ಒಂದಲ್ಲಾ ಎರಡಲ್ಲಾ ಈ ಸಲ ಬರೋಬ್ಬರಿ 9 ವೈಲ್ಡ್ ಕಾರ್ಡ್ ಎಂಟ್ರಿ Bigg Boss ನಲ್ಲಿ ಬಿಗ್ ಶಾಕಿಂಗ್ ಟ್ವಿಸ್ಟ್

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ ಶೋ (Bigg Boss) ಕಿರುತೆರೆಯಲ್ಲಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಕೆಲವರು ಈ ಶೋವನ್ನ ಟೀಕೆ ಮಾಡಿದರೂ ಸಹಾ ಬಿಗ್ ಬಾಸ್ ಮಾತ್ರ ತನ್ನ ಪ್ರತಿ ಹೊಸ ಸೀಸನ್ ನಲ್ಲೂ ಭರ್ಜರಿ ಸಕ್ಸಸ್ ಪಡೆದುಕೊಳ್ಳುತ್ತಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.‌ ಬಿಗ್ ಬಾಸ್ ಆಟ ಆರಂಭವಾದಾಗ ಒಂದು ರೀತಿಯಲ್ಲಿದ್ರೆ ವೈಲ್ಡ್ ಕಾರ್ಡ್ ಎಂಟ್ರಿಗಳ ನಂತರ ಅದು ಇನ್ನೊಂದು ಲೆವೆಲ್ ಗೆ ಹೋಗೋದು ಸಹಾ ನಿಜ.

ಈಗ ತೆಲುಗು ಬಿಗ್ ಬಾಸ್ ನಲ್ಲಿ (Bigg Boss Telugu 8) ವೈಲ್ಡ್ ಕಾರ್ಡ್ ಎಂಟ್ರಿಯಲ್ಲೂ ಹೊಸ ಟ್ವಿಸ್ಟ್ ನೀಡ್ತಾ ಇದೆ ಬಿಗ್ ಬಾಸ್. ಹೌದು, ತೆಲುಗು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬರೋಬ್ಬರಿ ಹನ್ನೆರಡು ಮಂದಿ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಗಳು ಬಿಗ್ ಬಾಸ್ ಮನೆಗೆ ಎಂಟ್ರಿಯನ್ನು ನೀಡ್ತಾರೆ ಅನ್ನೋ ಸುದ್ದಿ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದೆ.

ಅಲ್ಲದೇ ವೈಲ್ಡ್ ಕಾರ್ಡ್ ಎಂಟ್ರಿಯನ್ನ ತಡೆಯೋದಕ್ಕೆ ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡಿದ್ದು ಅದರಲ್ಲಿ ಟಾಸ್ಕ್ ಗೆದ್ದು ಮೂರು ಎಂಟ್ರಿ ಗಳನ್ನು ಮನೆಯಲ್ಲಿರೋ ಸ್ಪರ್ಧಿಗಳು ತಡೆದಿದ್ದಾರೆ ಆದ್ರೂ ಇನ್ನೂ ಒಂಬತ್ತು ವೈಲ್ಡ್ ಕಾರ್ಡ್ ಇರೋದ್ರಿಂದ ಒಂಬತ್ತು ಜನ ಬರೋದು ಪಕ್ಕಾ ಅಂತಿದ್ದಾರೆ ಪ್ರೇಕ್ಷಕರು.

ವೈಲ್ಡ್ ಕಾರ್ಡ್ ನಲ್ಲಿ ಹಳೆಯ ಕಂಟೆಸ್ಟೆಂಟ್‌ಗಳೇ ಇರ್ತಾರೆ ಅನ್ನೋ ಸುದ್ದಿ ಆಗಿದೆ. ಅವಿನಾಶ್, ರೋಹಿಣಿ, ಹರಿತೇಜ, ಕನ್ನಡತಿ ಶೋಭಾ ಶೆಟ್ಟಿ ಬರ್ತಿದ್ದಾರೆ ಅಂತ ಗೊತ್ತಾಗಿತ್ತು. ಆದ್ರೆ ಗುರುವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಕೊಟ್ಟ ಅಪ್ಡೇಟ್ ನೋಡಿದ ಮೇಲೆ ಒಂಬತ್ತು ಜನ ಬರುತ್ತಾರಾ ಅನ್ನೋ ಅನುಮಾನ ಶುರುವಾಗಿದೆ.

Leave a Comment