಟಿ ತೆರೆಯನ್ನು ಹಂಚಿಕೊಂಡರು. ಹದಿಹರೆಯದಲ್ಲಿ ತಾನು ಪ್ರೀತಿಸಿದ ಹುಡುಗನಿಗಾಗಿ ತಾನು ಏನೆಲ್ಲಾ ಬದಲಾವಣೆ ಮಾಡಿಕೊಂಡಿದ್ದೆ ಎಂಬುದನ್ನು ನಟಿಯು ಹೇಳಿಕೊಂಡಿದ್ದಾರೆ.
ನಾನು ಪ್ರೀತಿಸಿದ ಹುಡುಗನಿಗಾಗಿ ಮಾಂಸಾಹಾರ ತ್ಯಜಿಸಿದೆ. ಮೀನು ಮಾಂಸ ಇಲ್ಲದೇ ಊಟ ಮಾಡದ ನಾನು ಪ್ರೀತಿಗಾಗಿ ಮಾಂಸ ತಿನ್ನುವುದನ್ನ ಬಿಟ್ಟೆ. ಸ್ಲೀವ್ ಲೆಸ್ ಟಾಪ್ ನಲ್ಲಿ ಓಡಾಡ್ತಿದ್ದ ನಾನು ಸೆಲ್ವಾರ್ ಕಮೀಜ್ ಗಳನ್ನು ಹಾಕಲು ಆರಂಭಿಸಿದೆ. ಈ ಬದಲಾವಣೆ ನೋಡಿ ನಮ್ಮಮ್ಮ ಮೂರ್ಛೆ ಹೋಗುವುದೊಂದೇ ಬಾಕಿ ಇತ್ತು ಎಂದಿದ್ದಾರೆ ಬಿಪಾಶ.
ನಾವು ತಿನ್ನುವುದು, ಉಡುವುದು ಸದಾ ನಮ್ಮ ಆಯ್ಕೆ ಆಗಿರಬೇಕು. ನಾವು ಯಾರಿಗಾಗಿಯೂ ಬದಕಾಗಬೇಕಿಲ್ಲ. ಪ್ರೀತಿಗಾಗಿ ಬದಲಾಗಬೇಕಾದರೆ ಅದು ಪ್ರೀತಿಯೇ ಅಲ್ಲ. ಬಿಪಾಶ ಸಿನಿಮಾಕ್ಕೆ ಬಂದ ಮೇಲೆ ಜಾನ್ ಅಬ್ರಹಾಂ ಜೊತೆಗೆ ಒಂದಷ್ಟು ವರ್ಷ ರಿಲೇಶನ್ ಶಿಪ್ ನಲ್ಲಿದ್ದರು. ಅನಂತರ ನಟಿ ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾದರು.
Bigg Boss Kannada 11 ನ ಮೊದಲ ದಿನವೇ ಕಣ್ಣೀರು ಹಾಕಿ ಶಪಥ ಮಾಡಿದ ಗೌತಮಿ, ಸತ್ಯ ನಟಿಯ ಹೊಸ ಅಧ್ಯಾಯ ಶುರು