Bigg Boss : ಬಿಗ್ ಬಾಸ್ (Bigg Boss) ತೆಲುಗು ಸೀಸನ್ 8 ಭರ್ಜರಿಯಾಗಿ ಆರಂಭವಾಗಿದ್ದು, ಈ ಬಾರಿಯೂ ನಟ ನಾಗಾರ್ಜುನ (Nagarjuna) ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಏಳನೇ ಸೀಸನ್ ಗೆ ಸಿಕ್ಕ ದೊಡ್ಡ ಯಶಸ್ಸಿನ ನಂತರ ಈಗ ಎಂಟನೇ ಸೀಸನ್ ಮೇಲೆ ನಿರೀಕ್ಷೆಗಳನ್ನು ಹೆಚ್ಚಿಸಿದ್ದು, ಕಳೆದ ಸೀಸನ್ ರೀತಿಯಲ್ಲೇ ಈ ಸಲವೂ ಸಹಾ ಕನ್ನಡದ ಕಲಾವಿದರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ನಿಖಿಲ್ ಮಲಯಕ್ಕಳ್ ( Nikhil Malayakkal) ಮೂಲತಃ ಮೈಸೂರಿನವರಾಗಿದ್ದು, ಮನೆಯೇ ಮಂತ್ರಾಲಯ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಅನಂತರ ಅವರು ತೆಲುಗಿನಲ್ಲಿ ಸಾಲು ಸಾಲು ಸೀರಿಯಲ್ ಗಳಲ್ಲಿ ನಟಿಸಿದ್ದು, ಆ ಜನಪ್ರಿಯತೆಯಿಂದಾಗಿ ಅವರು ಈ ಬಾರಿ ಅವರು ತೆಲುಗು ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದಾರೆ.
ಯಾಶ್ಮಿ ಗೌಡ (Yashmi Gowda), ಕನ್ನಡದಲ್ಲಿ ವಿದ್ಯಾ ವಿನಾಯಕ ಸೀರಿಯಲ್ ನಲ್ಲಿ ನಟಿಸಿದ್ದ ಇವರು ತೆಲುಗು ಕಿರುತೆರೆಯಲ್ಲೂ ಜನಪ್ರಿಯ ನಟಿಯಾಗಿದ್ದಾರೆ. ಬೆಂಗಳೂರು ಮೂಲದ ಈ ನಟಿ ತೆಲುಗಿನಲ್ಲಿ ಮೂರ್ನಾಲ್ಕು ಸೀರಿಯಲ್ ಗಳಲ್ಲಿ ನಟಿಸಿದ್ದು ಈಗ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದಾರೆ.
ಪ್ರೇರಣಾ ಕಂಬಂ (Prerana Kambam), ರಂಗನಾಯಕಿ ಸೀರಿಯಲ್ ಮತ್ತು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ,ನಟಿ ರಶ್ಮಿಕಾ ಮಂದಣ್ಣ ಅವರ ಗೆಳತಿಯೂ ಆಗಿರುವ ಇವರು ಕನ್ನಡ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಈಗಾಗಲೇ ಕಿರುತೆರೆಯಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.
ಇವರಲ್ಲದೇ ಕನ್ನಡದವರೇ ಆದ ಪೃಥ್ವಿರಾಜ್ ಶೆಟ್ಟಿ (Prithviraj Shetty) ಅವರು ಸಹಾ ಬಿಗ್ ಬಾಸ್ ಮನೆಗೆ ಎಂಟ್ರಿಯನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹದಿನಾಲ್ಕು ಜನ ಸ್ಪರ್ಧಿಗಳಲ್ಲಿ ಈ ಬಾರಿ ನಾಲ್ಕು ಜನ ಕನ್ನಡ ಮೂಲದವರಾಗಿರುವುದು ಬಹಳ ವಿಶೇಷವಾಗಿದೆ.
Bigg Boss Kannada: ಬಿಗ್ ಬಾಸ್ ಆರಂಭ, ಸೀರಿಯಲ್ ಗಳ ಮುಕ್ತಾಯ; ನಡುವೆಯೇ ಪ್ರೇಕ್ಷಕರಿಗೆ ಗುಡ್ ನ್ಯೂಸ್