Bigg Boss Telugu: ಭಾರೀ ನಿರೀಕ್ಷೆಗಳೊಂದಿಗೆ ಆರಂಭವಾದ ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ (Bigg Boss Telugu) ಎರಡು ವಾರಗಳು ಕಳೆದಿವೆ. ಆದರೆ ಈ ಬಾರಿ ಬಿಗ್ ಬಾಸ್ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುವ ರೇಂಜ್ ನಲ್ಲಿ ಇನ್ನೂ ಟೇಕಾಫ್ ಆಗಿಲ್ಲ ಎನ್ನುವುದು ಸಹಾ ವರದಿಯಾಗಿದೆ. ಸ್ಪರ್ಧಿಗಳಲ್ಲಿ ಜೋಶ್ ಇಲ್ಲ, ಗೇಮ್ ಸ್ಪಿರಿಟ್ ಕಾಣ್ತಾ ಇಲ್ಲ, ಎಲ್ಲರೂ ಸಪ್ಪೆ ಸಪ್ಪೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳು ಬರುತ್ತಿವೆ.
ಈ ವಾರ ಸಹಾ ಉತ್ತಮ ಟಿಆರ್ಪಿ ಬರೋದು ಡೌಟ್ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಂಡವು ಹೊಸ ಪ್ಲಾನ್ ಮಾಡಿದ್ದು, ವೈಲ್ಡ್ ಕಾರ್ಡ್ ಮೂಲಕ ಹಿಂದಿನ ಸೀಸನ್ ಗಳ ಫೈರ್ ಬ್ರಾಂಡ್ ಸ್ಪರ್ಧಿಗಳನ್ನು ಮತ್ತೊಮ್ಮೆ ಮನೆಯೊಳಕ್ಕೆ ಕಳಿಸಲು ಸಿದ್ಧತೆಗಳನ್ನು ನಡೆಸಿದೆ ಎನ್ನಲಾಗಿದೆ.
ಕಳೆದ ಸೀಸನ್ ನಲ್ಲಿ ಯಾರನ್ನೇ ಆಗಲೀ ಧೈರ್ಯದಿಂದ ಎದುರಿಸಿ ನಿಂತಿದ್ದ ಕನ್ನಡತಿ ಶೋಭಾ ಶೆಟ್ಟಿ (Shobha Shetty), ಸೀಸನ್ ಒಂದರಲ್ಲಿ ಫಿನಾಲೆ ತಲುಪಿದ್ದ ನಟಿ, ನಿರೂಪಕಿ ಹರಿ ತೇಜ (Hari Teja) ಮತ್ತು ಜಬರ್ದಸ್ತ್ ಲೇಡಿ ಕಮಿಡಿಯನ್ ರೋಹಿಣಿ (Rohini) ಅವರನ್ನು ವೈಲ್ಡ್ ಕಾರ್ಡ್ ಮೂಲಕ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಕಳಿಸಲಾಗುತ್ತಿದೆ ಎನ್ನುವ ಅಪ್ಡೇಟ್ ಹೊರ ಬಂದಿದೆ.
ವೈಲ್ಡ್ ಕಾರ್ಡ್ ಎಂಟ್ರಿ ಹೆಸರುಗಳನ್ನು ಕೇಳಿಯೇ ಶೋನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇವರ ಎಂಟ್ರಿಯಿಂದ ಆದರೂ ಬಿಗ್ ಬಾಸ್ ನಲ್ಲೊಂದು ಹೊಸ ಉತ್ಸಾಹ ಮತ್ತು ಚೈತನ್ಯ ಮೂಡಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು. ಶೋಭಾ ಶೆಟ್ಟಿ ಕಳೆದ ಬಾರಿ ಮಾಡಿದ ಸದ್ದು, ಸುದ್ದಿ ಅಷ್ಟಿಷ್ಟಲ್ಲ ಅನ್ನೋದು ಸಹಾ ಎಲ್ಲರಿಗೂ ಗೊತ್ತಿದೆ.
Jani Master: ಸ್ಟಾರ್ ಗಳನ್ನ ಕುಣಿಸಿದ್ದ ಜಾನಿ ಮಾಸ್ಟರ್ ಮೇಲೆ ಗಂಭೀರ ಆರೋಪ; 21 ವರ್ಷದ ಯುವತಿ ಮೇಲೆ